ಭಾರತ ದೇಶದಲ್ಲಿ ಬಿಸ್ಕತ್ ಅಂತ ಹೆಸರು ಬಂದ್ರೆ. ಎಲ್ಲರಿಗೂ ನೆನಪಾಗೋದು. ಗೋಲ್ಡ್ ಪ್ಯಾಕ್ ನಲ್ಲಿ ಬರುವ ಪಾರ್ಲೆ ಜಿ ಬಿಸ್ಕತ್ ಬಿಸ್ಕತ್ ರುಚಿ ಸವಿಯದೇ ಇರುವವರು ಬಹುಶಃ ಯಾರೂ ಇಲ್ಲ.ಇವತ್ತಿಗೂ ಕೂಡ ಪಾರ್ಲೇಜಿಗೆ ಕಂಪೆನಿ ಹುಟ್ಟಿಲ್ಲ. ಬಿಸ್ಕತ್ ಜಗತ್ತಿನಲ್ಲಿ ಪಾರ್ಲೇಜಿ ರಾಜ .1979ರಲ್ಲಿ ಮೋಹನ್ಲಾಲ್ ದಯಾಳು ಎಂಬ ರೇಷ್ಮೆ ವ್ಯಾಪಾರಿ ಒಂದು ಹಳೆಯದಾದ ಕಾರ್ಖಾನೆ ಖರೀದಿ ಮಾಡುತ್ತಾರೆ.ಅವರು ಸ್ವದೇಶಿ ಆಂದೋಲನದಿಂದ ಪ್ರೇರೇಪಿತರಾಗಿರುತ್ತಾರೆ. ಮೋಹನ್ ಲಾಲ್ ಅವರು ಸ್ವಲ್ಪ ವರ್ಷಗಳ ಕಾಲ ಜರ್ಮನಿಗೆ ಹೋಗುತ್ತಾರೆ. ಮೋಹನ್ ಲಾಲ್ ಅವರು ಭಾರತಕ್ಕೆ ವಾಪಸ್ ಬರುವಾಗ 60,000 ಕೊಟ್ಟು ಒಂದು ಮಷೀನ್ ತರುತ್ತಾರೆ.
ಈ ಮಷೀನ್ ನಲ್ಲಿ ಎಲ್ಲ ರೀತಿಯ ಸಿಹಿ ಪದಾರ್ಥಗಳನ್ನು ಉತ್ಪನ್ನ ಮಾಡಿ ಮಾರಬಹುದು. ಮೋಹನ್ ಲಾಲ್ ಅವರ ಕಾರ್ಖಾನೆಯಲ್ಲಿ 12 ಜನ ಕೆಲಸಗಾರರು ಇವರೆಲ್ಲರೂ ಮೋಹನ್ ಲಾಲ್ ಕುಟುಂಬದವರು. ಇಂಜಿನಿಯರ್ ಮ್ಯಾನೇಜರ್ ಸಪ್ಲೈಯರ್ ಆಗಿ ಕೆಲಸ ಮಾಡುತ್ತಾರೆ.ಇವರು ಕೆಲಸದಲ್ಲಿ ಎಷ್ಟು ಮುಳುಗಿ ಹೋಗುತ್ತಾರೆ ಅಂದ್ರೆ ಕಂಪನಿ ಹೆಸರನ್ನು ಇಡಲು ಮರತೆ ಬಿಡುತ್ತಾರೆ. ಮೋಹನ್ ಲಾಲ್ ಮತ್ತು ಕುಟುಂಬದವರು ಚರ್ಚೆ ಮಾಡಿ ಕಂಪನಿ ಹೆಸರು ಪಾರ್ಲೆ ಎಂದು ನಾಮಕರಣ ಮಾಡುತ್ತಾರೆ. ಪಾರ್ಲೆ ಒಂದು ಮುಂಬೈಯಲ್ಲಿರುವ ಹಳ್ಳಿಯ ಹೆಸರು ಇದೆ. ಹಳ್ಳಿಯಲ್ಲಿ ಕಾರ್ಖಾನೆ ಇರುವ ಕಾರಣ ಪಾರ್ಲೆ ಹೆಸರು ಸೂಚಿಸುತ್ತಾರೆ.
ಪಾರ್ಲೆ ಕಂಪನಿಯಲ್ಲಿ ಮೊದಲು ಮಾರಾಟ ಶುರು ಮಾಡಿದ್ದು ಆರೇಂಜ್ ಕ್ಯಾಂಡಿ. 1039ರಲ್ಲಿ ಬಿಸ್ಕತ್ ಉತ್ಪಾದನೆ ಶುರು ಮಾಡುತ್ತಾರೆ. ಪಾರ್ಲೆ ಬಿಸ್ಕತ್ ಮಾರುಕಟ್ಟೆಗೆ ಬರುವ ತನಕ ಬಿಸ್ಕತ್ಗಳು ಬೇರೆ ದೇಶದಿಂದ ಬರುತ್ತಿತ್ತು. ಇದರ ಬೆಲೆ ಕೂಡ ದುಬಾರಿ ದುಡ್ಡು ಇದ್ದವರಿಗೆ ಮಾತ್ರ ಬಿಸ್ಕತ್ ಮಾರುಕಟ್ಟೆಯಲ್ಲಿ ಯುನೈಟೆಡ್ ಬಿಸ್ಕತ್, ಬ್ರಿಟಾನಿಯಾ ಇಡೀ ಭಾರತ ದೇಶದಲ್ಲಿ ನಾಲ್ಕು ಕಂಪನಿಯ ಬಿಸ್ಕತ್ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಇದೇ ಸಮಯದಲ್ಲಿ ಪಾರ್ಲೆ ಕಂಪನಿ ಬ್ರಿಟಿಷ್ ಕಂಪನಿ ಬಿಸ್ಕತ್ಗಿಂತ ಅತಿ ಹೆಚ್ಚು ಕಡಿಮೆ ಬೆಲೆಯಲ್ಲಿ ಮಾರಾಟ ಶುರು ಮಾಡುತ್ತೆ. ಜನರಿಗೂ ಕೂಡ ಇದರ ರುಚಿ ತುಂಬಾ ಇಷ್ಟ ಆಗುತ್ತೆ.1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುತ್ತೆ.
ಪಾಕಿಸ್ತಾನ ಭಾರತದಿಂದ ವಿಭಜನೆ ಆಗುತ್ತೆ. ಆ ಸಮಯದಲ್ಲಿ ಗೋಧಿ ಪಾಕಿಸ್ತಾನದಿಂದ ಖರೀದಿ ಮಾಡಲಾಗುತ್ತಿತ್ತು. ಆದರೆ ಪಾಕಿಸ್ತಾನ ವಿಭಜನೆ ಆದ ಮೇಲೆ ಭಾರತ ದೇಶದಲ್ಲಿ ಗೋಧಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಕಾಣುತ್ತೆ. ಪಾರ್ಲೆ ಬಿಸ್ಕತ್ ಗೊತ್ತಿಲ್ಲದ ಕಾರಣ ಬಾರ್ಲಿಯಲ್ಲಿ ಬಿಸ್ಕತ್ ಮಾಡಲು ಶುರು ಮಾಡುತ್ತಾರೆ.ಗ್ರಾಹಕರಿಗೆ ವಿನಂತಿಸುತ್ತಾರೆ. ಗೋಧಿ ಬರುವ ತನಕ ಬಾರ್ಲಿ ಬಿಸ್ಕತ್ ಸೇವಿಸಿ ಅಂತ 1960ರಲ್ಲಿ ಬೇರೆ ಬೇರೆ ಕಂಪನಿಯ ಗ್ಲೂಕೋಸ್ ಬಿಸ್ಕಟ್ ಮಾರುಕಟ್ಟೆಗೆ ಬರುತ್ತೆ. ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಒಂದು ಗೊಂದಲ ಶುರು ಆಗುತ್ತೆ.
ಗ್ರಾಹಕರು ಬಿಸ್ಕತ್ ಖರೀದಿ ಮಾಡಲು ಅಂಗಡಿಗೆ ಕೇಳುತ್ತಿದ್ದು, ಗ್ಲೂಕೋಸ್ ಬಿಸ್ಕಟ್ ಕೊಡಿ ಅಂತ ವಿವಿಧ ಗ್ಲೂಕೋಸ್ ಬಿಸ್ಕಟ್ ಮಾರುಕಟ್ಟೆಗೆ ಬಂದಿದ್ದ ಕಾರಣ ಪಾರ್ಲೇಜಿ ಮಾರುಕಟ್ಟೆ ಕುಸಿಯುತ್ತ ಪಾರ್ಲೆ ಕಂಪನಿ ತಮ್ಮ ಪ್ಯಾಕ್ ಬದಲಾಯಿಸುತ್ತೆ. ಮೋಹನ್ ಲಾಲ್ ಅವರ ಪುತ್ರ ಮಗನ್ಲಾಲ್ ತಮ್ಮ ಕಲ್ಪನೆಯಲ್ಲಿ ಒಂದು ಸಣ್ಣ ಹುಡುಗಿಯ ಚಿತ್ರ ಬಿಡಿಸಿ ಪಾರ್ಲೆ ಕಂಪನಿಯ ಪ್ಯಾಕ್ ಮೇಲೆ ಪ್ರಿಂಟ್ ಹಾಕಿಸುತ್ತಾರೆ ಜಿ ಅಂದ್ರೆ ಗ್ಲೂಕೋಸ್ 1998 ರಲ್ಲಿ ಪಾರ್ಲೆ ಜಿ ಬಿಸ್ಕತ್ ಮೊದಲ ಜಾಹೀರಾತು ಬಿಡುಗಡೆ ಮಾಡಲಾಗುತ್ತದೆ. ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು 98 ರ ದಶಕದ ಸೂಪರ್ ಹೀರೋ ಶಕ್ತಿಮಾನ್. ಈ ಜಾಹೀರಾತಿನಿಂದ ಪಾರ್ಲೇಜಿ ಖರೀದಿ ದುಪ್ಪಟ್ಟಾಗುತ್ತೆ.ಸಂಪೂರ್ಣ ಮಾಹಿತಿಯ ಕೆಳಗಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ.