ಹಲವರಿಗೆ ಪ್ರಾಣಿಗಳನ್ನ ಸಾಕುವುದು ಎಂದರೆ ತುಂಬಾ ಇಷ್ಟ ಮನೆಯಲ್ಲಿ ಒಂದು ಪ್ರಾಣಿ ಇರಲೇಬೇಕು. ಹಾಗೆ ನಾಯಿಯನ್ನು ಸಾಕುವುದು ಸಾಮಾನ್ಯವಾಗಿದೆ. ಸುಮಾರು ಎಲ್ಲರ ಮನೆಯಲ್ಲಿಯೂ ನಾಯಿಯನ್ನು ಸಾಕುತ್ತಾರೆ. ಹಾಗೆ ನಾಯಿ ಕೂಡ ತಮ್ಮ ಮಾಲೀಕರನ್ನ ಪ್ರೀತಿಯಿಂದ ನೆಕ್ಕುತ್ತದೆ. ಬಹಳ ಜನರು ನಾಯಿಯಿಂದ ನೆಕ್ಕಿಸಿಕೊಳ್ಳುತ್ತಾರೆ ಆದರೆ ಕೆಲವರಿಗೆ ಮಾತ್ರ ಇದು ಅಸಹ್ಯವೆನಿಸುತ್ತದೆ ಸ್ವಚ್ಛತೆ ಮತ್ತು ಆರೋಗ್ಯ ದೃಷ್ಟಿಯಲ್ಲಿ ಇದು ತಪ್ಪು ಅಂತ ಭಾವಿಸುತ್ತಾರೆ.
ಕೆಲವೊಂದು ವರದಿಯ ಪ್ರಕಾರ ಏ ನಾಯಿಗಳು ಮಾಲೀಕರನ್ನ ನೆಕ್ಕುವುದು ತುಂಬಾ ಆರೋಗ್ಯಕರ ಎಂದು ಡಾ ಜೇಮ್ಸ್ ಕಿಂದ್ರೋಸ್ ಅಭಿಪ್ರಾಯಪಟ್ಟಿದ್ದಾರೆ. ಹೌದು ಇವರು ಹೇಳುವ ಪ್ರಕಾರ ನಾಯಿಯಿಂದ ನೆಕ್ಕಿಸಿಕೊಳ್ಳುವುದು ತುಂಬಾ ಆರೋಗ್ಯದಾಯಕವಂತೆ. ಅಷ್ಟೇ ಅಲ್ಲದೆ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ನಾಯಿಯಿಂದ ನೆಕ್ಕಿಸಿಕೊಳ್ಳುವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಅಂತ ಡಾಕ್ಟರ್ ಜೇಮ್ಸ್ ಅವರು ಹೇಳಿದ್ದಾರೆ.
ಕೆಲವು ಕಡೆ ನಾಯಿಯನ್ನು ತಮ್ಮ ಮೊಗ್ಗುನಲ್ಲೇ ಮಲಗಿಸಿಕೊಳ್ಳುತ್ತಾರೆ ಅಷ್ಟು ಪ್ರೀತಿಯಿಂದ ನಾಯಿಯನ್ನು ಸಾಕಿರುತ್ತಾರೆ. ತಾವು ಊಟ ಮಾಡಿದ ಪ್ಲೇಟ್ ನಲ್ಲೆ ನಾಯಿಗೂ ಕೂಡ ಊಟ ಮಾಡಿಸುತ್ತಾರೆ ಇಂತಹ ಅದೆಷ್ಟೋ ಕುಟುಂಬಗಳಿವೆ ನಾಯಿಯನ್ನು ಮನುಷ್ಯರನ್ಕಿಂತಲೂ ಜಾಸ್ತಿ ಪ್ರೀತಿ ಮಾಡುತ್ತಾರೆ. ಮಕ್ಕಳಿಗಿಂತ ಜಾಸ್ತಿ ನೋಡಿಕೊಳ್ಳುತ್ತಾರೆ ಇದು ಹೊರದೇಶಗಳಲ್ಲಿ ಹೆಚ್ಚು.
ಹಾಗೆಯೇ ನಾಯಿ ಮತ್ತು ಮನುಷ್ಯರು ಮುತ್ತು ಕೊಡ್ತರೆ 80 ಮಿಲಿಯನ್ ಬ್ಯಾಕ್ಟೀರಿಯಾಗಳು ಹಂಚಿಕೆಯಾಗುತ್ತವೆ ಎಂದು ಡಾರ್ಕ್ ಮ್ಯಾಟರ್ ದಿ ನ್ಯೂ ಸೈನ್ಸ್ ಆಫ್ ದಿ ಮೈಕ್ರೋ ಬಯೋಮೆನಲ್ಲಿ ವಿವರಿಸಲಾಗಿದೆ. ನಿಜವಾಗಲೂ ಭಾರತದ ಜನತೆಗೆ ಎಂತಹ ವಿಚಿತ್ರ ಅನ್ನುವ ಒಂದು ಸಂಗತಿಯಿದು. ಹೌದು ಸ್ನೇಹಿತರೆ, ಆದರೂ ಇದು ನಿಜವಾಗಿದೆ ಅಂತ ಡಾಕ್ಟರ್ ಜೇಮ್ಸ್ ಅವರು ಹೇಳಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.