ಈಗಾಗಲೆ ಹಿಂದಿನ ದಿನಗಳಲ್ಲಿ ಅಂಗವಿಕಲರಿಗೆ ದ್ವಿಚಕ್ರ ವಾಹನವನ್ನು ನೀಡಲಾಗಿದ್ದು ಈ ವರ್ಷವೂ ಕೂಡ ಅದೇ ಯೋಚನೆಯನ್ನು ಮುಂದುವರಿಸಲು ಸರ್ಕಾರ ಯೋಚನೆ ಮಾಡಿದೆ. 2023 24 ನೇ ಸಾಲಿನ ಅಂಗವಿಕಲರಿಗೆ ಇದೀಗ 4000 ಯಂತ್ರ ಚಾಲಿತ ದ್ವಿಚಕ್ರ ವಾಹನ ಖರೀದಿಸಲು ಇದೀಗ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರವನ್ನ ಕೈಗೊಳ್ಳಲಾಗಿದ್ದು, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಇದೀಗ ಎಲ್ಲ ವಿಶೇಷಚೇತನರಿಗೆ ಹಾಗೂ ಅಂಗವಿಕಲರಿಗೆ ದ್ವಿಚಕ್ರ ವಾಹನ ಪಡೆಯಲು ಅರ್ಜಿಗಳನ್ನು ಕರೆಯಲಾಗಿದೆ.

ಹೌದು, ವೀಕ್ಷಕರೇ 2024 ಈ ಹೊಸ ವರ್ಷದಿಂದಲೇ ಎಲ್ಲ ರಾಜ್ಯದ್ಯಾಂತ ಇರುವ ವಿಶೇಷಚೇತನರಿಗೆ, ಅಂಗವಿಕಲರಿಗೆ ಪಟ್ಟು 4000 ದ್ವಿಚಕ್ರ ವಾಹನ ವಿತರಣೆಗಾಗಿ ಅರ್ಜಿಗಳನ್ನ ಆಹ್ವಾನ ಮಾಡಲಾಗುತ್ತಿದೆ. ಇದೀಗ ಅಂಗವಿಕಲರು ವಿಶೇಷ ಚೇತನರು ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್‌ಬುಕ್ ಕ್ಯಾಸ್ಟ್ ಸರ್ಟಿಫಿಕೇಟ್. ರೇಷನ್ ಕಾರ್ಡ್ ಹಾಗೂ ಅಂಗವಿಕಲ ಬಂದಿರುವ ಪ್ರಮಾಣ ಪತ್ರ ಸೇರಿದಂತೆ ಯುಡಿಐಡಿ ಕಾರ್ಡ್ ಹಾಗೂ ನಾಲ್ಕು ಭಾವಚಿತ್ರ ಸೇರಿದಂತೆ ಇತರೆ ಅಗತ್ಯ ದಾಖಲಾತಿಗಳನ್ನ ನೀವು ರೆಡಿ ಮಾಡಿಕೊಳ್ಳಿ. ಏಕೆಂದರೆ ಮುಂಬರುತ್ತಿರುವ ಕೆಲವೇ ದಿನಗಳಲ್ಲಿ ಒಟ್ಟು 4000 ಯಂತ್ರ ಚಾಲಿತ ತ್ರಿಚಕ್ರ ವಾಹನ ವಿತರಿಸಲು ಇದೀಗ ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯು ಸಜ್ಜಾಗಿದೆ.‌

ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಧಿಕೃತ ಮಾಹಿತಿ ಕೂಡ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಂಗವಿಕರಿಗೆ ದ್ವಿಚಕ್ರ ವಾಹನವನ್ನು ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಪ್ರಸ್ತುತ ರಾಜ್ಯ ಮುಖ್ಯಮಂತ್ರಿಗಳಾದ ಸಿ ಎಂ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತಗೆದುಕೊಂಡಿದ್ದಾರೆ. ಈ ನಿರ್ಧಾರಗಳಲ್ಲಿ ಯುವನಿಧಿಗೆ ಸಂಬಂಧಪಟ್ಟಂತಹ ಕೆಲವೊಂದಿಷ್ಟು ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದಾರೆ 180 ದಿನಗಳ ಆದ ನಂತರ ಅವರವರ ಖಾತೆಗೆ 3000 ಹಣ ವರ್ಗಾವಣೆ ಆಗುತ್ತದೆ.

ಹೌದು, ಈ ಸಂಪುಟ ಸಭೆಯಲ್ಲಿ ಮುಖ್ಯವಾಗಿ ಅಂಗವಿಕಲರಿಗೆ ಅಂತನೆಯೇ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಅಂಗವಿಕಲರಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ ಎಂದು ತಿಳಿಸಬಹುದು. ಇದರಿಂದ ಅಂಗವಿಕಲರಿಗೆ ತುಂಬಾನೇ ಉಪಯೋಗವಾಗುತ್ತದೆ ಯಾವುದಾದರೂ ಸಣ್ಣ ಪುಟ್ಟ ವ್ಯಾಪಾರವನ್ನು ಅವರು ಶುರು ಮಾಡಬಹುದು. ಪ್ರಸ್ತುತ 2023-24ನೇ ಸಾಲಿನಲ್ಲಿ ಅಂಗವಿಕಲರಿಗೆ ಅಂದಾಜು ₹36 ಕೋಟಿ ವೆಚ್ಚದಲ್ಲಿ 4,000 ಹೆಚ್ಚುವರಿಯಾಗಿ ಯಂತ್ರ ಚಾಲಿತ ದ್ವಿಚಕ್ರ ವಾಹನ ಖರೀದಿಸಿ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ.

 

Leave a Reply

Your email address will not be published. Required fields are marked *