ಒಬ್ಬ ವ್ಯಕ್ತಿ ಸಂಜೆ ಆರು ಗಂಟೆಗೆ ಸರಿಯಾಗಿ ಅರಿಶಿನ ಬಣ್ಣದ ಕುರ್ತ ತಲೆ ಮೇಲೆ ಟೋಪಿ ನಾಲ್ಕು ಇಂಚ್ ಗಡ್ಡ ಬಿಟ್ಕೊಂಡು ತನ್ನ ಹೆಂಡತಿನ್ನ ತನ್ನ ಜೊತೆಲಿ ಕರ್ಕೊಂಡು ಆತುರಾತುರವಾಗಿ ಒಂದು ಪೊಲೀಸ್ ಠಾಣೆಗೆ ಹೋಗಿದ್ದಾನೆ. ಒಂದು ಕಂಪ್ಲೇಂಟ್ ಕೊಡಬೇಕು ಸರ್ ಅಂತ .ಆಯ್ತು ಹೇಳಿ ಅನುಕಂಪ ಇದ್ದು ಸ್ಟೇಷನ್ ನ ಪೊಲೀಸ್ ಇನ್ಸ್‌ಪೆಕ್ಟರ್ ಕೇಳಿದ್ದಾರೆ. ನಂತರ ಕಂಪ್ಲೇಂಟ್ ಕೊಡಲು ಬಂದಿದ್ದ ಈ ವ್ಯಕ್ತಿ ನ ಸುಮಾರು ಹದಿನೈದರಿಂದ 20 ನಿಮಿಷದ ತನಕ ಕಾಯಿಸಿ ಟೈಮ್ ಪಾಸ್ ಮಾಡಿದ್ದಾರೆ.ಆ ನಂತರ ಒಬ್ಬ ಕಾನ್ ಸ್ಟೇಬಲ್ ನ ಕರೆದು ರೈತರ ಬಳಿಗೆ ಕರ್ಕೊಂಡು ಹೋಗಿ ಕಂಪ್ಲೇಂಟ್ ಏನು ಆ ವ್ಯಕ್ತಿಗೆ ಇನ್ಸ್‌ಪೆಕ್ಟರ್ ಕೇಳಿದ್ದಾರೆ. ನಾನು ಇಲ್ಲೇ ಪಕ್ಕದಲ್ಲಿ ಇರುವ ಏರಿಯಾದಲ್ಲಿ ವಾಸ ಮಾಡುತ್ತಿನಿ.

ಇವತ್ತು ಬೆಳಿಗ್ಗೆ ನಮ್ಮ ಪಕ್ಕದ ಮನೆಯವರು ಅಸ್ವಸ್ಥರಾಗಿದ್ದರು ಹೀಗಾಗಿ ಅಂಬುಲೆನ್ಸ್ ಗೆ ಫೋನ್ ಮಾಡಿದ್ದರು. ಆಗ ತಕ್ಷಣ ಆಸ್ಪತ್ರೆಗೆ ಕರ್ಕೊಂಡು ಹೋಗ್ಬೇಕು ಅಂದ್ರೆ ಅದಕ್ಕೆ ನೀವು ನಮಗೆ ಎಕ್ಸ್ಟ್ರಾ ಹಣ ಕೊಡಬೇಕು ಎಂದು ಆಂಬುಲೆನ್ಸ್ ನವರು ಕೇಳಿದ್ದಾರೆ. ನಮಗೆ ಏನು ಮಾಡಬೇಕು ಅಂತ ತೋಚದೆ ಅವರು ಕೇಳಿದಷ್ಟು ಹಣ ಕೊಟ್ಟು ಪೇಷಂಟ್ ನ ಆಸ್ಪತ್ರೆಗೆ ಕರಕೊಂಡು ಹೋದ್ವಿ ಸರ್ಕಾರದ ಅಂಬುಲೆನ್ಸ್ ಉಚಿತ ಅಲ್ವಾ ಫ್ರೀ ಅಲ್ವಾ? ಆದರೆ ಅವರು ನಮ್ಮ ಹತ್ತಿರ ಆಂಬುಲೆನ್ಸ್ ಸೇವೆಗೆ ಅಂತ ನಮ್ಮ ಹತ್ತಿರ ಹಣವನ್ನು ತೆಗೆದುಕೊಂಡು ಎಂದು ಹೇಳಿದರು.

ನಮ್ಮಂತ ಬಡವರ ಜೀವನದ ಜೊತೆ ಆಟ ಆಡ್ತಿದ್ದಾರೆ. ದಯಮಾಡಿ ಇಂತವರ ಮೇಲೆ ಫೈಲ್ ಮಾಡಿ ನಮ್ಮ ದುಡ್ಡು ನಮಗೆ ವಾಪಸ್ ಸಿಗದಿದ್ದರೂ ಪರವಾಗಿಲ್ಲ. ಅವರ ಮೇಲೆ ಆಕ್ಷನ್ ತಗೊಳಿ ಅಂತ ಆ ದಂಪತಿಗಳು ಕೈ ಮುಗಿಯುತ್ತ ಇನ್‌ಸ್ಪೆಕ್ಟರ್ ಬಳಿ ಬೇಡಿಕೊಂಡಿದ್ದಾರೆ. ಆದರೆ ಅಲ್ಲಿದ್ದ ಪೊಲೀಸರು ಮಾತ್ರ ಇವರ ಕಂಪ್ಲೇಂಟ್ ಬಗ್ಗೆ ಹೆಚ್ಚಾಗಿ ತಲೆನೇ ಕೆಡಿಸಿಕೊಳ್ಳಲಿಲ್ಲ. ನಿಮ್ಮ ಏರಿಯಾ ನಮ್ಮ ಸ್ಟೇಷನ್ ಲಿಮಿಟ್ಗೆ ಬರೋದಿಲ್ಲ. ಹೀಗಾಗಿ ನೀವು ಇಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ನಿಮ್ಮ ಕಂಪ್ಲೇಂಟ್ ಕೊಡಿ ಅವರು ಎಫ್‌ಐಆರ್ ದಾಖಲಿಸಿಕೊಳ್ತಾರೆ ಅಂತ ಪೊಲೀಸರು ಹೇಳಿದರು.

ಪೊಲೀಸರ ವರ್ತನೆ ನೋಡಿ ಶಾಕ್ ಆದ ಆ ದಂಪತಿಗಳು ತಾವು ನಿಜವಾಗಲು ಯಾರು ಅಂತ ಹೇಳಿದಾಗ ಅಲ್ಲಿದ್ದ ಪೊಲೀಸರು ಹೃದಯ ಒಂದು ಕ್ಷಣ ನಿಂತುಹೋಯಿತು. ಭಯದಿಂದ ಬೆವತು ಹೋದ ಸ್ಟೇಷನ್ ಸಿಬ್ಬಂದಿಗಳು ಆ ದಂಪತಿಗಳ ಕಾಲು ಕೈ ಹಿಡಿಯಲು ಶುರು ಮಾಡಿದರು. ಆ ಪೊಲೀಸ್ ಠಾಣೆಯ ವಾತಾವರಣ ಇದೆ ಎಂದು ತಿಳಿದುಕೊಂಡ ಬಳಿಕ ಗಂಡ ಹೆಂಡತಿ ಆ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೂ ವಾರ್ನಿಂಗ್ ಕೊಟ್ಟು ಅಲ್ಲಿಂದ ಮತ್ತೊಂದು ಪೋಸ್ಟ್ ಗೆ ಹೋಗಿದ್ದಾರೆ. ಅಷ್ಟಕ್ಕೂ ಇವರು ಯಾರು ಗೊತ್ತಾ ಪುಣೆಯ ಪಿಂಪ್ರಿ ಚಿಂಚವಾಡ್ ಸೇರಿದ ಪೊಲೀಸ್ ಕಮಿಷನರ್ ಐಪಿಎಸ್ ಕೃಷ್ಣ ಪ್ರಕಾಶ್ ಅವರೇ ಈ ಮಾರೇಶ ಹಾಕಿಕೊಂಡು ತಮ್ಮ ಸುತ್ತಮುತ್ತಲಿರುವಂತಹ ಪೊಲೀಸ್ ಠಾಣೆಗೆ ಭೇಟಿಯನ್ನು ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *