ಸ್ನೇಹಿತರೇ ಯಾವುದೇ ಒಂದು ವ್ಯಕ್ತಿ ಕಷ್ಟ ಅಂದ ಬಂದಾಗ ಮಾತ್ರ ಅದಕ್ಕೆ ಪರಿಹಾರ ಹೇಗಾದರೂ ಮಾಡಿ ಕಂಡುಹಿಡಿಯುತ್ತಾನೆ ಕೆಲವೊಮ್ಮೆ ದೊಡ್ಡ ದೊಡ್ಡ ಸಮಸ್ಯೆಗೆ ಪರಿಹಾರ ಅತಿ ಸುಲಭವಾಗಿ ಇದ್ದರೂ ಕೂಡ ಯೋಚನೆ ಆಗದೇ ಇರುವಂತಹ ಕಾರಣಕ್ಕಾಗಿ ಅವುಗಳನ್ನು ನಾವು ಕೈ ಬಿಟ್ಟು ಬಿಡುತ್ತೇವೆ . ಜೊತೆಗೆ ಯಾರಾದರೂ ಸಹಾಯಕ್ಕೆ ಬಂದರೆ ಮಾತ್ರ ಅದರಲ್ಲಿ ನಾವು ಯಶಸ್ಸು ಕಾಣುವುದು ಸಹಜ ಇವತ್ತಿನ ಮಾಹಿತಿ ನೀರು ಇಲ್ಲದೆ ಇದ್ದಾಗ ಯಾವ ರೀತಿ ಒಬ್ಬ ಮಹಿಳೆ ತನ್ನ ಊರಿನ ಮಹಿಳೆಯರ ಜೊತೆಗೆ ಒಂದು ಗುಡ್ಡವನ್ನೇ ಕಳೆದು ಬೇರೆ ಕಡೆ ಹಾಕಿದ್ದಾರೆ ನಂಬಲು ಆಶ್ಚರ್ಯವಾದರೂ ಕೂಡ ಇದೇ ಸತ್ಯವಾಗಿದೆ.
ಮಧ್ಯ ಪ್ರದೇಶದ ರಾಜ್ಯದಲ್ಲಿ ಒಂದು ಹಳ್ಳಿ ಇದೆ. ಅದರ ಹೆಸರು ಆಕೃತ ಗ್ರಾಮ. ಈ ಊರಲ್ಲಿ 1400 ಜನ ವಾಸವಿದ್ದಾರೆ.ಈ ಊರಿನ ಸುತ್ತಮುತ್ತ ಬಾವಿಗಳು ಹಾಗು ಒಂದು ಕೆರೆಯಂತೆ ಮಳೆಗಾಲದಲ್ಲಿ ಈ ಊರಿನ ಜನರಿಗೆ ಕುಡಿಯಲು ಹಾಗೂ ವ್ಯವಸಾಯ ಮಾಡಲು ನೀರಿನ ಸಮಸ್ಯೆ ಇಲ್ಲ. ಆದರೆ ಬೇಸಿಗೆ ಬಂದರೆ ಸಾಕು ನೀರಿಗಾಗಿ ಆಹಾಕಾರ ಬಾವಿಗಳು ಬತ್ತಿ ಹೋಗುತ್ತವೆ. ಕೆರೆಗಳು ಖಾಲಿಯಾಗುತ್ತಿವೆ.ಮನೆಗೆ ಕುಡಿಯೋಕೆ ವ್ಯವಸಾಯಕ್ಕೆ ಯಾವುದಕ್ಕೂ ನೀರು ಸಿಗಲ್ಲ. ಆದರೆ ಇವರಿಗೆ ಒಂದು ಆಶಾಕಿರಣ ಇದೆ. ಅದೇನಂದ್ರೆ ಗ್ರಾಮದ ಪಕ್ಕದಲ್ಲಿರುವ ಬೆಟ್ಟಗಳು ಹೌದು ಈ ಬೆಟ್ಟಗಳಿಂದ ವರ್ಷಪೂರ್ತಿ ನೀರು ಹರಿದು ಬರುತ್ತದೆ. ಆದರೆ ಆ ನೀರು ಬೆಟ್ಟಗಳ ಆಚೆ ಇರುವ ನದಿಗೆ ಸೇರುತ್ತದೆ.
ಹಾಗಾಗಿ ಬೆಟ್ಟಗಳಿಂದ ಹರಿದು ಬರುವ ನೀರನ್ನ ಊರಿನ ಕೆರೆಗೆ ಕನೆಕ್ಟ್ ಮಾಡಿದ್ರೆ ಈ ಗ್ರಾಮಕ್ಕೆ ಯಾವುದೇ ನೀರಿನ ಸಮಸ್ಯೆ ಇರುವುದಿಲ್ಲ.ಆದರೆ ಬೆಟ್ಟಗಳಿಂದ ಹರಿಯುವ ನೀರಿನ ಊರಿಗೆ ತರೋದು ಬೆಟ್ಟದಷ್ಟು ಕಷ್ಟ. ಯಾಕಂದ್ರೆ ಒಂದು ಬೆಟ್ಟ ಅಡ್ಡ ಇದೆ. ಈ ಬೆಟ್ಟವನ್ನ ಕಡಿದು ಹಳ್ಳಿಗೆ ನೀರು ತರೋದು ಈ ಗ್ರಾಮದ ಜನರ ಎಷ್ಟು ವರ್ಷಗಳ ಕನಸಾಗಿತ್ತು.ಆದರೆ ಇದನ್ನ ಮಾಡಲು ಅರಣ್ಯ ಇಲಾಖೆ ಅವಕಾಶ ಕೊಡದ ಕಾರಣ ಎಲ್ಲರೂ ಸುಮ್ಮನಾಗಿದ್ದರು. ಆದರೆ ನೀರಿಗಾಗಿ ಪರದಾಡಿ ಬೇಸತ್ತ 19 ವರ್ಷದ ಬಬಿತಾ ಅನ್ನೋ ಹುಡುಗಿ ಕೊನೆಗೂ ಧೈರ್ಯ ಮಾಡಿಯೇ ಬಿಟ್ಟಳು.
ಪ್ರತಿದಿನ ಅರಣ್ಯ ಇಲಾಖೆಗಳ ಸುತ್ತ ತಿರುಗಾಡಿದ ಬಬಿತ ತಮ್ಮ ಗೋಳನ್ನ ಅವರಿಗೆ ಮನವರಿಕೆ ಮಾಡಿ ಕೊನೆಗೂ ಅರಣ್ಯ ಇಲಾಖೆಯಿಂದ ಪರ್ಮಿಶನ್ ತಂದು ಬಿಟ್ಟಳು. ಪರ್ಮಿಷನ್ ಬಂದ್ಮೇಲೆ ಹಳ್ಳಿಯ ಪುರುಷ ಸಿಂಹಗಳು ಸುಮ್ಮನೆ ಇದ್ದು ಬಿಟ್ಟರು. ಆಗ ತನ್ನ 12 ಜನ ಗೆಳತಿಯರ ತಂಡ ಕಟ್ಟಿಕೊಂಡ ಬಬಿತಾ ಬೆಟ್ಟ ಕಡಿಯಲು ಆರಂಭಿಸಿದರು ನಂತರ ಹಳ್ಳಿಯ 200 ಮಹಿಳೆಯರು ಸೇರಿಕೊಂಡು ಮನೆಯಲ್ಲಿ ಎಲ್ಲ ಕೆಲಸ ಮುಗಿದ ಮೇಲೆ ಬೆಟ್ಟದ ಕೆಲಸ ಹಿಡಿಯುತ್ತಿದ್ದ ಮಹಿಳೆಯರು ತಮ್ಮ ಗುರಿಯನ್ನು ಮುಟ್ಟಿಯ ಬಿಟ್ಟರು ಇದಾದ ನಂತರ ಈ ಊರಿಗೆ ಸುಲಭವಾಗಿ ನೀರು ಬರಲು ಪ್ರಾರಂಭಿಸಿತು.