ಕರ್ನಾಟಕ ಸರ್ಕಾರ ಇಂಧನ ಇಲಾಖೆಯಿಂದ 2024-25 ನೇ ಸಾಲಿಗೆ ಕುಸುಂ ಯೋಜನೆ ಯಡಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಇರುವಂತಹ ತೆರೆದ ಅಥವಾ ಕೊಳವೆ ಬಾವಿಗಳಿಗೆ 80% ಸಬ್ಸಿಡಿಯೊಂದಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಇದಕ್ಕೆ ಅರ್ಜಿ ಸಲ್ಲಿಕೆ ನಿಮಗೆ ಬೇಕಾಗಿರುವ ಅಗತ್ಯಗಳೇನು ಏನೇನು ದಾಖಲೆಗಳನ್ನು ನೀಡಬೇಕು, ಎಲ್ಲಿ ಅರ್ಜಿ ಹಾಕಬೇಕು ಆಗೆ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಯಾವುದು ಅನ್ನುವ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ.ಮೊದಲನೆಯದಾಗಿ ಇಂಧನ ಇಲಾಖೆಯಿಂದ 2024 ಇಪ್ಪತೈದು ನೇ ಸಾಲಿನಲ್ಲಿ 40,000 ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಮೂರುದಿಂದ ಅತ್ಯವರೆಗಿನ ಸಾಮರ್ಥ್ಯದ ತೆರವಾಗಿದ್ದ ಬಾವಿಗಳಿಗೆ ಸೌರ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಸಹಾಯಧನ ನೀಡಲಾಗುತ್ತದೆ.ರೈತರ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡುತ್ತಿದ್ದ ಸಹಾಯಧನದ ಮೊತ್ತವನ್ನು ಶೇಕಡಾ 30 ರಿಂದ ಶೇಕಡಾ 50 ಕ್ಕೆ ಹೆಚ್ಚಿಸಿದ್ದು, ಕೇಂದ್ರ ಸರ್ಕಾರದಿಂದ ಶೇಕಡಾ 30 ರಷ್ಟು ಸಹಾಯಧನ ದೊರೆಯಲಿದ್ದು, ರೈತರು ಭರಿಸಬೇಕಾಗಿರುವುದು ಕೇವಲ ಶೇಕಡಾ 20 ರಷ್ಟು ಮಾತ್ರ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಬ್ಸಿಡಿ ರೂಪದಲ್ಲಿ ಪಾವತಿಯನ್ನು ಮಾಡುತ್ತವೆ. ಹಾಗೇನೇ ಇದಕ್ಕೆ ಅರ್ಜಿ ಸಲ್ಲಿಕೆ ನಿಮಗೆ ಬೇಕಾಗಿರುವ ಅಗತ್ಯಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.

ಈಗಾಗಲೇ ಗಂಗಾಕಲ್ಯಾಣ ಯೋಜನೆಯ ಲಾಭವನ್ನು ಪಡೆದಿರುವಂತಹ ಮತ್ತು ಪಡೆಯಲು ಅರ್ಜಿ ಸಲ್ಲಿಸಿರುವ ಅರ್ಜಿದಾರರು ಇದಕ್ಕೆ ಅರ್ಜಿ ಸಲ್ಲಿಸಲು ಬರೋದಿಲ್ಲ. ಹಾಗೇನೇ ಪಿಂಪ್ರಿ ಮಾರ್ಗಸೂಚಿಗಳನ್ವಯ ಡಾರ್ಕ್ ಜೋನ್ ಎಂದು ಘೋಷಿಸಿರುವ ಪ್ರದೇಶಗಳಲ್ಲಿ ಸದರಿ ಯೋಜನೆಯ ಲಾಭವನ್ನು ಪಡೆಯಲು ಅರ್ಜಿದಾರರು ಅರಿವಿರುವುದಿಲ್ಲ. ಅರ್ಜಿದಾರರು ಕೇವಲ ಒಂದು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಸರ್ಕಾರ ಬೇರೆ ಯಾವುದೇ ಯೋಜನೆಯ ಮುಖಾಂತರ ಸೌಲಭ್ಯಗಳನ್ನು ಪಡೆದುಕೊಂಡು ಇರುವಂತವರು ಇದಕ್ಕೆ ಅರ್ಜಿ ಸಲ್ಲಿಕೆ ಬರೋದಿಲ್ಲ.

ಹಾಗೇ ಇದಕ್ಕೆ ಅರ್ಜಿ ಸಲ್ಲಿಕೆ ನಿಮ್ಮ ತರಬೇಕಾಗಿರುವ ದಾಖಲೆಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಆಧಾರ್ ಕಾರ್ಡ್ಬೇಕಾಗುತ್ತೆ. ಜಮೀನಿನ ಪಹಣಿಬೇಕಾಗುತ್ತೆ ಬ್ಯಾಂಕ್ ಪಾಸ್‌ಪುಸ್ತಕಬೇಕಾಗುತ್ತೆ ನೀವೇನಾದ್ರು ಎಸ್ ಟಿ ಸಮುದಾಯದವರಾಗಿದ್ದರೆ. ನಿಮ್ಮ ಜಾತಿ ಪ್ರಮಾಣ ಪತ್ರವನ್ನು ಇಟ್ಟುಕೊಂಡಿರಬೇಕಾಗುತ್ತದೆ.ಕೊನೆಯದಾಗಿ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ಇಟ್ಟುಕೊಂಡಿರಬೇಕಾಗುತ್ತದೆ. ಇಷ್ಟೆಲ್ಲ ದಾಖಲೆಗಳನ್ನು ನೀವು ಇಟ್ಟುಕೊಂಡು ನಾವು ಕೆಳಗಡೆ ನೀಡಿರುವಂತಹ ವಿಡಿಯೋವನ್ನು ಒಮ್ಮೆ ವೀಕ್ಷಣೆ ಮಾಡಿ ಅದರಲ್ಲಿ ಹೇಳಿರುವಂತಹ ವಿಧಾನಗಳನ್ನು ನೀವು ಪಾಲಿಸಿ, ಆನ್ಲೈನಲ್ಲಿ ಅರ್ಜಿಯನ್ನು ಹಾಕಬಹುದು.

https://youtu.be/0saBrexu5a0

Leave a Reply

Your email address will not be published. Required fields are marked *