ಸುಮಾರು ರೈತರು ಸಮಸ್ಯೆ ಇದ್ದೇ ಇರುತ್ತೆ. ಅದು ಏನಂದರೆ ಆಧಾರ್ ಕಾರ್ಡ್ ನಲ್ಲಿ ಯಾವ ರೀತಿ ಹೆಸರು ಇರುತ್ತದೋ ಅದೇ ರೀತಿ ಜಮೀನಿನ ದಾಖಲೆಯಾದ ಪಹಣಿಯಲ್ಲಿ ಇರೋದಿಲ್ಲ. ಸುಮಾರು ರೈತರು ನೋಡಿರ್ತಿರಾ ನಿಮ್ಮ ಒಂದು ಪಹಣಿಯಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರು ಮಿಸ್ ಮಾಡೋದು ಅಂದ್ರೆ ಕನ್ನಡದಲ್ಲಿ ಅಕ್ಷರ ತಪ್ಪಾಗಿರುವುದು ಹಲವಾರು ರೈತರಿಗೆ ಆಗಿರುತ್ತೆ. ಪಹಣಿ ಮತ್ತು ಆಧಾರ್ ಕಾರ್ಡ್‌ನಲ್ಲಿ ಅದೇ ರೀತಿ ರೈತರು ಒಮ್ಮೆಯೂ ಸಹ ತಮ್ಮ ಜಮೀನಿನ ದಾಖಲೆಯಲ್ಲಿ ಹೆಸರು ಸರಿಯಾಗಿದೆಯೋ ಅಥವಾ ತಪ್ಪಾಗಿದೆಯೋ ಚೆಕ್ ಮಾಡಿಕೊಳ್ಳುವುದೇ ಇಲ್ಲ.
ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ಪಹಣಿ ಅಥವಾ ಜಮೀನಿನ ದಾಖಲೆಗಳಲ್ಲಿ ಹೇಗೆ ಸೇರಿಸಬೇಕು, ಯಾವ ದಾಖಲೆಗಳು ಬೇಕಾಗುತ್ತವೆ. ಇದನ್ನು ಮಾಡಲು ಇದರ ಪ್ರಕ್ರಿಯೆ ಯಾವ ರೀತಿ ಇರುತ್ತೆ ಎಂದು ನಿಮಗೆ ಹೇಳುತ್ತೇವೆ.ಆಧಾರ್ ಕಾರ್ಡ್ ಪ್ರಕಾರ ನಿಮ್ಮ ಹೆಸರು ಪಹಣಿಯಲ್ಲಿ ತಿದ್ದುಪಡಿ ಮಾಡಬೇಕೆಂದ್ರೆ ಈ ದಾಖಲೆಗಳು ರೆಡಿ ಮಾಡ್ಕೋಬೇಕಾಗುತ್ತೆ. ಒಂದನೆಯದು ಆಧಾರ್ ಕಾರ್ಡ್ಬೇಕಾಗುತ್ತೆ. ಎರಡನೆಯದು 20 ರುಪಾಯಿ ಸ್ಟಾಂಪ್ ಪೇಪರ್ ಹೆಸರು ತಿದ್ದುಪಡಿ ಬಗ್ಗೆ ಕುರಿತು ಒಂದು ಡಿಕ್ಲೇರ್ ಕೊಡಬೇಕಾಗುತ್ತೆ.ಹೌದು ಹೆಸರು ತಿದ್ದುಪಡಿಗೆ ಕಾರಣ ಮತ್ತು ಅದರ ವಿವರಗಳನ್ನು ತಹಸೀಲ್ದಾರ್ ಅವರಿಗೆ ಸ್ವಯಂ ಡಿಕ್ಲೇರ್ ಕೊಟ್ಟು ಸಹಿ ಮಾಡೋದು ಒಂದು ಆಗಿರುತ್ತೆ.
ಒಂದು ಡಿಕ್ಲರೇಷನ್ ಮೂರನೆಯದು ಜಮೀನಿನ ಮುಖ್ಯ ದಾಖಲೆಯಾದ ಪಹಣಿ ಸಹ ಬೇಕೇ ಬೇಕಾಗುತ್ತೆ ನಾಲ್ಕನೆಯದು ಇವೆಲ್ಲ ದಾಖಲೆಗಳ ಜೊತೆಗೆ ಒಂದು ಅರ್ಜಿಯೂ ಸಹ ನೀವು ಬರಬೇಕಾಗುತ್ತೆ ಒಂದು ಅರ್ಜಿಯಲ್ಲಿ ಹೆಸರು ತಿದ್ದುಪಡಿ ಮಾಡುವ ಕುರಿತು ಒಳಗೊಂಡಿರುವ ಮಾಹಿತಿ ನೀವು ಅರ್ಜಿ ಬರಿಯಬೇಕು.ಇಷ್ಟೆಲ್ಲಾ ಆದ್ಮೇಲೆ ಆ ಒಂದು ಅರ್ಜಿ ಜೊತೆಗೆ ಇಲ್ಲಿ ಹೇಳಿರುವಂತಹ ಕೆಲವು ಮುಖ್ಯ ದಾಖಲೆಗಳು ಅರ್ಜಿ ಜೊತೆಗೆ ನೀವು ಲಗತ್ತಿಸಿ ನಿಮ್ಮ ತಾಲೂಕಿನಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಕೊಡಬೇಕಾಗುತ್ತೆ.ಎಲ್ಲ ದಾಖಲೆಗಳ ಜೊತೆಗೆ ಇದಾದ ನಂತರ ನೀವು ಕೊಟ್ಟಿರುವಂತಹ ಒಂದು ದಾಖಲೆಗಳ ಭೂಮಿ ಕೇಂದ್ರದ ಮೂಲಕ ಎಂಟ್ರಿ ಆಗಿ ಮುಂದಿನ ಅಂದಾಜು 15 ದಿನಗಳಲ್ಲಿ ನಿಮ್ಮ ಒಂದು ಹೆಸರು ಆಧಾರ್ ಕಾರ್ಡ್‌ನಲ್ಲಿ ಹೆಂಗಿರುತ್ತೆದು ಅದೇ ರೀತಿ ನಿಮ್ಮ ಜಮೀನಿನ ಪಹಣಿಯಲ್ಲಿ ಆಗುತ್ತೆ ಎಂದು ಹೇಳಬಹುದು.
ಇವಾಗ ಹೆಸರು ತಿದ್ದುಪಡಿ ಮಾಡಬೇಕಾದರೆ ಕೆಲವು ಮುಖ್ಯ ಅಂಶಗಳು ನಿಮಗೆ ಗೊತ್ತಿರಲಿ ಅಂತ ಹೇಳ್ತಾ ಇದ್ದೀವಿ. ಒಂದು ಸಣ್ಣಪುಟ್ಟ ಹೆಸರು ತಿದ್ದುಪಡಿ ಮಾತ್ರ ಮಾಡುತ್ತಾರೆ. ಪೂರ್ಣ ಹೆಸರು ಬದಲಾವಣೆ ಮಾಡುವುದಾಗಲಿ ಅಥವಾ ಹೊಸದಾಗಿ ಹೆಸರು ಸೇರ್ಪಡೆ ಮಾಡುವುದಾಗಲಿ ಮಾಡುವುದಿಲ್ಲ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.