ನಾವ ನಿಜ ಜೀವನದಲ್ಲಿ ಹಾವನ್ನು ಕಂಡರೆ ಬಹಳಷ್ಟು ಹೆದರುತ್ತೇವೆ. ಆದರೆ ಇದು ನಮಗೆ ಕೆಲವೊಮ್ಮೆ ಒಳ್ಳೆಯ ಸಂದೇಶಗಳನ್ನು ನೀಡುತ್ತದೆ ಅದು ಹೇಗೆ ಅಂತೀರಾ ಕನಸಿನಲ್ಲಿ ಹಾವು ನೋಡಿದ ಕ್ಷಣ ನಮ್ಮ ಮನಸ್ಸಿನಲ್ಲಿ ಭಯ ಹುಟ್ಟಿಕೊಳ್ಳುವುದು. ಆದರೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದು ಶುಭದ ಸಂಕೇತವಾಗಿದೆ. ಕನಸಿನಲ್ಲಿ ಹಾವು ಯಾವ ರೀತಿ ಕಾಣಿಸಿಕೊಂಡರೆ ಶುಭವಾಗುತ್ತದೆ ಎಂಬುದನ್ನು ತಿಳಿಯೋಣ. ಹಾಗೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ಈ ಶುಭ ಘಟನೆಗಳು ನಡೆಯುತ್ತವೆ. ಹಾಗಾದರೆ ಯಾವ ಶುಭ ಘಟನೆಗಳು ನಡೆಯುತ್ತವೆ?
ಈ ಎಲ್ಲ ಮಾಹಿತಿಯನ್ನು ಇವತ್ತಿನ ಈ ಮಾಹಿತಿಯಲ್ಲಿ ತಿಳಿಯೋಣ ಸ್ನೇಹಿತರೆ ಅನೇಕ ಜನರು ತಮ್ಮ ಕನಸಿನಲ್ಲಿ ಹಾವುಗಳನ್ನು ನೋಡುತ್ತಾರೆ. ಕನಸಿನಲ್ಲಿ ಹಾವು ಅಥವಾ ಹಾವಿನ ಕನಸು ಬಿದ್ದರೆ ಅದು ನಮಗೆ ಭವಿಷ್ಯದ ಬಗ್ಗೆ ಶುಭ ಮತ್ತು ಅಶುಭ ಎರಡು ಸೂಚನೆಗಳನ್ನು ನೀಡುತ್ತದೆ. ನಿಮ್ಮ ಕನಸಿನಲ್ಲಿ ಸತ್ತ ಹಾವು ಕಾಣಿಸಿಕೊಂಡರೆ ರಾಹು ದೋಷದಿಂದ ಉಂಟಾಗುವ ಸಮಸ್ಯೆಗಳನ್ನು ನೀವು ಎದುರಿಸಿ ಇನ್ನು ಮುಂದೆ ಮುಂದಿನ ಜೀವನದಲ್ಲಿ ಶುಭ ಸಮಯವನ್ನು ಪ್ರಾರಂಭ ಮಾಡುವಿರಿ.
ರಾತ್ರಿ ಮಲಗುವಾಗ ಕನಸಿನಲ್ಲಿ ಬೆಳ್ಳಿ ಅಥವಾ ಚಿನ್ನದ ಅಥವಾ ಪ್ರಕಾಶಮಾನವಾದ ಹಾವು ಕಾಣಿಸಿಕೊಂಡರೆ ಅದು ಅದೃಷ್ಟ ತೆರೆಯುವ ಸಂಕೇತವಾಗಿದೆ. ಇದು ನಿಮ್ಮ ಪೂರ್ವಜರ ಆಶೀರ್ವಾದವನ್ನು ಸೂಚಿಸುತ್ತದೆ. ನಿಮ್ಮ ಕನಸಿನಲ್ಲಿ ಹಾವು ಎಲ್ಲೋ ಹೋಗುತ್ತಿರುವುದನ್ನು ನೋಡಿದರೆ ಅಥವಾ ನಿಮ್ಮನ್ನು ನೋಡಿದ ನಂತರ ಅದು ಅಡಗಿಕೊಂಡರೆ ಆಗ ಪಿತೃ ದೇವನು ನಿಮ್ಮನ್ನು ರಕ್ಷಿಸುತ್ತಿದ್ದಾನೆ ಎಂಬ ಅರ್ಥವನ್ನು ನೀಡುತ್ತದೆ. ನೀವು ನಿಮ್ಮ ಕನಸಿನಲ್ಲಿ ಹಾವೊಂದು ತನ್ನ ಪೊರೆಯನ್ನು ಕಳಚುತ್ತಾ ಇರುವಂತೆ ಕನಸನ್ನ ನೋಡಿದರೆ ಅದು ಆಸ್ತಿ ಸಂಪಾದನೆಯ ಮೊತ್ತವಾಗಿದೆ.
ಈ ಕನಸು ನೀವು ಶೀಘ್ರದಲ್ಲೇ ಸಂಪತ್ತನ್ನು ಪಡೆದುಕೊಳ್ಳುವಿರಿ ಎಂಬ ಅರ್ಥವನ್ನು ನೀಡುತ್ತದೆ. ನೀವು ಯಾವುದೋ ಕೆಲಸಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದರೆ ಆ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಂತೆ ಕನಸು ಬಿದ್ದರೆ ನೀವು ಶೀಘ್ರದಲ್ಲೇ ಹಣವನ್ನು ಪಡೆದುಕೊಳ್ಳುತ್ತೀರಿ. ಕನಸಿನಲ್ಲಿ ಬಿಳಿ ಹಾವನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಸಾಕಷ್ಟು ಹಣ ಸಿಗುತ್ತದೆ. ಇದು ದೇವರ ರೂಪವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಹಾವು ಕಡಿತದಿಂದ ಸಾಯುವುದು ದೀರ್ಘಾಯುಷ್ಯವನ್ನು ಪಡೆಯುವ ಸೂಚನೆ ಆಗಿದೆ.
ಇಂತಹ ಕನಸುಗಳು ಬಿದ್ದರೆ ಸಾಮಾನ್ಯವಾಗಿ ಎಲ್ಲರೂ ಹೆದರುತ್ತಾರೆ. ಆದರೆ ಈ ಕನಸಿಗೆ ಹೆದರುವ ಅವಶ್ಯಕತೆ ಇಲ್ಲ. ಕನಸಿನಲ್ಲಿ ಹಾವು ಕಚ್ಚಿದರೆ ಅದು ನಿಮ್ಮ ಗೆಲುವು ಮತ್ತು ಶತ್ರುಗಳ ಸೋಲಿನ ಮಾಹಿತಿಯಾಗಿದೆ. ಹಾವು ಕಚ್ಚಿದಂತೆ ಕನಸು ಬೀಳುವುದು ಕೇವಲ ನಿಮ್ಮ ದೀರ್ಘಾಯಸ್ಸುವನ್ನು ಮಾತ್ರವಲ್ಲ ನಿಮ್ಮ ಗೆಲುವಿನ ಸೂಚನೆಯೂ ಕೂಡ ತಿಳಿಯುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾದರೆ ಖಂಡಿತ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮರೆಯಬೇಡಿ.