ಮನುಷ್ಯನಿಗೆ ತನ್ನ ಜೀವನದಲ್ಲಿತನ್ನದೇ ಸ್ವಂತ ಮನೆ ಕಟ್ಟಬೇಕು ಎಂಬ ಹಂಬಲ ಬಹಳಷ್ಟು ಇರುತ್ತದೆ. ಹಾಗಾಗಿ ಹಗಲು ರಾತ್ರಿ ಎನ್ನದೆ ದುಡಿದು ಮನೆ ಕಟ್ಟಲು ತನ್ನ ಕನಸನ್ನು ಈಡೇರಿಸಲು ಮುಂದಾಗುತ್ತಾನೆ ಆದರೆ ಕೆಲವೊಂದು ಪರಿಸ್ಥಿತಿಯಲ್ಲಿ ಆರ್ಥಿಕ ಸಮಸ್ಯೆಯಿಂದ ಮನೆ ಕಟ್ಟಲು ಸಾಧ್ಯವಾಗದೇ ಇರಬಹುದು ಇಂತಹ ಸಂದರ್ಭದಲ್ಲಿ ನಮ್ಮ ಕೇಂದ್ರ ಸರ್ಕಾರ ಇಂತಹ ಜನರಿಗೆ ಸಹಾಯ ಮಾಡಲು ಆರ್ಥಿಕ ಸಹಾಯ ಹಸ್ತ ನೀಡುತ್ತದೆ ಹೌದು ಈ ಸಹಾಯ ನಿಮಗೂ ಬೇಕು ಎಂದರೆ ಈ ಮಾಹಿತಿ ನಿಮಗೆ ಬಹಳಷ್ಟು ಉಪಯೋಗವಾಗುತ್ತದೆ ಇದರ ವಿಧಾನವನ್ನು ಕೂಡ ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ.
ಹಾಗಾದರೆ ಬನ್ನಿ ನೋಡೋಣ ಮೊದಲಿಗೆ ಈ ಯೋಜನೆಯ ಫಲವನ್ನು ನೀವು ಪಡೆದುಕೊಳ್ಳಬೇಕು ಎಂದರೆ ರಾಜೀವ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಮನೆಯನ್ನು ಕಟ್ಟಲು ಅರ್ಜಿ ಸಲ್ಲಿಬೇಕು. ಈ ಅರ್ಜಿ ಸಲ್ಲಿಕೆ ಕೆಲವೊಂದು ಜನರಿಗೆ ಗೊತ್ತಿಲ್ಲ. ಇದರ ಜೊತೆಗೆ ಅರ್ಜಿಯನ್ನು ಸಲ್ಲಿಸಲು ಯಾವ್ಯಾವ ದಾಖಲಾತಿಗಳು ಬೇಕು ಎಂಬುದನ್ನು ನೋಡೋಣ ಬನ್ನಿ. ಒಂದು ವೇಳೆ ನೀವು ದಾಖಲಾತಿಗಳನ್ನು ನೀಡಿ ನಿಮ್ಮ ಯೋಜನೆ ಅನುಮೋದಿಸಿತ್ತು ಎಂದರೆ ನಿಮಗೆ ಒಂದೇ ಸಲ ಹಣ ಬರುವುದಿಲ್ಲ. ಬದಲಾಗಿ ನಿಮಗೆ ಹಂತ ಹಂತವಾಗಿ ನಿಮ್ಮ ಕೈಗೆ ಹಣ ಸಿಗುತ್ತದೆ.
ಆದರೆ ಒಂದನ್ನು ನೆನಪಿಡಿ ಈ ಹಣ ನಿಮಗೆ ಗ್ರಾಮ ಪಂಚಾಯಿತಿಯಿಂದ ಸಿಗುತ್ತದೆ. ನಿಮ್ಮ ಊರಿನ ಪ್ರತಿಯೊಂದು ಪಂಚಾಯಿತಿಗೂ ಕೂಡ ನೂರು ಮನೆ ಕಟ್ಟಲು ಧನ ಸಹಾಯ ಮೇಲಿನ ಸರ್ಕಾರದಿಂದ ಒದಗಿಸಿಕೊಡಲಾಗುತ್ತದೆ ಆದರೆ ಇದರ ಫಲ ನೀವು ತೆಗೆದುಕೊಳ್ಳಬೇಕು. ಈಗ ನಿಮಗೆ ಯೋಜನೆಗೆ ಯಾವ ದಾಖಲಾತಿಗಳು ಬೇಕು ಎಂದರೆ ಮೊದಲಿಗೆ ಬಿ ಪಿ ಎಲ್ ಪಡಿತರ ಚೀಟಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಹ ಬೇಕಾಗುತ್ತದೆ. ಅರ್ಜಿ ಸಲ್ಲಿಸುವರ ಆಧಾರ ಕಾರ್ಡ್ ,ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಬ್ಯಾಂಕ್ ಅಕೌಂಟನ ಪಾಸಬುಕ್ ಪ್ರತಿ ಜೆರಾಕ್ಸ್ ಬೇಕಾಗುತ್ತದೆ. ನೀವು ನೀಡುವ ಖಾತೆಗೆ ಹಣ ಬರುತ್ತದೆ.ನಿವೇಶನದ ಹಕ್ಕು ಪತ್ರ ಕೊಡಬೇಕಾಗುತ್ತದೆ.
ಶೌಚಾಲಯ ಬಳಸುತ್ತೇನೆ ಎಂದು ನೀವು ಒಪ್ಪಿಗೆ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಮನೆ ಮಾಲಿಕನ ಸ್ಟ್ಯಾಂಪ್ ಸೈಜ್ ಫೋಟೋಸ್ ಬೇಕಾಗುತ್ತವೆ. ಇವೆಲ್ಲವನ್ನು ತೆಗೆದುಕೊಂಡು ಹೋಗಿ ನಿಮ್ಮ ಗ್ರಾಮ ಪಂಚಾಯಿತಿಗೆ ಕೊಡಬೇಕಾಗುತ್ತದೆ ಅಲ್ಲಿ ನೀವು ಒಂದು ರಶೀದಿಯನ್ನು ಅವರ ಹತ್ತಿರ ತೆಗೆದುಕೊಳ್ಳಬೇಕುಇಲ್ಲಿಗೆ ನಿಮ್ಮದಾಖಲಾತಿಗಳ ಕೊಡುವ ಕೆಲಸ ಮುಗಿಯುತ್ತದೆ. ಇದರ ಜೊತೆಗೆ ಶೌಚಾಲಯ ಕಟ್ಟಲು ಪ್ರತ್ಯೇಕ ಹಣ ಸಿಗುತ್ತದೆ. ಹಾಗೆ ನೀವು ಪ್ರತಿ ಸಲ ಹೋಗಿ ನಿಮ್ಮ ಗ್ರಾಮ ಪಂಚಾಯಿತಿಗೆ ಹೋಗಿ ಇತರ ಬಗ್ಗೆ ನೀವು ವಿಚಾರಣೆ ಮಾಡಿರಬೇಕು ಏಕೆಂದರೆ ಕೆಲವೊಮ್ಮೆ ತಡವಾಗಿ ನಿಮ್ಮ ಖಾತೆಗೆ ಹಣ ಬರಬಹುದು.