ಸರ್ಕಾರವು ದೇಶದಲ್ಲಿ ಹಸಿರು ಇಂಧನವನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಲು ಸಬ್ಸಿಡಿ ನೀಡುತ್ತಿದೆ. ಯೋಜನೆಗಳಿಗೆ ಉತ್ತೇಜನ ನೀಡಲು ಮತ್ತು ಸೌರ ಫಲಕಗಳ ಹೆಚ್ಚಿನ ವೆಚ್ಚವನ್ನು ಸಮ ಮಾಡಲು ಮೇಲ್ಛಾವಣಿಯ ಸೌರ ಕಾರ್ಯಕ್ರಮದ ಅಡಿಯಲ್ಲಿ ವಸತಿ ವಲಯಕ್ಕೆ ನಿರ್ದಿಷ್ಟ ಹಣ ಕೇಂದ್ರ ಹಣಕಾಸು ನೆರವನ್ನು ಸರ್ಕಾರ ಹೆಚ್ಚಿಸಿದೆ. ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಯಾವುದೇ ನಾಗರಿಕರು ಪಡೆಯಬಹುದು.
ಇದು ಒಂದು ರೀತಿಯಲ್ಲಿ ನೋಡಿದರೆ ಸೌರ ಫಲಕಗಳನ್ನು ಹಾಕಿದವರಿಗೆ ಬಹಳಷ್ಟು ಲಾಭದಾಯಕವಾಗುವ ಸಂಗತಿ ಬರಲಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ 3 kW ವರೆಗಿನ ಸಾಮರ್ಥ್ಯದ ಬೆಂಬಲವನ್ನು ಸಾಮಾನ್ಯ ರಾಜ್ಯಗಳಿಗೆ ಪ್ರತಿ kW ಗೆ ರೂ 18,000 ಕ್ಕೆ ಏರಿಸಲಾಗಿದೆ, 23.4% ಹೆಚ್ಚಾಗಿದೆ, ಹಾಗೆ ನೋಡಿದರೆ ಹಿಂದಿನ kW ಗೆ 14,588 ರೂ.3kW ಗಿಂತ ಹೆಚ್ಚಿನ ಮತ್ತು 10 kW ಸಾಮರ್ಥ್ಯಕ್ಕೆ, ಸಹಾಯವನ್ನು ರಾಜ್ಯಗಳಿಗೆ ಪ್ರತಿ kW ಗೆ 7,294 ರಿಂದ 9,000 ರೂ. ಗೆ ಹೆಚ್ಚಿಸಲಾಗಿದೆ.
ಈ ಮೇಲ್ಚಾವಣಿ ಯೋಜನೆಗೆ ಸರಿಸುಮಾರು ಒಂದು ವರ್ಷದ ಹಿಂದೆ ಈ ಯೋಜನೆಗೆ ತಕ್ಕ ಹಾಗೆ ಹಣಕಾಸಿನ ವಿಷಯದಲ್ಲಿ ಮಾನದಂಡನೆಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಅನ್ವೇಷಸುವ ಹೊಸ ದರವು ಜನವರಿ 26 ನಂತರ ಹಾಗೂ ಜನವರಿ 5ರ ನಂತರ ಮಾಡುವ ಪ್ರತಿಯೊಂದು ಬಿಡ್ ಗಳಿಗೆ ಈ ದರ ಅನ್ವೇಷಿಸುತ್ತದೆ. ಹಾಗೆ ಪರಿಸರ ಸಮಿತಿಯು ನಡೆಸಿದಂತಹ ಸರ್ವೆನಲ್ಲಿ ನಮ್ಮ ಇಡೀ ಭಾರತದಲ್ಲಿ 637 ಗಿಗಾವಾಟ್ ಸೌರಶಕ್ತಿ ಚಾವಣಿಯ ಮೇಲೆ ಕನಿಷ್ಠ 25 ಕೋಟಿ ಜನ ಹಾಕಬಹುದು. ಅಷ್ಟು ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ.
ಸದ್ಯಕ್ಕೆ ನಾವು 2.7 ಗಿಗಾವಾಟ್ ಸೌರ ಶಕ್ತಿಯನ್ನು ನಾವು ಮನೆಯಲ್ಲಿ ಬಳಸುತ್ತಿದ್ದೇವೆ. ಈಗಾಗಿ ನಾವು ಸಬ್ಸಿಡಿ ಯೋಜನೆಯ ಲಾಭವನ್ನು ಪಡೆದುಕೊಂಡು ಈ ಮೇಲ್ಚಾವಣಿ ಸೌರ ವಿದ್ಯುತ್ ನಿಂದ ನಾವು ಉತ್ಪತ್ತಿ ಮಾಡುವಂತಹ ವಿದ್ಯುತ್ ಅನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ಮಾರಿ ಬಹಳಷ್ಟು ಹಣವನ್ನು ಗಳಿಸಬಹುದು.