ಆಧಾರ್ ಕಾರ್ಡ್ ನಲ್ಲಿ ಯಾವ ರೀತಿ ಹೆಸರು ಇರುತ್ತದೆ ಅದೇ ರೀತಿ ಜಮೀನು ದಾಖಲೆಗಳಾದ ಪಹಣಿಯಲ್ಲಿ ಇರುವುದಿಲ್ಲ ಸುಮಾರು ರೈತರು ನೋಡಿರುತ್ತಿರಾ ನಿಮ್ಮ ಪಹಣಿಯಲ್ಲಿ ಮತ್ತು ಆಧಾರ್ ಕಾರ್ಡಿನಲ್ಲಿ ಅಂದರೆ ಕನ್ನಡದಲ್ಲಿ ಅಕ್ಷರ ತಪ್ಪಾಗಿರುವುದು ಹಲವಾರು ತಪ್ಪಾಗಿರುತ್ತದೆ ಪಹಣಿ ಮತ್ತು ಆಧಾರ್ ಕಾರ್ಡಿನಲ್ಲಿ ತಮ್ಮ ಜಮೀನಿನ ದಾಖಲೆಗಳಲ್ಲಿ ಹೆಸರು ಸರಿಯಾಗಿದೆಯೋ ಅಥವಾ ತಪ್ಪಾಗಿದೆ ಈ ಒಂದು ಮಾಹಿತಿಯಲ್ಲಿ ಹೆಸರು ತಪ್ಪಾಗಿದ್ದರೆ ಆಧಾರ್ ಕಾರ್ಡಿನಲ್ಲಿರುವ ಹೆಸರು ಪಹಣಿ ಅಥವಾ ಜಮೀನಿನ ದಾಖಲೆಗಳಲ್ಲಿ ಹೇಗೆ ಸೇರಿಸಬೇಕು ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಇದನ್ನು ಮಾಡಲು ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂದು ಅರ್ಥಾಗುವ ರೀತಿಯಲ್ಲಿ ಹೇಳುತ್ತೇವೆ.
ಆಧಾರ್ ಕಾರ್ಡ್ ಪ್ರಕಾರ ನಿಮ್ಮ ಹೆಸರು ಪಹಣಿಯಲ್ಲಿ ತಿದ್ದುಪಡಿ ಮಾಡಬೇಕೆಂದರೆ ಈ ದಾಖಲೆಗಳು ಬೇಕಾಗುತ್ತದೆ. ಒಂದನೆ ಅದು ಆಧಾರ್ ಕಾರ್ಡ್ ಬೇಕಾಗುತ್ತದೆ ಎರಡನೆಯದು 20 ರೂಪಾಯಿಯ ಬಾಂಡ್ ಪೇಪರ್ ಹೆಸರು ತಿದ್ದುಪಡಿ ಬಗ್ಗೆ ಕುರಿತು ಒಂದು ಡಿಕ್ಲರೇಷನ್ ಕೊಡಬೇಕಾಗುತ್ತದೆ. ಹೆಸರುಗೆ ತಿದ್ದುಪಡಿಗೆ ಕಾರಣ ಮತ್ತು ಅದರ ವಿವರಗಳನ್ನು ತಹಸಿಲ್ದಾರರಿಗೆ ಸ್ವಯಂ ಕೊಟ್ಟು ಸೈನ್ ಮಾಡುವುದು ಆಗಿರುತ್ತದೆ ಮೂರನೆಯದು ಜಮೀನಿನ ಮುಖ್ಯ ದಾಖಲೆಗಳದ ಪಹಣಿ ಸಹ ಬೇಕೇ ಬೇಕಾಗುತ್ತದೆ ನಾಲ್ಕನೇದು ಅರ್ಜಿ ಬರೆಯಬೇಕು ಒಂದು ಅರ್ಜಿಯನ್ನು ಸಹ ನೀವು ಬರೆಯಬೇಕಾಗುತ್ತದೆ ಅರ್ಜಿಯಲ್ಲಿ ಹೆಸರು ತಿದ್ದುಪಡಿ ಮಾಡುವ ಕುರಿತು ಒಳಗೊಂಡಿರುವ ಮಾಹಿತಿ ಅರ್ಜಿಯಲ್ಲಿ ನೀವು ಬರೆಯಬೇಕು.
ಇಷ್ಟೆಲ್ಲಾ ಆದ ಮೇಲೆ ಅರ್ಜಿಯ ಜೊತೆಗೆ ಇಲ್ಲಿ ಹೇಳಿರುವ ಮುಖ್ಯ ದಾಖಲೆಗಳು ಅರ್ಜಿ ಜೊತೆಗೆ ನಿಮ್ಮ ತಾಲೂಕಿನಲ್ಲಿರುವ ತಹಸಿಲ್ದಾರ ಕಚೇರಿಗೆ ಸೇವಾ ಸೆಂಟರ್ಗೆ ಕೊಡಬೇಕಾಗುತ್ತದೆ ಎಲ್ಲ ದಾಖಲೆಗಳ ಜೊತೆಗೆ ಇದಾದ ನಂತರ ನೀವು ಕೊಟ್ಟಿರುವಂತಹ ಆ ಒಂದು ದಾಖಲೆಗಳ ಭೂಮಿ ಕೇಂದ್ರದ ಮೂಲಕ ಎಂಟ್ರಿ ಆಗಿ ಮುಂದಿನ ಅಂದಾಜು 15 ದಿನಗಳಲ್ಲಿ ನಿಮ್ಮ ಒಂದು ಹೆಸರು ಆಧಾರ್ ಕಾರ್ಡಿನಲ್ಲಿ ಹೇಗೆ ಇರುತ್ತದೆ ಅದೇ ರೀತಿ ನಿಮ್ಮ ಜಮೀನಿನ ಪಹಣಿಯಲ್ಲಿ ಹಾಗೂ ಆಗುತ್ತದೆ ಎಂದು ಹೇಳಬಹುದು. ಇವಾಗ ಹೆಸರು ತಿದ್ದುಪಡಿ ಮಾಡಬೇಕಾದರೆ ಮುಖ್ಯ ಅಂಶಗಳು ನಿಮಗೆ ಗೊತ್ತಿದೆ ಅಂತ ಹೇಳುತ್ತೇನೆ.
ಒಂದನೆಯದು ಸಣ್ಣ ಪುಟ್ಟ ಹೆಸರು ತಿದ್ದುಪಡಿ ಮಾಡುತ್ತಾರೆ ಪೂರ್ಣ ಹೆಸರು ಬದಲಾವಣೆ ಮಾಡುವುದು ಆಗಲಿ ಹೊಸದಾಗಿ ಹೆಸರು ಸೇರ್ಪಡೆ ಮಾಡುವುದು ಆಗಲಿ ಮಾಡುವುದಿಲ್ಲ ಎರಡನೆಯದು ಸಂಪೂರ್ಣ ಹೆಸರು ಬದಲಾವಣೆ ಅಥವಾ ಇತರೆ ಪ್ರಮುಖ ತಿದ್ದುಪಡಿ ಮಾಡಬೇಕಾದರೆ ನೋಂದಣಿ ಮಾಡುವುದರ ಮೂಲಕ ಅಂದರೆ ರಿಜಿಸ್ಟರ್ ಮಾಡುವ ಮೂಲಕ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತಾಸಿಲ್ದಾರ ಕಚೇರಿಗೆ ಸಬ್ ರಿಜಿಸ್ಟರ್ ಆಫೀಸ್ ಗೆ ನೀವು ಭೇಟಿಕೊಟ್ಟು ತಿಳಿದುಕೊಳ್ಳಬಹುದು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.