ನಮ್ಮ ಮನೆಯಲ್ಲಿ ಹಿರಿಯರು ಇಲ್ಲವೇ ಯಾರಾದರೂ ತೀರಿ ಹೋದಾಗ ಅವರನ್ನ ಹೆಚ್ಚು ನೆನಪಿಸಿಕೊಳ್ಳುವುದು ಹೆಚ್ಚು. ಆದರೆ ಪೂರ್ವಜರ ಗೌರವಾರ್ಥವಾಗಿ ಅವರ ಚಿತ್ರವನ್ನ ಗೋಡೆಯ ಮೇಲೆ ನೇತು ಹಾಕುತ್ತೇವೆ. ನೀವು ಎಷ್ಟೇ ಆಧುನಿಕವಾಗಿದ್ದರೂ ಪರವಾಗಿಲ್ಲ. ಅವರು ತೀರಿಹೋದ ನಂತರ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಹೃದಯದಲ್ಲಿ ನೀವು ಅವರಿಗೆ ನೀಡಬೇಕಾದ ಸ್ಥಾನವನ್ನು ನೀಡಬೇಕು. ಇದಕ್ಕೂ ಸಹ ನಿಯಮಗಳು ಇವೆ. ಈ ನಿಯಮಗಳನ್ನು ಪಾಲಿಸಿದೆ ಇದ್ದರೆ ಅದರ ಕೆಟ್ಟ ಪರಿಣಾಮಗಳನ್ನು ಅನುಭವಿಸ ಬೇಕಾಗುತ್ತದೆ. ಮೊದಲಿಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಅವರ ನಿರ್ಗಮನದ ನಂತರ ಈ ಸಮಸ್ಯೆಗಳು ಇದ್ದಕ್ಕಿದ್ದಂತೆ. ಹೀಗೆ ಪ್ರಾರಂಭವಾದವು ಎನ್ನುವಂತಹ ಪ್ರಶ್ನೆಗಳು ನಮಗೆ ಬರುತ್ತವೆ. ಇದಕ್ಕೆ ಇಲ್ಲಿದೆ ಪರಿಹಾರ. ಹಾಗಾದ್ರೆ ಆ ನಿಯಮಗಳನ್ನ ತಿಳಿದುಕೊಳ್ಳೋಣ. ಮೊದಲನೆಯದಾಗಿ ಪೂರ್ವಜರ ಫೋಟೋವನ್ನ ಅಪ್ಪಿತಪ್ಪಿಯೂ ಮಲಗುವ ಕೋಣೆ, ಅಡುಗೆ ಮನೆ ಅಥವಾ ಡ್ರಾಯಿಂಗ್ ರೂಮ್ನಲ್ಲಿ ಇಡಬಾರದು.
ಇದು ಮನೆಯಿಂದ ಸಂತೋಷ ಮತ್ತು ಶಾಂತಿ ಯನ್ನು ದೂರವಾಗಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಸಕ್ರಿಯವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಹಾಗಾಗಿ ಅಡುಗೆ ಮನೆ ಡ್ರಾಯಿಂಗ್ ರೂಮ್ ಹಾಗು ಮಲಗುವ ಕೋಣೆಯಲ್ಲಿ ಇಡಬಾರದು. ಇದು ಮನೆಯಲ್ಲಿ ವಾಸಿಸುವವರ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಜಗಳ ವಾಗುವ ಸಾಧ್ಯತೆ ಇರುತ್ತದೆ. ಇನ್ನು ಎರಡನೆಯದಾಗಿ ಧರ್ಮಗ್ರಂಥಗಳ ಪ್ರಕಾರ ಪೂರ್ವಜರ ಫೋಟೋಗಳನ್ನು ಎಂದಿಗೂ ಪೂಜಾ ಕೋಣೆಯಲ್ಲಿ ಇಡಬಾರದು ಎಂದು ಹೇಳಲಾಗುತ್ತೆ. ಅವರು ಎಷ್ಟೇ ಪೂಜೆ ರಾಗಿದ್ದರು ಪರವಾಗಿಲ್ಲ. ಅವರ ಫೋಟೋಗಳನ್ನು ದೇವರ ಮನೆಯಲ್ಲಿ ಇಡಬಾರದು.ಅಶುಭ ಎಂದು ಪರಿಗಣಿಸ ಲಾಗುತ್ತೆ.
ಹಾಗಾಗಿ ನೀವು ಮನೆಯಲ್ಲಿ ಪೂಜಾ ಸ್ಥಳ ವನ್ನ ಹೊಂದಿದ್ದಾರೆ. ಅಪ್ಪಿತಪ್ಪಿಯೂ ಈ ಫೋಟೋಗಳನ್ನ ದೇವರ ಪಕ್ಕ ಇಡಬಾರದು. ಈ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ಬಿಟ್ಟು ಬಿಡಿ ಹಾಗು ಆ ಫೋಟೋವನ್ನು ತೆಗೆದು ಬೇರೆಡೆ ಸ್ಥಳಾಂತರಿಸಿ.ಇನ್ನು ಮೂರನೆಯದಾಗಿ ಕುಟುಂಬದ ಸದಸ್ಯರ ಜೊತೆಗೆ ಪೂರ್ವಜರ ಚಿತ್ರವನ್ನ ಆಕಸ್ಮಿಕ ವಾಗಿಯು ಹಾಕಬೇಡಿ. ನೀವು ಹೀಗೆ ಮಾಡಿದರೆ ಮನೆಯಲ್ಲಿ ವಾಸಿಸುವ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತಾರೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯು ತನ್ನ ಪ್ರಭಾವ ವನ್ನು ಬೀರುತ್ತದೆ ಹಾಗೂ ಸಂಕಷ್ಟದ ಪರಿಸ್ಥಿತಿಗೆ ನಿಮ್ಮನ್ನ ತರುತ್ತದೆ. ಹಾಗಾಗಿ ಕುಟುಂಬದ ಸದಸ್ಯರ ಜೊತೆಗೆ ಪೂರ್ವಜರ ಫೋಟೋ ವನ್ನ ಎಂದಿಗೂ ಹಾಕಬಾರದು. ಹಾಗಾದರೆ ಪೂರ್ವಜರ ಫೋಟೋವನ್ನು ಎಲ್ಲಿ ಇಡ ಬೇಕು.
ಧರ್ಮಗ್ರಂಥಗಳ ಪ್ರಕಾರ ಸತ್ತ ವ್ಯಕ್ತಿಯ ಚಿತ್ರವನ್ನ ಮನೆಯ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ಹಾಕಬಹುದು. ದಕ್ಷಿಣ ಕನ್ನ ಪೂರ್ವಜರ ದಿಕ್ಕು ಎಂದು ಹೇಳಲಾಗುತ್ತೆ. ಇದು ಯಮನ ದಿಕ್ಕು ಎಂದು ಸಹ ಕರೆಯಲಾಗುತ್ತದೆ. ಪೂರ್ವಜರಿಂದ ಆಶೀರ್ವಾದವನ್ನು ಪಡೆಯಲು ನೀವು ಸಂಜೆಯ ಸಮಯದಲ್ಲಿ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಬೇಕು ಅಥವಾ ಪ್ರತಿ ಅಮಾವಾಸ್ಯೆಯ ದಿನದಂದು ನೀವು ಇದನ್ನು ಮಾಡಬಹುದು. ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವ ಮೂಲಕ ಪೂರ್ವಜರ ಆಶೀರ್ವಾದವನ್ನು ನೀವು ಪಡೆಯಬಹುದು. ಅವರ ಆಶೀರ್ವಾದವು ನಿಮ್ಮ ಮೇಲೆ ಸದಾ ಇರುತ್ತದೆ.