ಪ್ರಯತ್ನ ಪಡುವವರಿಗೆ ಯಾವುದು ಆಗಲ್ಲ ಅಂತ ಇಲ್ಲ ಪ್ರಯತ್ನ ಎಂಬ ಮೂರಕ್ಷರದ ಮೇಲೆ ನಂಬಿಕೆ ಇಟ್ಟವರಿಗೆ ಸೋಲು ಲೆಕ್ಕವೇ ಅಲ್ಲ. ಆದರೆ ಸೋಲು, ಹತಾಶೆ ಎಲ್ಲವನ್ನ ತಮ್ಮ ಬೆಳವಣಿಗೆಗೆ ಮೆಟ್ಟಿಲು ಮಾಡಿಕೊಂಡು ಇನ್ನು ತಮ್ಮೆಲ್ಲಾ ನೋವುಗಳನ್ನ ಮೆಟ್ಟಿನಿಂತು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿರುವಂತಹ IAS ಆಫೀಸ್ ಆರ್ತಿಯವರು ಸ್ಪೂರ್ತಿದಾಯಕ ಜೀವನವನ್ನ ಅವರ ಕೆಲಸಗಳನ್ನ ವರದಿಯಲ್ಲಿ ನೋಡೋಣ. ಒಂದು ಕಾಲದಲ್ಲಿ ಆಕಾರವನ್ನು ನೋಡಿ ಎಲ್ಲರೂ ಅಪಹಾಸ್ಯವನ್ನು ಮಾಡ್ತಾ ಇದ್ರು. ಕುಳ್ಳಿ ಅಂತ ಅಂದಿದ್ರು.
ಆದ್ರೆ ಈಗ ಅವರಿಗೆ ಆರೋಗ್ಯ ಪೊಲೀಸರು ಸೆಲ್ಯೂಟ್ ಮಾಡಬೇಕು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಅಲ್ವ ಅದು ಆರೋಗ್ಯದ ವಿಷಯದಲ್ಲಿ ಸತ್ಯ ಯಾಕಂದ್ರೆ ಆರೋಗ್ಯಾ ಅಥವಾ ಎತ್ತರ ಕೇವಲ 3.5 ಫೀಟ್ ಅಂದ್ರೆ ಮೂರುವರೆ ನಾಲ್ಕು ವರ್ಷದ ಮಗುವಿನಷ್ಟು ಎತ್ತರ.ಇವರು ಉತ್ತರಖಾಂಡ ಡೆಹ್ರಾಡೂನ್ ನಲ್ಲಿ ಕರ್ನಲ್ ರಾಜೇಂದ್ರ ಮತ್ತು ಕುಂಡೋದರ ದಂಪತಿಯ ಪುತ್ರಿಯಾಗಿ ಜನಿಸಿದರು. ಇವರ ತಂದೆ ಶಾಲೆಯ ಪ್ರಿನ್ಸಿಪಾಲ್ ಆಗಿದ್ದರು. ತಂದೆ ತಾಯಿ ವಿದ್ಯಾವಂತರಾಗಿದ್ದ ಕಾರಣ ಅವರು ಅಂಥವರಿಗೆ ಪ್ರತಿಯೊಂದು ಹಂತದಲ್ಲೂ ತುಂಬಾ ಸಪೋರ್ಟಿವ್ ಆಗಿ ನಿಂತಿದ್ದರು.
ಆ ರೀತಿ ಹುಟ್ಟಿದಾಗ ಹೇಳಿದಂತೆ ಮಗುವಿನಲ್ಲಿ ಸಮಸ್ಯೆ ಇದೆ. ಹೀಗಾಗಿ ಮಗು ಸಾಮಾನ್ಯರಂತೆ ಇರಲ್ಲ. ಸಾಮಾನ್ಯ ಮಕ್ಕಳು ಹೋಗುವಂತ ಶಾಲೆಗೆ ಹೋಗಲು ಆಗುವುದಿಲ್ಲ ಅಂತ ಆದರೆ ಇವರು ಡೆಹ್ರಾಡೂನ್ ನ ಪ್ರೆಸ್ಟೀಜ್ ಸ್ಕೂಲ್ನಲ್ಲಿ ಶಿಕ್ಷಣವನ್ನು ಪಡೆದರು. ಹಾಗೆ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡರು ಈ ಮೂಲಕ ವೈದ್ಯರು ಹೇಳಿದ ಮಾತನ್ನ ಸುಳ್ಳಾಗಿಸಿದರು ಆದ್ರು ಅರ್ಥ ಬದುಕು ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಶಾಲೆ ಕಾಲೇಜಿನಲ್ಲಿ ಓದುವಾಗ ಅಪಹಾಸ್ಯ ಒಳಗಾಗಿದ್ದರು.
ಆದರೆ ಇವರು ಅವತ್ತು ಮನಸ್ಸಿಗೆ ಬೇಸರ ಮಾಡಿಕೊಂಡು ಓದೋದ್ರಿಂದ ಹಿಂತಿರುಗಿದರೆ ಇವತ್ತು ಇವರು ಇಷ್ಟು ದೊಡ್ಡ ಹೆಸರನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಹೌದು ಎಷ್ಟೇ ಕಷ್ಟ ಬಂದ್ರು ಈ ಸಮಾಜ ಏನೇ ಅಪಹಾಸ್ಯ ಅವಹೇಳನ ಮಾಡಿದ್ದರು ಓದನ್ನ ಒಂದು ತಪಸ್ಸಿನಂತೆ ಮಾಡಿದರು 2006 ರ ಬ್ಯಾಚ್ನವರು ಇವರು ತಮ್ಮ ಸಿವಿಲ್ ಸರ್ವಿಸ್ ಪರೀಕ್ಷೆಯನ್ನ ಮೊದಲ ಪ್ರಯತ್ನದಲ್ಲಿ ಪಾಸಾದರು. ನಂತರ ನಡೆದದ್ದೆಲ್ಲ ಇತಿಹಾಸ ಕೆಲಸಕ್ಕೆ ಸೇರಿದ ಮೊದಲಿನಿಂದಲೂ ಅನೇಕ ಹುದ್ದೆಗಳಲ್ಲಿ ಕೆಲಸವನ್ನು ಮಾಡಿದರು. ಇವರು ಮೊದಲಿಗೆ ತಮ್ಮ ಎತ್ತರದಿಂದ ಸುದ್ದಿ ಆದ್ರೆ ಮತ್ತೆ ತಮ್ಮ ಕೆಲಸಗಳಿಂದ ಪೇಪರ್ಗಳ ಹೆಸರಿನಲ್ಲಿ ಅವರ ಹೆಸರು ಕಾಣಿಸಿಕೊಂಡಿತ್ತು.
ಇವರು ಬಿಕಾನೇರ್ ನ ಜಿಲ್ಲಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿಕೊಂಡಾಗ ಬಯಲು ಶೌಚಾಲಯ ಮುಕ್ತ ಮಾಡುವಂತಹ ಧ್ಯೇಯದೊಂದಿಗೆ ಅಭಿಯಾನವನ್ನು ಪ್ರಾರಂಭಿಸಿದರು. ಈ ಸ್ವಚ್ಛತಾ ಕಾರ್ಯ ಜನರ ಮನಸ್ಸಿನ ಮೇಲೆ ವರ್ತನೆಯ ಮೇಲೆ ಪರಿಣಾಮ ಬೀರಿತು. ಏ ಕೆಲಸಕ್ಕೆ ರಾಜಸ್ಥಾನ ಸರ್ಕಾರದಿಂದ ಶ್ಲಾಘನೆಗೆ ಪಾತ್ರರಾದರು. ಮಹಿಳೆಯರಲ್ಲಿ ಅನಿಮಿಯಾದಂತಹ ಸಮಸ್ಯೆಯನ್ನು ದೂರ ಮಾಡಲು ಯೋಜನೆಯನ್ನು ಪ್ರಾರಂಭಿಸಿದರು.
ಇವರು ಬಿಕಾನೇರ್ ನ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಗಿದ್ದಾಗ ಡಾಕ್ಟರ್ ಯೋಜನೆಯನ್ನ ಜಾರಿ ತಂದು ಈ ಯೋಜನೆಯ ಅಡಿಯಲ್ಲಿ ತಮ್ಮ ಸ್ವಂತ ಆಸ್ಪತ್ರೆಯಲ್ಲಿ ಜನಿಸಿದ ಅನಾಥ ಬಡ ಮತ್ತು ಅಸಹಾಯಕ ಹೆಣ್ಣು ಮಕ್ಕಳನ್ನ ದತ್ತು ತೆಗೆದುಕೊಳ್ಳುವಂತೆ ವೈದ್ಯರನ್ನ ಪ್ರೇರೆಪಿಸಿದರು. ಇವರು ಅಜ್ಮೀರ್ನ ಕಲೆಕ್ಟರ್ ಆಗಿದ್ದಾಗ ವಿಶಿಷ್ಟ ಚೇತನ ಮಕ್ಕಳಿಗೆ ಮತದಾನ ಮಾಡಲು ಪ್ರೋತ್ಸಾಹ ನೀಡಿದರು. ಹಾಗೆ ಇವರು ಮತದಾನದಲ್ಲಿ ಭಾಗವಹಿಸಲು ಗಾಲಿ, ಕುರ್ಚಿ ಮತ್ತು ವಾಹನಗಳ ವ್ಯವಸ್ಥೆಯನ್ನು ಮಾಡಿದ್ದರು.