ರಾಜ್ಯ ಸರ್ಕಾರವು ಗೃಹ ಲಕ್ಷ್ಮಿಯರಿಗೆ ಗೃಹ ಲಕ್ಷ್ಮಿ ಯೋಜನೆಯ ದೊಡ್ಡ ಗಿಫ್ಟ್ ಕೊಟ್ಟಿದೆ ಅಂತ ಹೇಳಬಹುದು. ಹೌದು, ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಡಿ ಈಗಾಗಲೇ 2000 ರೂಪಾಯಿಯನ್ನ ರಾಜ್ಯ ಸರ್ಕಾರ ನೀಡ್ತಿದೆ. ಈಗ ಅದೇ ದುಡ್ಡನ್ನ ಮಹಿಳೆಯರು ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡುವ ಬೊಂಬಾಟ್ ಸ್ಕೀಂನ ತಯಾರಿ ಮಾಡಲು ರಾಜ್ಯ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಹೌದು, ಕೇರಳ ಮಾದರಿಯ ಚಿಟ್ಫಂಡ್ನ ಜಾರಿ ಮಾಡಲು ಸರ್ಕಾರ ಮುಂದಾಗಿದ್ದು, ಎಂಎಸ್ಐಎಲ್ನಿಂದ ಏಪ್ರಿಲ್ನಲ್ಲಿ ಒಂದು ನಯಾ ಸ್ವರೂಪದ ಚಿಟ್ಫಂಡ್ ರಾಜ್ಯಾದ್ಯಂತ ಜಾರಿಯಾಗಲಿದೆಯಂತೆ.ಪ್ರಮುಖವಾಗಿ ಮಹಿಳೆಯರನ್ನು ಈ ಚಿಟ್ಫಂಡ್ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಇನ್ನು ಗ್ಯಾರಂಟಿ ಸ್ಕೀಮ್ ಗಳ ಅನಾವರಣದ ಬಳಿಕ ಕರ್ನಾಟಕ ಸರ್ಕಾರವು ಉಳಿತಾಯ ಯೋಜನೆಗೆ ಹೊಸ ಪ್ಲಾನ್ ಮಾಡಿಕೊಂಡಿದೆ. ಎಂ ಎಸ್ಐಎಲ್ ಚಿಟ್ಫಂಡ್ ಮೂಲಕ ಜನರು ಹಣ ಉಳಿಸಲು ಸರ್ಕಾರ ಒಂದು ಹೊಸ ರೂಲ್ಸ್ ಜಾರಿಗೆ ತರ್ತಾ ಇದೆ ಅಂತ ಹೇಳಬಹುದು. ಇನ್ನು ಜನರ ಹಣ ಉಳಿತಾಯ ಮಾಡುವ ಯೋಜನೆ ಇದಾಗಿದ್ದು, ಸರ್ಕಾರ ಈಗಾಗಲೇ ಈ ಯೋಜನೆ ಜಾರಿ ತರಲು ಚಿಂತನೆ ನಡೆಸಿದೆಯಂತೆ. ಎಂಎಸ್ಐಎಲ್ನಲ್ಲಿ 10,000 ವರೆಗೂ ಚಿಟ್ಫಂಡ್ ವ್ಯವಹಾರ ನಡೆಸ ಬಹುದಾಗಿದೆ ಅಂತ ಸರ್ಕಾರ ಹೇಳಿದ್ದು ಗ್ಯಾರಂಟಿ ಗಿಫ್ಟ್ ಕೊಟ್ಟ ಸರ್ಕಾರದಿಂದ ಇದು ಒಂದು ಹೊಸ ರೀತಿಯ ಪ್ಲಾನ್ ಅಂತ ಹೇಳ ಬಹುದು.
ಹೌದು, ಏಪ್ರಿಲ್ ನಲ್ಲಿ ಒಂದು ಚಿಟ್ಫಂಡ್ ರಾಜ್ಯಾದ್ಯಂತ ಜಾರಿಯಾಗಲಿದ್ದು, ಪ್ರಮುಖವಾಗಿ ಮಹಿಳೆಯರನ್ನ ಈ ಚಿಟ್ಫಂಡ್ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಿಂದ ಹಣ ಬರ್ತಿರೋದ್ರಿಂದ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಚಿಟ್ಫಂಡ್ ಉನ್ನತೀಕರಣಕ್ಕೆ ಇದೀಗ ಹೊಸ ಪ್ಲಾನ್ ಮಾಡಲಾಗಿದ್ದು, ರಾಜ್ಯದಲ್ಲಿ ಬಹುತೇಕ ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆಗಳಿಂದ ಹಣ ಬರ್ತಾ ಇದೆ. ಈಗ ಉಳಿತಾಯಕ್ಕೆ ಹೆಚ್ಚು ಅವಕಾಶಗಳು ಇರೋದ್ರಿಂದ ಎಂಎಸ್ಐಎಲ್ ಚಿಟ್ ಫಂಡ್ನಲ್ಲಿ ಗುಂಪುಗಳಿಗೆ ತಕ್ಕಂತೆ ಶೇಕಡಾ ಹದಿಮೂರ ರಿಂದ ಹದಿನೈದರವರಿಗೂ ಲಾಭ ದೊರೆಯುತ್ತದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ರೋದ್ರಿಂದ ಹೂಡಿಕೆಯ ಮೊತ್ತಕ್ಕೆ ಖಾತ್ರಿ ಕೂಡ ಇರುತ್ತೆ.
ಗೃಹ ಲಕ್ಷ್ಮಿ ಯೋಜನೆಯಿಂದ ದೊರೆತಿರುವ ಹಣವನ್ನ ಮಹಿಳೆಯರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ತುರ್ತು ಬಳಕೆ ಉದ್ದೇಶಗಳಿಗೂ ಕೂಡ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು ಅನ್ನೋದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ಈಗಾಗಲೇ ಕೇರಳದಲ್ಲಿ 40,000 ಕೋಟಿ ರೂಪಾಯಿ ವಹಿವಾಟು ನಡೆಸಿದ್ದು, ಕರ್ನಾಟಕದಲ್ಲಿ ಸದ್ಯ ಚಿಟ್ ಫಂಡ್ ಉದ್ಯಮ 300 ಕೋಟಿ ರೂಪಾಯಿ ಉದ್ಯಮವನ್ನು ನಡೆಸುತ್ತಿದೆ. ಹೀಗಾಗಿ 1000 ಕೋಟಿ ರೂಪಾಯಿ ಲಾಭದಾಯಕವಾಗಿ ಮಾಡುವ ಉದ್ದೇಶ ದಿಂದ ಸರ್ಕಾರ ಇದೀಗ ಗೃಹ ಲಕ್ಷ್ಮಿ ಗೋಸ್ಕರ ಒಂದು ಹೊಸ ಪ್ಲಾನ್ ಮಾಡ್ಕೊಂಡಿದೆ ಅಂತ ಹೇಳಬಹುದು.ಇನ್ನು ಗ್ರಾಮೀಣ ಭಾಗದಲ್ಲಿ ಇಂತಹ ಸ್ವ ಸಹಾಯ ಸಂಘಗಳ ಮೂಲಕ ಚಿಟ್ಫಂಡ್ ಉದ್ಯಮ ಬಲಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಚಿತ್ರಣ ಅರ್ಥ ವನ್ನು ಅರ್ಥ ಮಾಡಿಕೊಂಡ ನಂತರ ನೀವು ಚಿಟ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು.
ಇನ್ನು ಇದೀಗ ಹಣವನ್ನು ಸಂಗ್ರಹಿಸಿದ ನಂತರ ಹರಾಜು ಅಥವಾ ಲಾಟರಿ ವ್ಯವಸ್ಥೆ ಮೂಲಕ ಒಬ್ಬ ವ್ಯಕ್ತಿಯ ಆಯ್ಕೆ ಮಾಡಿ ಆ ಹಣವನ್ನ ಆ ವ್ಯಕ್ತಿಗೆ ನೀಡಲಾಗ್ತಿದೆ. ಹೌದು, ಚಿಟ್ ಫಂಡ್ ಯೋಜನೆಯ ಭಾಗವಾಗಿ ಸಮಾನ ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳ ಬೇಕಾಗುತ್ತೆ. ಒಂದಿಷ್ಟು ಟೈಮ್ವರೆಗೂ ಕೂಡ ನೀವು ಹಣವನ್ನು ಸಂಗ್ರಹಣೆ ಮಾಡಿ ಅದಾದ ನಂತರ ನೀವು ಚೀಟಿ ಎತ್ತುವ ಅಥವಾ ಹರಾಜು ಪ್ರಕ್ರಿಯೆ ಮಾಡುವ ಮೂಲಕ ಆ ಹಣವನ್ನ ಯಾವ ವ್ಯಕ್ತಿಗೆ ಅವಶ್ಯಕತೆ ಇರುತ್ತ ಆತನಿಗೆ ಕೊಡುವ ಮೂಲಕ ಇತರ ಸದಸ್ಯರಿಗೆ ಬಡ್ಡಿಯ ಲಾಭಾಂಶವನ್ನು ಪಡೆಯುವ ಉದ್ದೇಶವನ್ನು ಈ ಚಿಟ್ ಫಂಡ್ ಯೋಜನೆ ಹೊಂದಿದೆ ಅಂತ ಹೇಳಬಹುದು.