ರೀಲ್ಸ್ ನೋಡಿ 80 ವರ್ಷದ ಮುದುಕನ ಪ್ರೀತಿಯಲ್ಲಿ ಬಿದ್ದ 34 ವರ್ಷದ ಚೆಲುವೆ ಹೌದು ಇದನ್ನು ಕೇಳಿ ನಿಮಗೆ ಆಶ್ಚರ್ಯವಾದರೂ ಕೂಡ ಈ ಒಂದು ಮಾಹಿತಿ ಸತ್ಯವಾಗಿದೆ ಯಾವ ರೀತಿಯಿಂದಾಗಿ ನಾವು ಮೊಬೈಲ್ ಜಗತ್ತಿನಲ್ಲಿ ಎಂತೆಂಥ ಆಶ್ಚರ್ಯಗಳನ್ನು ನೋಡುವಂತಹ ಪರಿಸ್ಥಿತಿಗೆ ಬಂದಿದ್ದೇವೆ ಎಂದು ನೀವೇ ಯೋಚನೆ ಮಾಡಿ ಈಗಿನ ಕಾಲದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಇವೆರಡು ಇದ್ದರೆ ಸಾಕು ಮತ್ತೆ ಜಗತ್ತಿನಲ್ಲಿ ಏನೇ ಆದರೂ ನಾವು ಅದನ್ನು ನೋಡುವುದಕ್ಕೆ ಹೋಗುವುದಿಲ್ಲ ಮದುವೆ ಅಂತ ಅಂದ್ರೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ.
ಆದ್ರೆ ಈ 80 ವರ್ಷದ ಮುದುಕನನ್ನ 34 ವರ್ಷದ ಯುವತಿ ಮದುವೆ ಆಗಿದ್ದಾಳೆ ಅಂದ್ರೆ ನಂಬುವುದಕ್ಕೆ ಆಗುವುದಿಲ್ಲ. ಅವರು ಈಗಿನ ಕಾಲದಲ್ಲಿ ಮದುವೆ ಅಂತ ಹೇಳಿದರೆ ಅಪ್ಪ ಅಮ್ಮ ತೋರಿಸುವಂತಹ ಹುಡುಗ ಹುಡುಗಿ ಮದುವೆ ಆಗುತ್ತಾರೆ ಅಥವಾ ಜೊತೆಯಲ್ಲಿ ಓದ್ತಾ ಇರೋವಂತಹ ಫ್ರೆಂಡ್ ನನ್ನ ಮದುವೆ ಆಗಿರುತ್ತಾರೆ. ಆದರೆ ಇಲ್ಲಿ 80 ವರ್ಷದ ಮುದುಕ 34 ವರ್ಷದ ಯುವತಿ ಹೇಗೆ ಮದುವೆಯಾಗಿದ್ದಾರೆ ಇದು ನಿಜನೇ ಹೌದು ಈ ಒಂದು ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಒಂದು ಆ ಪುಟ್ಟ ಗ್ರಾಮದಲ್ಲಿ ನಡೆದ ಘಟನೆ ಇದು. ಹೌದು, ಸ್ನೇಹಿತರೆ ಇದು ಘಟನೆಗಳು ನಿಜ. ಆಶ್ಚರ್ಯ ಆಗುತ್ತೆ. ಬಲರಾಮ 80 ವರ್ಷ ವಯಸ್ಸು.ಇವರಿಗೆ ಒಬ್ಬ ಮಗ.
ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಇವರ ಸಂಸಾರದಲ್ಲಿ ತಮ್ಮ ಹೆಂಡತಿಗೆ ಒಂದು ಆರೋಗ್ಯದ ಸಮಸ್ಯೆಯಿಂದ ತೀರಿ ಹೋಗಿರುತ್ತಾರೆ. ನನಗೆ ಇಷ್ಟೊಂದು ವಯಸ್ಸಾಗಿದೆ ಹಾಗಾಗಿ ನಾನು ಮಕ್ಕಳಿಗೆ ಯಾವುದೇ ರೀತಿಯಿಂದ ಭಾರ ಆಗಿರಬಾರದು ಎಂದು ಇವರು ತಮ್ಮ ಸ್ನೇಹಿತರಾದ ವಿಷ್ಣು ಎಂಬ ಮನೆಯಲ್ಲಿ ಇರುತ್ತಾರೆ.ಅಲ್ಲೊಂದಿಷ್ಟು ತಮಾಷೆಗಳು ನಡೀತಾ ಇರುತ್ತವೆ ಆದರೆ ವಿಷ್ಣು ಅವರು ಇವರು ಮಾಡುವಂತಹ ತಮಾಷೆಗಳು ತರಲೆಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇವರು ಮಾಡುತ್ತಿರುವಂತಹ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಬಹಳಷ್ಟು ಜನ ಪ್ರಿಯಗೊಳಿಸುತ್ತವೆ.
ಒಬ್ಬರು ಮಹಾರಾಷ್ಟ್ರದ ಶೀಲಾ ಇಬ್ಬರೂ Instagram ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದರು. ಸ್ಮಾರ್ಟ್ಫೋನ್ ಬಳಸುವುದು ಗೊತ್ತಿಲ್ಲದ ಕಾರಣ ವಿಷ್ಣು ಬಾಲುರಾಮ್ ಪರವಾಗಿ ಸಂದೇಶಗಳನ್ನು ಟೈಪ್ ಮಾಡುತ್ತಿದ್ದರು. ಈ ಒಂದು ಚಾಟಿಂಗ್ ಮುಂದೆ ಮದುವೆಗೆ ಬಂದು ನಿಂತಿತು 80 ವರ್ಷದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 34 ವರ್ಷದ ಮಹಿಳೆಯನ್ನು ಮದುವೆಯಾದ. ಮಧ್ಯಪ್ರದೇಶದ ಅಗರ್ ಜಿಲ್ಲೆಯ ಸುಸ್ನರ್ ಮಗರಿಯಾ ಗ್ರಾಮದ ಬಲುರಾಮ್ ಅವರು ಮಹಾರಾಷ್ಟ್ರದ ಅಮರಾವತಿಯ ಶೀಲಾ ಅವರನ್ನು ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ವಿವಾಹವಾದರು.