ನಮಸ್ಕಾರ ಹಳ್ಳಿಗಳಲ್ಲಿ ಬರುವ ಮನೆ ಮಾಲೀಕರಿಗೆ ಅಂದರೆ ಗ್ರಾಮಗಳಲ್ಲಿ ಇರುವ ಮನೆ ಮಾಲೀಕರಿಗೆ ಈ ಮಾಹಿತಿ ತುಂಬಾ ಇಂಪಾರ್ಟೆಂಟ್ ಅಂತ ಹೇಳಬಹುದು ಸಾಮಾನ್ಯವಾಗಿ ಎಲ್ಲರಿಗೂ ಗ್ರಾಮಗಳಲ್ಲಿ ಹಳ್ಳಿಗಳಲ್ಲಿ ಮನೆ ಇದ್ದೇ ಇರುತ್ತದೆ ಆದರೆ ಖಾತೆ ಮಾಡುತ್ತಿರುವುದಿಲ್ಲ ಅಥವಾ ಖಾತೆ ಬದಲಾವಣೆ ಮಾಡಿರುವುದಿಲ್ಲ ಅದರಂತೆ ಮನೆ ಮಾಲೀಕ ಮನೆ ಓನರ್ ಮರಣ ಹೊಂದಿದಾಗ ಅವನ ಮಾಲೀಕತ್ವದಲ್ಲಿರುವ ಮನೆ ಹಕ್ಕು ಬದಲಾವಣೆ ಮಾಡಿಸುವಲ್ಲಿ ಯಾರು ಸಹ ಹೋಗಿರುವುದಿಲ್ಲ ಇದರ ಪರಿಣಾಮವಾಗಿ ತೊಡಕುಗಳು ತೊಂದರೆಗಳು ಸಾಮಾನ್ಯ ಜನರು ಅನುಭವಿಸುವುದು ನೀವು ನೋಡಿರುತ್ತೀರಾ.
ಹಾಗಾದರೆ ಗ್ರಾಮದ ಒಳಗಡೆ ಹಳ್ಳಿಗಳ ಒಳಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶದಲ್ಲಿ ಇರುವ ಮನೆಗಳನ್ನು ಈಸ್ವತ್ತು ಹೇಗೆ ಮಾಡಿಸಿಕೊಳ್ಳಬೇಕು ಈಸ್ವತ್ತಿಗೆ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಮುಖ್ಯವಾಗಿ ಬೇಕಾಗುತ್ತದೆ ಈಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ ಬಳಿಕ ಯಾವ ರೀತಿ ಇರುತ್ತದೆ ಅದರಂತೆ ಮುಖ್ಯವಾಗಿ ಈಸ್ವತ್ತು ಅಂದರೆ ಏನು ಮತ್ತು ಈ ಸ್ವತ್ತು ನಿಯಮಗಳು ಮತ್ತು ಉಪಯೋಗಗಳ ಬಗ್ಗೆ ನಿಮಗೆ ತಿಳಿಸಿ ಕೊಡುತ್ತೇವೆ ಆಸ್ತಿಗೆ ಈಸ್ವತ್ತು ಬೇಕೇ ಬೇಕು ಜನರಿಗೆ ಇದರ ಅರಿವು ಮೂಡಲು ಮಾಹಿತಿಯನ್ನು ಹಂಚಿಕೊಳ್ಳಿ.
ಮೊದಲಿಗೆ ಈಸ್ವತ್ತು ಏನೆಂದರೆ ನೋಡೋಣ. ಹೆಸರೇ ಹೇಳುವಂತೆ ತಂತ್ರಾಂಶ ಎಂದು ಅರ್ಥ ಇದನ್ನು ಎಲೆಕ್ಟ್ರಾನಿಕ್ ಅಥವಾ ಆನ್ಲೈನ್ ಸೇವೆ ಅಂತ ಕೇಳಬಹುದು ಹಾಗೆ ಸ್ವತ್ತು ಎಂದರೆ ಆಸ್ತಿ ಎಂದು ಅರ್ಥ ಸಂಕ್ಷಿಪ್ತವಾಗಿ ಹೇಳುವುದಾದರೆ ಈಸ್ವತ್ತು ಎಂದರೆ ಆಸ್ತಿಗಳನ್ನು ಗಣಕೀಕರಣ ಮೂಲಕ ಖಾತೆ ಮಾಡಿ ಒದಗಿಸುವ ಸೇವೆ ಈಸ್ವತ್ತು ಎಂದು ಕರೆಯಬಹುದು ಬೇಕಾಗುವ ದಾಖಲೆಗಳು. ಯಾವ ಯಾವ ದಾಖಲೆಗಳು ನೀವು ಪ್ರಿಪೇರ್ ಮಾಡಬೇಕಾಗುತ್ತದೆ ನೋಡೋಣ ಒಂದನೆಯದು ಗ್ರಾಮ ಠಣ ಮನೆ ಹಕ್ಕು ಪತ್ರ. ಹೊಸದಾಗಿ ಸೃಷ್ಟಿಸಿದ ಮನೆಪತ್ರ ಆಗಿರಬಹುದು ಅಥವಾ ಮನೆಯ ಹೊರಭಾಗದಲ್ಲಿ ಫ್ಲಾಟ್ ಗಳಲ್ಲಿ ನಿಮ್ಮ ಮನೆ ಇದ್ದರೆ ಅದರ ನೋಂದಣಿ ಪತ್ರ ಕೊಡಬೇಕಾಗಿ ಬರುತ್ತದೆ ಎರಡನೆಯದು ಅರ್ಜಿದಾರರ ಆಧಾರ್ ಕಾರ್ಡ್ ಬೇಕೇ ಬೇಕಾಗುತ್ತದೆ.
ಮೂರನೆಯದು ಅರ್ಜಿದಾರರ ಫೋಟೋ ಸಹ ಬೇಕು ನಾಲಕ್ಕನೆಯದು ಮನೆ ನಕ್ಷೆ ಕಡ್ಡಾಯವಾಗಿ ಕೊಡಬೇಕು ಇದು ಇಲ್ಲದಿದ್ದರೆ ತಹಸಿಲ್ದಾರ ಕಚೇರಿಯಲ್ಲಿ ಕಚ್ಚಾ ನಕ್ಷೆ ಮಾಡಿಸಿಕೊಡಬೇಕಾಗಿ ಬರುವುದು ಐದನೆಯದು ನಿಗದಿತ ನಮೂನೆ ಸಹ ಸಿಗುತ್ತದೆ ಆ ನಮೂನೆ ನೀವು ಭರ್ತಿ ಮಾಡಬೇಕು ಸಂಪೂರ್ಣವಾಗಿ. ಆರನೆಯದು ಕಟ್ಟಡದ ತೆರಿಗೆ ರಶಿದಿ ಅಥವಾ ವಿದ್ಯುತ್ ಬಿಲ್. ಒಂದುವೇಳೆ ಖಾಲಿ ನಿವೇಶನ ಅಂದರೆ ಖಾಲಿ ಸೈಟ್ ಖರೀದಿ ಮಾಡಿದರೆ ಇದು ಅವಶ್ಯಕತೆ ಇರುವುದಿಲ್ಲ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.