ಸ್ನೇಹಿತರೇ ಜನವರಿ 22 ನೇ ತಾರೀಖು ಅಯೋಧ್ಯ ರಾಮಮಂದಿರ ಉದ್ಘಾಟನೆಯಾಯಿತು ಮತ್ತು ಬಾಳಾರಾಮ ದೇವರ ಪ್ರತಿಷ್ಠಾಪನೆ ಕೂಡ ಆಯಿತು.ರಾಮಮಂದಿರ ನಿರ್ಮಾಣಕ್ಕಾಗಿ ಸಿನಿಮಾ ತಾರೆಯರು, ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ಜನಸಾಮಾನ್ಯರು ಕೂಡ ದೇಣಿಗೆ ನೀಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ದುಡ್ಡು ರಾಮಮಂದಿರ ನಿರ್ಮಾಣಕ್ಕಾಗಿ ಹರಿದುಬಂದಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥರು ಹೇಳಿರುವ ಪ್ರಕಾರ ಸದ್ಯಕ್ಕೆ 1100 ಕೋಟಿಗೂ ಹೆಚ್ಚು ರೂಪಾಯಿ ಖರ್ಚು ಮಾಡಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ.
ಇನ್ನು ರಾಮಮಂದಿರದ ಸಾಕಷ್ಟು ಕೆಲಸಗಳು ಕಾರ್ಯ ಭರದಿಂದ ಸಾಗುತ್ತಲೇ ಇದೆ.ಇನ್ನು ಕೆಲವೇ ದಿನಗಳಲ್ಲಿ ರಾಮಮಂದಿರ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತೆ. ಸಿನಿಮಾ ತಾರೆಯರು ಉದ್ಯಮಿಗಳು ಸಾಮಾನ್ಯ ಜನರು ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದಾರೆ ಅಂತ ನಿಮಗೆ ಗೊತ್ತು ಆದರೆ ಅತಿ ಹೆಚ್ಚು ದೇಣಿಗೆ ಯಾರು ಕೊಟ್ಟಿದ್ದಾರೆ ಅಂತ ಗೊತ್ತ ಇವರ ಬಗ್ಗೆ ತಿಳಿದರೆ ಖಂಡಿತ ಶಾಕ್ ಆಗ್ತೀರಾ ಅಂಬಾನಿನು ಅಲ್ಲ ಅದಾನಿನು ಅಲ್ಲ ಅತಿ ಹೆಚ್ಚು ದೇಣಿಗೆ ಕೊಟ್ಟ ವ್ಯಕ್ತಿಯ ಹೆಸರು ಮೊರಾರಿ ಬಾಪು ಇವರನ್ನು ಪ್ರೀತಿಯಿಂದ ಮುರಾರಿ ತಾತ ಮತ್ತು ರಾಮಾಯಣ ತಾತ ಅಂತ ಕರೀತಾರೆ.
ಮುರಾರಿ ಅಜ್ಜನವರು ಗುಜರಾತ್ ರಾಜ್ಯದ ಆಧ್ಯಾತ್ಮಿಕ ನಾಯಕರು ಮತ್ತು ರಾಮಕಥಾ ನಿರೂಪಕರು ಇಂದಿಗೂ ದುಡ್ಡು ನೋಡಿಲ್ಲ ,ಮುಟ್ಟಿಲ್ಲ .ಹುಟ್ಟಿದಾಗಿಂದ ಕೇವಲ ರಾಮ ದೇವರ ಸೇವೆ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಹಾಗಾದರೆ ಇವರು ದುಡ್ಡು ನೋಡು ಇಲ್ಲ ದುಡ್ಡು ಮುಟ್ಟಿಲ್ಲ ಅಂದರೆ ರಾಮ ಜನ್ಮಭೂಮಿಗೆ ಅಷ್ಟೊಂದು ದೇಣಿಗೆ ಕೊಟ್ಟರು. ಇವರ ಬಳಿ ದುಡ್ಡು ಹೇಗೆ ಬಂತು ಅಂತ ನೀವು ಪ್ರಶ್ನೆ ಕೇಳ್ತಾ ಇರಬಹುದು ನಿಮ್ಮ ಪ್ರಶ್ನೆಗೆ ಖಂಡಿತವಾಗಿಯೂ ಉತ್ತರ ಇದೆ. ಮೊರಾರಿ ಬಾಪುವನ್ನು ದ ಲೆಜೆಂಡ್ ಆಫ್ ರಾಮಕಥಾ ಅಂತ ಕರೀತಾರೆ ಇಷ್ಟೆಲ್ಲ.
ಇವರಿಗೆ ಸಾಕಷ್ಟು ಅಭಿಮಾನಿಗಳು ಇದ್ದು ಇವರು ರಾಮಕಥ ಪಾಠವನ್ನು ಪ್ರವಚನ ಮಾಡುತ್ತಾರೆ. ಮೊರಾರಿ ಬಾಪು ಅವರು ರಾಮ ಮಂದಿರಕ್ಕೆ ದೇಣಿಗೆ ಕೊಟ್ಟಿದ್ದು ಬರೋಬ್ಬರಿ 18ಕೋಟಿ ರೂಪಾಯಿ. ಈ ವಿಚಾರದ ಬಗ್ಗೆ ರಾಮ ಜನ್ಮಭೂಮಿ ಟ್ರಸ್ಟ್ ಹೇಳಿದೆ ದೊಡ್ಡ ದೊಡ್ಡ ಉದ್ಯಮಿಗಳು ಕೂಡ ಡೊನೇಷನ್ ಕೊಟ್ಟಿದ್ದಾರೆ. ಮೊರಾರಿ ಬಾಪು ಅವರ ರೆಕಾರ್ಡ್ ಮಾಡುವುದಕ್ಕೆ ಸಾಧ್ಯವಾಗಿಲ್ಲ.
ಇಷ್ಟೊಂದು ದುಡ್ಡು ಹೇಗೆ ಕಲೆಕ್ಟ್ ಮಾಡಿದ್ರು ಅಂದರೆ ಇವರು ಬೇರೆ ದೇಶಗಳಲ್ಲೂ ಹೋಗಿ ಕೂಡ ಈ ರಾಮಕಥ ಪ್ರವಚನವನ್ನು ಮಾಡಿ ಇವರಿಗೆ ನೀಡುವಂತಹ ಹಣವನ್ನು ನೇರವಾಗಿ ರಾಮ ಮಂದಿರ ಟ್ರಸ್ಟ್ ಗೆ ಹೋಗುವ ರೀತಿಯಲ್ಲಿ ಮಾಡಿದ್ದರು. ಇವರು ಸ್ವತಹ ಹಣವನ್ನು ನೋಡಿ ಕೂಡ ಇಲ್ಲ. ಈ ಮಾತನ್ನು ಸ್ವತಃ ಟ್ರಸ್ಟಿನವರೇ ಹೇಳಿದ್ದಾರೆ ಹಾಗೆ ಇವರು ಕಳೆದ 64 ವರ್ಷಗಳಿಂದ ಈ ಪ್ರವಚನವನ್ನು ಮಾಡುತ್ತಾ ಬರುತ್ತಿದ್ದಾರೆ.