ನಮಗೆ ಗೊತ್ತಿರುವ ಹಾಗೆ ಚಿಕ್ಕ ಮಕ್ಕಳಿಗೆ ಯಾವುದೇ ರೀತಿಯಾದಂತಹ ವಸ್ತುವನ್ನು ಕೊಟ್ಟರೆ ಅವುಗಳ ಬಗ್ಗೆ ಹೆಚ್ಚಿನ ಯೋಚನೆ ಮಾಡದೆ ಸೀದಾ ಬಾಯಿಗೆ ಹಾಕಿಕೊಂಡು ಬಿಡುತ್ತಾರೆ ಅದೇ ರೀತಿ 11 ತಿಂಗಳ ಮಗು ಜೀವಂತವಾಗಿರುವ ಮೀನನ್ನು ನುಂಗಿದೆ. ಹೌದು, ಈ ಒಂದು ವಿಷಯದ ಬಗ್ಗೆ ಮಾಹಿತಿಯನ್ನು ನೀಡ್ತೀನಿ. ಮನೆಯಲ್ಲಿ ಅಡುಗೆ ಮಾಡಲು ಇಟ್ಟಿದ್ದ ಮೀನನ್ನು ಆಕಸ್ಮಿಕವಾಗಿ ನುಂಗಿದ 11 ತಿಂಗಳ ಮಗುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ತಂಡ ರಕ್ಷಿಸಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಗಂಜೇನಹಳ್ಳಿಯ ಯೋಗೇಶ್ ಮತ್ತು ರೋಜಾ ದಂಪತಿಯ ಪುತ್ರ ಪ್ರತೀಕ್ ಅಡುಗೆ ಮನೆಯಲ್ಲಿ ಸ್ವಚ್ಛಗೊಳಿಸಲು ಇಟ್ಟಿದ್ದ ಮೀನನ್ನು ಸೇವಿಸಿದ್ದಾನೆ.
ಆಟವಾಡುತ್ತಾ ಆ ಮೀನನ್ನು ಸೇವಿಸಿದ್ದಾನೆ.10 ಸೆಂಟಿ ಮೀಟರ್ ಉದ್ದ ಮೂರೂವರೆ ಸೆಂಟಿ ಮೀಟರ್ ಅಗಲವಾಗಿರುವ ಮೀನು ನುಂಗಿ ನುಂಗಿಬಿಟ್ಟಿದ್ದಾನೆ. ದಂಪತಿಗಳು ಮಗುವನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಸಾಗಿಸಿದರು. ಮಕ್ಕಳ ಶಸ್ತ್ರಚಿಕಿತ್ಸಕರ ತಂಡವು ತ್ವರಿತವಾಗಿ ಕಾರ್ಯಪ್ರವೃತ್ತರಾದರು ಮತ್ತು 11.3 ಸೆಂ.ಮೀ ಉದ್ದದ ಮತ್ತು ಮಗುವಿನ ಶ್ವಾಸನಾಳವನ್ನು ನಿರ್ಬಂಧಿಸುತ್ತಿದ್ದ ಮೀನುಗಳನ್ನು ಎಚ್ಚರಿಕೆಯಿಂದ ಹೊರತೆಗೆದರು.
ಮಕ್ಕಳು ಆಟವಾಡುತ್ತಿರುವಂತಹ ಸಂದರ್ಭದಲ್ಲಿ ಗಾಜಿನ ವಸ್ತುಗಳು ಆಗಿರಬಹುದು. ಇವುಗಳ ಜೊತೆ ಮಗು ಆಟ ಆಡ್ತಾ ಇದೆ ಅಂತ ಅಂದ್ರೆ ಸ್ವಲ್ಪ ಗಮನ ಹರಿಸಬೇಕು. ಇಲ್ಲ ಅಂದ್ರೆ ಮುಂದೆ ಆಗುವಂತಹ ಘಟನೆಗಳ ಬಗ್ಗೆ ನಮಗೆ ತಿಳುವಳಿಕೆ ಇರುವುದಿಲ್ಲ ಹಾಗಾಗಿ ಆದಷ್ಟು ನಾವು ಜ್ಞಾನವನ್ನು ವಹಿಸಬೇಕು.ತಗೊಂಡ ಇರುವಂತಹ ವಸ್ತು ಸೀದಾ ಬಾಯಿಗೆ ಹೋಗುವುದು, ಮಕ್ಕಳಿಗೆ ಯಾವುದೇ ವಸ್ತು ಕೊಟ್ಟು ನೋಡಿ ಅದು ಸೀದಾ ಬಾಯಿಗೆ ಹಾಕಿಕೊಂಡು ಬಿಡುತ್ತೆ ಏಕೆಂದರೆ ಇದರ ಬಗ್ಗೆ ಅವರಿಗೆ ಹೆಚ್ಚಿನ ಸೂಕ್ಷ್ಮತೆ ಇರುವುದಿಲ್ಲ ಅದೇ ರೀತಿ ಜೊತೆ ಆಟ ಆಡ್ತಾ ಇರೋವಂತಹ ಪ್ರತೀಕ ಜೀವಂತವಾಗಿರುವ ಮೀನನ್ನು ಸಹ ನುಂಗಿಬಿಟ್ಟಿದ್ದಾನೆ.
ಇವರ ತಂದೆ ತಾಯಿಗಳು ಶಿವಮೊಗ್ಗ ಆಸ್ಪತ್ರೆಗೆ ಮಗುವನ್ನ ಕರ್ಕೊಂಡು ಹೋಗಿದ್ದಾರೆ. ಅಲ್ಲಿರುವಂತಹ ವೈದ್ಯರು ಮಗುವಿನ ಪ್ರಾಣ ಉಳಿಸಿವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಮಗುವಿನ ಪ್ರಾಣವನ್ನು ಉಳಿಸಲಿಕ್ಕೆ ಆ ಮೀನನ್ನು ಅಂದ್ರೆ 10 ಸೆಂಟಿ ಮೀಟರ್ ಉದ್ದ ಮೂರೂವರೆ ಸೆಂಟಿ ಮೀಟರ್ ಅಗಲವಾಗಿರುವಂತಹ ಮೀನು ತೆಗೆದು ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.
ಸ್ನೇಹಿತರೆ ಹರಸಾಹಸ ಪಟ್ಟಂತಹ ವೈದ್ಯರಿಗೆ ನಾವೆಲ್ಲ ನೀವೆಲ್ಲಾ ಒಂದು ನಮನವನ್ನು ಸಲ್ಲಿಸಬೇಕು. ಹೌದು, ಯಾಕೆಂದರೆ ತಂದೆ ತಾಯಿ ಎಷ್ಟು ಗಾಬರಿ ಬಿದ್ದಿರುತ್ತಾರೆ. ಮಗುವಿನ ಪ್ರಾಣ ಉಳಿಸಿ ಆ ತಂದೆ ತಾಯಿಗೆ ಅವರ ಮಗು ವಾಪಸ್ ಮರಳಿ ಕೊಟ್ಟಿದ್ದಾರೆ. ಮಕ್ಕಳ ಸುತ್ತಲಿನ ಸಣ್ಣಪುಟ್ಟ ವಸ್ತುಗಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸುವಂತೆ ವೈದ್ಯರು ತಿಳಿಸಿದ್ದಾರೆ. ಮಕ್ಕಳು ಕಡಲೆಕಾಯಿ, ಗೋಲಿ ಅಥವಾ ಸಣ್ಣ ಆಟಿಕೆಗಳಂತಹ ವಸ್ತುಗಳನ್ನು ನುಂಗುವುದು ಸಾಮಾನ್ಯವಾಗಿದೆ, ಅವರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ.