ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕೇಂದ್ರ ಸರ್ಕಾರವು ಮಹಿಳೆಯರ ಸ್ವಾವಲಂಬನೆಗಾಗಿ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದ್ದು, ಈಗಲೇ ರಾಜ್ಯದಲ್ಲಿ ಬಹಳಷ್ಟು ಮಹಿಳೆಯರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬಟ್ಟೆ, ಹೊಲಿಗೆ ಯಂತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಕೂಡ ರಾಜ್ಯದಲ್ಲಿ ಬಟ್ಟೆ ಹೊಲಿಗೆ ಯಂತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸುವವರಿಗೆ ಕೇಂದ್ರ ಸರ್ಕಾರ ಹೊಸ ಅರ್ಜಿಗಳನ್ನು ಈಗಾಗಲೇ ಆಹ್ವಾನಿಸಲಾಗಿದ್ದು, ನಿಮ್ಮ ಹತ್ತಿರ ಯಾವುದೇ ಸಿಎಸ್ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳನ್ನ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದಾಗಿ ಮಹಿಳೆಯರ ಸ್ವಾವಲಂಬನೆಗಾಗಿ ಅಂದ್ರೆ ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿಸಲು ಮೇಲಿಂದ ಮೇಲೆ ಅನೇಕ ರೀತಿಯ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅರ್ಜಿ ಸಲ್ಲಿಸುದವರಿಗೆ ಹೊಸ ಬಟ್ಟೆ, ಹೊಲಿಗೆಯಂತ್ರ ವಿತರಣೆಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಬಟ್ಟೆ ಹೊಲಿಗೆ, ಮಷೀನ್ ಗಳನ್ನು ನೀಡಲಾಗ್ತಿದೆ. ಈಗಾಗಲೇ ರಾಜ್ಯದಲ್ಲಿ ಅರ್ಜಿ ಸಲ್ಲಿಸಿದವರಿಗೆ ಹೊಸ ಬಟ್ಟೆ, ಹೊಲಿಗೆ ಯಂತ್ರ ವಿತರಣೆ ಮಾಡಲು ಆರಂಭಿಸಲಾಗಿದೆ ಮತ್ತು ಕೆಲವು ಕಡೆ ಈಗಾಗಲೇ ಹೊಲಿಗೆ ಯಂತ್ರವನ್ನು ಸಹ ನೀಡಲಾಗಿದೆ.
ಹಾಗಿದ್ದರೆ ನೀವು ಕೂಡ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಬಟ್ಟೆ ಹೊಲಿಗೆ ಯಂತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಿದರೆ ಈ ಮಾಹಿತಿ ನಿಮಗಾಗಿ ಇದೆ ಬಟ್ಟೆ ಹೊಲಿಗೆ ಯಂತ್ರ ಈಗಾಗಲೇ ವಿತರಣೆ ಮಾಡಲಾಗುತ್ತಿದ್ದು, ಅಂಥವರಿಗೆ ಮತ್ತು ಏನೆಲ್ಲಾ ಅರ್ಹತೆಗಳು ಇರುವವರಿಗೆ ಕೊಡಲಾಗ್ತಾ ಇದೆ ಹಾಗು ಇನ್ನು ಕೂಡ ಅರ್ಜಿಯನ್ನ ಯಾರು ಸಲ್ಲಿಸಿರುವ ಅವರು ಹೊಸ ಅರ್ಜಿಯನ್ನು ಸಲ್ಲಿಸಲು ಮಾಡಬೇಕಾದ ಕೆಲಸಗಳು ಏನು ಅಂತ ಕಂಪ್ಲೀಟ್ ಮಾಹಿತಿಯನ್ನ ನೀಡಲಾಗಿದೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಅರ್ಹ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗ್ರಾಮೀಣ ಮತ್ತು ನಗರದಲ್ಲಿ ವಾಸಿಸುವಂತಹ ಮಹಿಳೆಯರು ಸ್ವಉದ್ಯೋಗ ಆರಂಭಿಸಲು ಇಚ್ಛೆ ಪಡುವಂತ ಮಹಿಳೆಯರು ಈ ಯೋಜನೆಯ ಫಲವನ್ನು ಪಡೆದುಕೊಂಡು ನೀವು ಸ್ವಂತ ಕಾಲಿನ ಮೇಲೆ ನಿಂತು ಕೊಳ್ಳಬಹುದು. ಆದರೆ ನೀವು ಒಂದು ವೇಳೆ ಸರಕಾರದ ಅಡಿಯಲ್ಲಿ ಕೆಲಸ ಮಾಡುವಂತವರಾಗಿದ್ದರೆ ಈ ಯೋಜನೆಗೆ ನೀವು ಅರ್ಹರಲ್ಲ . ಹಾಗೆ ಇದಕ್ಕೆ ಬೇಕಾಗಿರುವಂತಹ ಮುಖ್ಯವಾದದ್ದು ದಾಖಲಾತಿಗಳು ಈ ದಾಖಲಾತಿಗಳು ಯಾವ್ಯಾವು ಎಂದು ನೋವು ನೋಡುವುದಾದರೆ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ,ಪಾಸ್ಪೋರ್ಟ್ ಭಾವಚಿತ್ರ ಜಾತಿ ಪ್ರಮಾಣ ಪತ್ರ , ಮರಗೆಲಸ, ಗಾರೆಕೆಲಸ, ಕ್ಷೌರಿಕ ಹಾಗೂ ಧೋಬಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಧೃಡೀಕರಣ ಪತ್ರ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ. ಇವೆಲ್ಲವನ್ನ ತೆಗೆದುಕೊಂಡು ನಿಮ್ಮ ಸಮೀಪ ಇರುವ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ವಿಚಾರಣೆ ಮಾಡಿ.