ಜಮೀನುಗಳಿಗೆ ಹೋಗುವ ರಸ್ತೆಗಳಿಗಾಗಿ ಸಾಕಷ್ಟು ಜಗಳಗಳನ್ನ ನಾವು ನೀವು ನೋಡಿದ್ದೇವೆ. ಯಾವ ಜಮೀನುಗಳಿಗೆ ಹೋಗಲು ರಸ್ತೆ ಅಥವಾ ದಾರಿಯಲ್ಲಿರುವ ಅಂತಹ ಜಮೀನುಗಳ ಮಾಲೀಕರುಗಳಿಗೆ ರಾಜ್ಯ ಸರ್ಕಾರ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿ ಗೊಳಿಸಿ ರಾಜ್ಯದ ಎಲ್ಲ ರೈತರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಯಾವ ಜಮೀನುಗಳಿಗೆ ಹೋಗಲು ರಸ್ತೆ ಅಥವಾ ದಾರಿ, ಕಾಲುದಾರಿ ಅಥವಾ ಬಂಡಿ ದಾರಿ ಇಲ್ಲವೋ ಅಂತಹ ಜಮೀನುಗಳಿಗೆ ರಸ್ತೆ ಮಾಡಿಕೊಡಲು ರಾಜ್ಯ ಸರ್ಕಾರ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.ಯಾವ ಜಮೀನಿಗೆ ಹೋಗಲು ಎಷ್ಟು ಹೊಲಗಳನ್ನ ಅಥವಾ ಜಮೀನುಗಳನ್ನ ದಾಟಿಕೊಂಡು ಹೋಗಬೇಕು.
ಅಂತಹ ಜಮೀನುಗಳ ಮಾಲೀಕರು ಯಾವುದೇ ತಂಟೆ ತಕರಾರು ಮಾಡದಂತೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿ ಗೊಳಿಸಿ ಆದೇಶವನ್ನು ಹೊರಡಿಸಲಾಗಿದೆ. ಜೊತೆಗೆ ಕೋರ್ಟಿನಿಂದಲೂ ದೊಡ್ಡ ತೀರ್ಪನ್ನ ನೀಡಿದೆ. ಬನ್ನಿ, ಹಾಗಿದ್ದರೆ ನಮ್ಮ ಜಮೀನುಗಳಿಗೆ ಹೋಗಲು ರಸ್ತೆ ಅಥವಾ ದಾರಿ ಇಲ್ಲ ಅಂದ್ರೆ ಹೇಗೆ ಮತ್ತು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಯಾವಾಗ ಬಂದು ನಮಗೆ ರಸ್ತೆ ಮಾಡಿ ಕೊಡುತ್ತಾರೆ. ಎಷ್ಟು ಅಗಲ ಮತ್ತು ಎಷ್ಟು ಉದ್ದದವರೆಗೆ ಮಾಡಿ ಕೊಡ್ತಾರೆ, ಎಷ್ಟು ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎನ್ನುವಂತಹ ಕಂಪ್ಲೀಟ್ ಮಾಹಿತಿ ಇಲ್ಲಿ ನೀಡಲಾಗಿದೆ. ಭೂಸ್ವಾಧೀನ ಕಾಯ್ದೆ ಬಂದ ನಂತರ ಕಾಲುದಾರಿ ಅಥವಾ ಬಂಡಿ ದಾರಿ ಬಹಳ ವರ್ಷಗಳಿಂದ ಇದ್ದರೆ ಅದನ್ನ ಮುಚ್ಚಿ ತಮ್ಮ ಸ್ವಂತ ಜಮೀನು ವಶಪಡಿಸಿಕೊಂಡಿರುವವರು ಸಾಕಷ್ಟು ಜನ ಇದ್ದಾರೆ.
ಇದರಿಂದಾಗಿ ತಮ್ಮ ಜಮೀನಿಗೆ ಹೋಗಲು ಸಾಧ್ಯವಾಗದೆ ರೈತರು ಕಷ್ಟ ಪಡುವಂತೆ ಆಗಿದೆ. ಆದರೆ ಈಗ ಸಾರ್ವಜನಿಕ ರಸ್ತೆ ರದ್ದಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಮಾನ ನೀಡಿದೆ.ತುಮಕೂರಿನ ಮಂದಿಗಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಅಲ್ಲಿಯ ಕಾಲು ದಾರಿಯನ್ನ ಮುಚ್ಚಲಾಗಿತ್ತು. 2019 ಫೆಬ್ರವರಿ ಐದು ರಂದು ಎಪಿಎಂಸಿಗೆ ನೋಟಿಸ್ ಕೊಡಲಾಗಿತ್ತು. ಇದೆ ಆಸ್ತಿ ಎಂಪಿ ಪಾಲಾಗಿದ್ದು, ಯಾವುದೇ ಕಾಲುದಾರಿ ಅಥವಾ ಬಂಡಿದಾರಿಗೆ ಅವಕಾಶ ಇಲ್ಲ ಎಂದು ಎಂಸಿಐ ತಿಳಿಸಿತ್ತು. ಹೀಗಾಗಿ ಅದರ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿತ್ತು. ಭೂ ಕಂದಾಯ ಇಲಾಖೆ ಕಾಯ್ದೆ ಸೆಕ್ಷನ್ 67 ರ ಅಡಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿರುವಂತಹ ರಸ್ತೆಗಳು, ಗುಂಡಿಗಳು, ಬೀದಿಗಳು ಸರ್ಕಾರಕ್ಕೆ ಸೇರಿವೆ. ಅದನ್ನ ಯಾರು ಕೂಡ ತನ್ನ ಸ್ವಂತ ಆಸ್ತಿ ಎಂದು ಪರಿಗಣಿಸುವಂತಿಲ್ಲ. ಅದು ಸಾರ್ವಜನಿಕರಿಗೆ ಸೇರಬೇಕಾಗಿದ್ದು ಎಂದು ಹೈಕೋರ್ಟ್ ತನ್ನ ತೀರ್ಪನ್ನು ನೀಡಿದೆ. ಇನ್ನು ಸಂಪೂರ್ಣವಾದ ಮಾಹಿತಿಗಾಗಿ ಕೆಳಗಡೆ ನೀಡಿರುವ ವಿಡಿಯೋ ಒಮ್ಮೆ ವೀಕ್ಷಣೆ ಮಾಡಿ.