ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತು? ಗಂಗಾನದಿಯ ನಂತರ ಪವಿತ್ರವಾದ ನದಿ ಎಂದು ಭಾವಿಸುವ ನದಿಯೇ ಕಾವೇರಿ. ಹಾಗಾಗಿಯೇ ಕಾವೇರಿಯನ್ನು ದಕ್ಷಿಣ ಗಂಗೆ ಅಂತ ಕರೀತಾರೆ. ದೇವ ಗುರುವಾದ ಬೃಹಸ್ಪತಿ ತುಲಾರಾಶಿಯಲ್ಲಿ ಪ್ರವೇಶವಾದ್ದರಿಂದ ಕಾವೇರಿ ನದಿಗೆ ಪುಷ್ಕರವು ಪ್ರಾರಂಭವಾಗುತ್ತೆ. ತಮಿಳುನಾಡು ಕರ್ನಾಟಕ ರಾಜ್ಯದ ಪ್ರಜೆಗಳು ಕಾವೇರಿ ಪುಷ್ಕರದಲ್ಲಿ ಪುಣ್ಯ ಸ್ನಾನವನ್ನು ಆಚರಿಸಿ ಪುನೀತರಾಗುತ್ತಾರೆ. ನರ್ಮದಾ ನದಿ ತೀರದಲ್ಲಿ ತಪಸ್ಸು ಕುರುಕ್ಷೇತ್ರದಲ್ಲಿ ದಾನ ಕಾಶಿ ಕ್ಷೇತ್ರದಲ್ಲಿ ಮರಣಿಸಿದದರಿಂದ ಉಂಟಾಗುವ ಫಲವು ಕೇವಲ ಪುಷ್ಕರದಲ್ಲಿ ಸ್ನಾನ ಮಾಡೋದ್ರಿಂದ ಉಂಟಾಗುತ್ತೆ ಅಂತ ಪುರಾಣಗಳು ಹೇಳುತ್ತವೆ. ಕಾವೇರಿ ನದಿ ಹುಟ್ಟಿದ್ದು ಎಲ್ಲಿ? ಪೂರ್ವದಲ್ಲಿ ಬ್ರಹ್ಮಗಿರಿ ಪರ್ವತ ಪ್ರದೇಶದಲ್ಲಿ ಕಾವೇರು ಎಂಬ ರಾಜ ಇದ್ದಂತೆ. ಆತನಿಗೆ ಮಕ್ಕಳು ಇಲ್ಲದೇ ಇದ್ದುದ್ದರಿಂದ ಬ್ರಹ್ಮನ ಬಗ್ಗೆ ತಪಸ್ಸು ಮಾಡುತ್ತಾನೆ. ಬ್ರಹ್ಮನು ಆತನ ತಪಸ್ಸಿಗೆ ಮೆಚ್ಚಿ ಒಂದು ಮುದ್ದಾದ ಮಗುವನ್ನು ಪ್ರಸಾದಿಸುತ್ತಾನೆ.

ಕಾವೇರಿ ಅನ್ನೋ ಹೆಸರಿಟ್ಟು ಆ ಮಗುವನ್ನ ಅತ್ಯಂತ ಮುದ್ದಾಗಿ ಸಾಕುತ್ತಾನೆ. ಆ ಮಗುವಿಗೆ ಯವ್ವನ ಬಂದ್ ತಕ್ಷಣ ಆಕೆಯನ್ನು ಅಗಸ್ತ್ಯ ಮಹರ್ಷಿ ಬಂದು ವಿವಾಹ ಮಾಡ್ಕೋತಾನೆ. ವಿವಾಹ ಸಮಯದಲ್ಲಿ ತನ್ನ ಎಂದಿಗೂ ಬಿಟ್ಟು ಒಂಟಿಯಾಗಿ ಇರಬಾರದು ಅಂತ ಅಗಸ್ತ್ಯ ನಿಗೆ ಮಾತು ಕೊಡುತ್ತಾಳೆ ಕಾವೇರಿ ಅದಕ್ಕೆ ಅಂಗೀಕರ ಮಾಡಿದ. ಅಗಸ್ತ್ಯನು 1 ದಿನ ತನ್ನ ಶಿಷ್ಯರಿಗೆ ತತ್ತ್ವಶಾಸ್ತ್ರ ರಹಸ್ಯ ಗಳನ್ನ ಭೇದಿಸುವ ಸಲುವಾಗಿ ಶಿಷ್ಯರನ್ನ ದೂರವಾಗಿ ಕರಕೊಂಡು ಹೋಗಿ ಪಾಠವನ್ನ ಹೇಳಿ ಕೊಡ್ತಾನೆ. ಪತಿ ತನ್ನ ಬಿಟ್ಟು ಹೋಗಿದ್ದರಿಂದ ಕಾವೇರಿಯು ಕೋಪದಿಂದ ಒಂದು ನದಿಯಲ್ಲಿ ಧುಮುಕುತ್ತಾಳೆ. ಆದರೆ ಆಕೆಯು ಬ್ರಹ್ಮನ ಆಶೀರ್ವಾದ ಇರುವುದರಿಂದ ಮರಣ ಹೊಂದಿದಕ್ಕಿಂತ ಮುಂಚೆ ನದಿಯಾಗಿ ಮಾರ್ಪಟಾಗಿ ಬ್ರಹ್ಮಗಿರಿ ಪರ್ವತದ ಮೇಲೆ ಪ್ರವಹಿಸುತ್ತಾ ಸಾಗುತ್ತಾಳೆ ಆಕೆನೆ ಕಾವೇರಿ ನದಿಯಾಗಿ ಪ್ರಸಿದ್ಧಿ ಹೊಂದಿದ್ದಾಳೆ.

ಮತ್ತೊಂದು ಕತೆ ಏನಪ್ಪ ಅಂದ್ರೆ ತನ್ನ ಬಿಟ್ಟಿರೋದಕ್ಕೆ ಆಗುವುದಿಲ್ಲ ಅಂತ ಹೇಳಿದ ಪತ್ನಿಯನ್ನ ಮನ್ನಿಸಿದ ಅಗಸ್ತ್ಯನು ಆಕೆಯನ್ನು ಜಲ ರೂಪದಲ್ಲಿ ಮಾರ್ಪಟು ಮಾಡಿ ತನ್ನ ಕಮಂಡಲದಲ್ಲಿ ಇಟ್ಟುಕೊಂಡು ಯಾವಾಗಲೂ ತನ್ನ ಹತ್ತಿರನೆ ಇರಿಸಿಕೊಂಡಿದ್ದ ಅಂತ ಕೂಡ ಹೇಳಿದ್ದಾರೆ. ಆದರೆ ಒಮ್ಮೆ ಈ ಪ್ರದೇಶದಲ್ಲಿ ಮಳೆ ಇಲ್ಲದೇ ಜಲಾಶಯ ವೆಲ್ಲಾ ಆವಿಯಾಯಿತು.ಬೆಳೆಗಳು, ಬೆಳೆಯದೆ ಪ್ರಜೆಗಳು ವಿಘ್ನೇಶ್ವರನನ್ನು ಪ್ರಾರ್ಥಿಸಿದರೆ ವಿನಾಯಕನು ಹಸುವಿನ ರೂಪದಲ್ಲಿ ಗಸ್ತಿನ ಹತ್ತಿರ ಬಂದು ಹುಲ್ಲನ್ನ ತಿನ್ನೋ ಹಾಗೆ ಮಾಡಿ ಕಮಂಡಲವನ್ನು ಕೆಳಗೆ ಬೀಳುವ ಹಾಗೆ ಮಾಡುತ್ತಾನೆ. ಅದರಿಂದ ಕಾವೇರಿ ನದಿ ರೂಪವಾಗಿ ಅಲ್ಲಿಂದ ತನ್ನ ಹುಟ್ಟಿದ ಸ್ಥಳವಾದ ಬ್ರಹ್ಮಗಿರಿ ವರೆಗೆ ಪ್ರವಹಿಸುತ್ತದೆ.

ಅದರಿಂದ ಆಯಾ ಪ್ರದೇಶ ವೆಲ್ಲಾ ಸಸ್ಯ ಶ್ಯಾಮಲವಾಗುತ್ತೆ. ಕರ್ನಾಟಕದಲ್ಲಿನ ಪಶ್ಚಿಮದಲ್ಲಿರುವ ಕೊಡಗು ಜಿಲ್ಲೆಯಲ್ಲಿನ ತಲಕಾವೇರಿ ಅನ್ನೋ ಪ್ರದೇಶದಲ್ಲಿ ಕಾವೇರಿ ಹುಟ್ಟಿ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಪ್ರವಹಿಸುತ್ತದೆ. ಹೇಮಾವತಿ, ಶಿಮ್ಶಾ, ಅರ್ಕಾವತಿ, ಕುಂಭಿನಿ ಭವಾನಿ, ನೋಯಲ್, ಅಮರಾವತಿ ನದಿ ಗಳು, ಕಾವೇರಿಯ ಉಪನದಿಗಳು, ತಲಕಾವೇರಿ, ಕುಶಾಲನಗರ, ಶ್ರೀರಂಗಪಟ್ಟಣ, ಕಾವೇರಿ ಪ್ರವಾಹ ಇದ್ದಾಳೆ.

Leave a Reply

Your email address will not be published. Required fields are marked *