ಚೈತ್ರ ನವರಾತ್ರಿಯ ಒಂಬತ್ತನೇ ದಿನದಂದು ರಾಮನವಮಿಯನ್ನು ಯಾವಾಗ ಆಚರಿಸಲಾಗುತ್ತದೆ. ಪೂಜಾ ಸಮಯ ಪೂಜಾ ವಿಧಾನ ಪ್ರಾಮುಖ್ಯತೆ ಮತ್ತು ಶ್ರೀ ರಾಮಜನ್ಮ ಕತೆಯನ್ನು ತಿಳಿಯೋಣ.ರಾಮನವಮಿಯನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಭತ್ತನೇ ದಿನದಂದು ಆಚರಿಸಲಾಗುತ್ತದೆ.ಹಿಂದೂ ಹೊಸ ವರ್ಷವು ಚೈತ್ರಮಾಸದಿಂದ ಪ್ರಾರಂಭವಾಗುತ್ತದೆ. ಚೈತ್ರ ನವರಾತ್ರಿ ಹಬ್ಬವನ್ನು ಸಹ ಈ ತಿಂಗಳಲ್ಲಿ ಆಚರಿಸಲಾಗುತ್ತದೆ. ಭಗವಾನ್ ಶ್ರೀರಾಮನು ಚೈತ್ರ ನವರಾತ್ರಿಯ ಒಂಬತ್ತನೇ ದಿನದಂದು ಜನಿಸಿದನು.ಅದಕ್ಕಾಗಿ ಈ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ದಿನ ಕನ್ಯಾ ಪೂಜೆಯನ್ನು ಸಹ ನಡೆಸಲಾಗುತ್ತದೆ.
ಹಾಗಾದರೆ 2024 ರಲ್ಲಿ ಬರುವ ರಾಮ ನವಮಿ ಯಾವಾಗ ಪೂಜೆಯ ಸಮಯ ರಾಮನವಮಿ ಹಬ್ಬವನ್ನು ಏಪ್ರಿಲ್ ಹದಿನೇಳನೇ ತಾರೀಕು ಬುಧವಾರದಂದು ಆಚರಿಸಲಾಗುತ್ತದೆ. ಶ್ರೀ ರಾಮನು ಮಧ್ಯಾಹ್ನದ ಸಮಯದಲ್ಲಿ ಜನಿಸಿದನು ಎಂಬ ನಂಬಿಕೆ ಇದೆ. ಮಧ್ಯಾಹ್ನದ ಪೂಜಾ ಮುಹೂರ್ತ ಏಪ್ರಿಲ್ ಹದಿನೇಳನೇ ತಾರೀಖು ಬೆಳಿಗ್ಗೆ 11:00 ಘಂಟೆ ಮೂರು ನಿಮಿಷದಿಂದ ಮಧ್ಯಾಹ್ನ 1:00 ಘಂಟೆ 38 ನಿಮಿಷದವರಿಗೆ ನವಮಿ ತಿಥಿ ಪ್ರಾರಂಭವಾಗುವುದು ಏಪ್ರಿಲ್ ಹದಿನಾರನೇ ತಾರೀಖು ಮಧ್ಯಾಹ್ನ 1:23 ನಿಮಿಷಕ್ಕೆ ಪ್ರಾರಂಭವಾಗಿ ನವಮಿ ತಿಥಿ ಅಂತ್ಯವಾಗುವುದು ಏಪ್ರಿಲ್ ಹದಿನೇಳನೇ ತಾರೀಖು ಮಧ್ಯಾಹ್ನ 3:00 ಘಂಟೆ 14 ನಿಮಿಷಕ್ಕೆ.ಶಾಸ್ತ್ರಗಳ ಪ್ರಕಾರ ರಾಮ ನವಮಿಯ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ.
ಶ್ರೀ ರಾಮ ಮತ್ತು ಸೀತೆ ಮಾತೆಯ ವಿಗ್ರಹ ಅಥವಾ ಫೋಟೋವನ್ನು ಪೂಜಾ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು. ಇದರ ನಂತರ ವಿಗ್ರಹವನ್ನು ಮಾಲೆಯಿಂದ ಅಲಂಕರಿಸಿ ಶ್ರೀಗಂಧ, ಅರಿಶಿನ ಕುಂಕುಮ ತಿಲಕವನ್ನು ಹಚ್ಚಿ ಎಲ್ಲ ಪೂಜಾ ಸಾಮಗ್ರಿಗಳು, ನೈವೇದ್ಯ ಹಣ್ಣುಗಳು ಮತ್ತು ಧೂಪ ದ್ರವ್ಯಗಳನ್ನು ಅರ್ಪಿಸಿ, ಇದರ ನಂತರ ಮಂತ್ರಪಠಣ ರಾಮ ರಕ್ಷಾ ಸ್ತೋತ್ರ ಮತ್ತು ರಾಮನ ಮಂತ್ರಗಳನ್ನು ಜಪಿಸುತ್ತ ಕೊನೆಯಲ್ಲಿ ಆರತಿ ಮಾಡಿ ಧಾರ್ಮಿಕ ನಂಬಿಕೆಯ ಪ್ರಕಾರ ಶ್ರೀ ರಾಮ ಅವರ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಕಮಲದ ಹೂಗಳನ್ನು ಅರ್ಪಿಸುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ವಿಷ್ಣುವಿನ ದಶಾವತಾರದ ರೂಪಗಳಲ್ಲಿ ಶ್ರೀರಾಮ ರೂಪನು ಕೂಡ ಒಂದು ವಿಷ್ಣುವಿಗೆ ತುಂಬಾನೇ ಪ್ರಿಯವಾದ ತುಳಸಿ ಮಾಲೆ.
ಈ ದಿನದಂದು ರಾಮನಿಗೂ ಕೂಡ ತುಳಸಿ ಮಾಲೆಯನ್ನು ಅರ್ಪಿಸುವುದನ್ನು ಮರೆಯಬೇಡಿ.ಧಾರ್ಮಿಕ ನಂಬಿಕೆಯ ಪ್ರಕಾರ ಸನಾತನ ಧರ್ಮದ ಧರ್ಮವನ್ನು ರಕ್ಷಿಸಲು. ಭಗವಾನ್ ವಿಷ್ಣುವು ಭಗವಾನ್ ರಾಮನ ಅವತಾರವನ್ನು ತೆಗೆದುಕೊಂಡರು. ಈ ದಿನದಂದು ಭಗವಾನ್ ರಾಮನನ್ನು ಪೂಜಿಸುವುದರಿಂದ ಖ್ಯಾತಿ ಮತ್ತು ಕೀರ್ತಿ ಬರುತ್ತದೆ ಮತ್ತು ಜೀವನದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಈ ದಿನ ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದು ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಸಹ ವಿಶೇಷ ಮಹತ್ವವನ್ನು ಹೊಂದಿದೆ. ಭಗವಾನ್ ಶ್ರೀರಾಮನು ಲಂಕಾವನ್ನು ವಶಪಡಿಸಿಕೊಂಡ ಕಾರಣಕ್ಕಾಗಿ ದುರ್ಗಾ ದೇವಿಯನ್ನು ಪೂಜಿಸಿದನೆಂದು ಹೇಳಲಾಗುತ್ತದೆ.