ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಂದ ಕರ್ನಾಟಕ ರಾಜ್ಯದಲ್ಲಿ ಬರ ಪರಿಹಾರದ ಹಣ, ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಎಲ್ಲ ರೈತರ ಖಾತೆಗಳಿಗೆ ಹಣ ತಲುಪಿಲ್ಲ. ಇನ್ನು ಕೂಡ ರಾಜ್ಯದಲ್ಲಿ ಸಾಕಷ್ಟು ರೈತರ ಖಾತೆಗಳಿಗೆ ಹಣ ವರ್ಗಾವಣೆ ಆಗುವುದು ಬಾಕಿ ಉಳಿದಿದೆ. ರೈತರು ರಾಜ್ಯ ಸರ್ಕಾರ ನೀಡಿರುವ ₹2000 ಬರ ಪರಿಹಾರ ಹಣ ಮಾತ್ರ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಬರ ಪರಿಹಾರದ ಹಣ ರೈತರ ಖಾತೆಗಳಿಗೆ ಇನ್ನು ಕೂಡ ಜಮಾ ಆಗಿಲ್ಲ. ಯಾವ ಕಾರಣಕ್ಕಾಗಿ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಮತ್ತು ಬೆಳೆ ಪರಿಹಾರದ ಹಣ ಯಾಕೆ ಜಮಾ ಆಗಿಲ್ಲ ಮತ್ತು ಹಣ ಜಮಾ ಆಗದೇ ಇರುವ ರೈತರು ಏನನ್ನ ಮಾಡಬೇಕು.

ಯಾವ ಕೆಲಸ ಮಾಡಿದ್ರೆ, ಎಷ್ಟು ದಿನದಲ್ಲಿ ಹಣ ಜಮಾ ಆಗುತ್ತೆ ಅನ್ನುವ ಕಂಪ್ಲೀಟ್ ಮಾಹಿತಿಯನ್ನ ನೀಡಲಾಗಿದೆ.ಕರ್ನಾಟಕ ರಾಜ್ಯದ ಬರ ಪೀಡಿತ ತಾಲೂಕುಗಳ ರೈತರ ಖಾತೆಗಳಿಗೆ ಈಗಾಗಲೇ ರಾಜ್ಯ ಸರ್ಕಾರದ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದ್ದು, ರೈತರು ಆ ಹಣವನ್ನ ಪಡೆದುಕೊಂಡಿದ್ದಾರೆ. ಮತ್ತೊಮ್ಮೆ ಕೇಂದ್ರ ಸರ್ಕಾರದೊಂದಿಗೆ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಹಣ ಬೇಡಿಕೆ ಇಟ್ಟಿದ್ದು, ಇತ್ತೀಚಿಗಷ್ಟೆ ಕೇಂದ್ರ ಸರ್ಕಾರದಿಂದ ರೈತರ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಇದೇ ರೀತಿಯಾಗಿ ಇನ್ನುಮುಂದೆ ಮತ್ತೆ ನಮ್ಮ ರಾಜ್ಯ ಸರ್ಕಾರದಿಂದ ಪ್ರತಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೂರನೇ ಕಂತಿನ ಹಣವನ್ನಾಗಿ 3000 ರೈತರ ಖಾತೆಗಳಿಗೆ ಹಾಕಲು ಮತ್ತೊಂದು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದೆ.

ಆದರೆ ಈ ಎಲ್ಲ ರೀತಿಯಿಂದ ಹಣ ಬಿಡುಗಡೆ ಆಗಿದ್ದು, ಕೆಲವೊಂದಿಷ್ಟು ರೈತರ ಖಾತೆಗಳಿಗೆ ಇನ್ನೂ ಕೂಡ ಜಮಾ ಆಗಿಲ್ಲ ಮತ್ತು ಹಣ ಬರುತ್ತಿಲ್ಲ. ಈ ಬಗ್ಗೆ ಗಮನ ನೀಡಿರುವ ರಾಜ್ಯ ಸರ್ಕಾರ ಈ ಕೆಲಸ ಮಾಡೋಕೆ ತಿಳಿಸಿದೆ.ರೈತರು ತಾವು ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಿ ಖಾತೆ ಚಾಲ್ತಿ ಇರುವ ಬಗ್ಗೆ ಕೆವೈಸಿ ಅಪ್‌ಡೇಟ್ ಆಗಿರುವ ಬಗ್ಗೆ ಮತ್ತು ಫ್ರೂಟ್ ಸಂಖ್ಯೆ ಹೊಂದಿರುವ ಬಗ್ಗೆ ಪರಿಶೀಲಿಸಿ ಪಾತ್ರಿ ಮಾಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ಅಕೌಂಟ್ ಗಳನ್ನ ನಿರ್ಬಂಧಿಸುವ ಫ್ರೀಸ್ ಮಾಡಿರೋದು ಹಾಗು ಯಾವ ರೈತರ ಖಾತೆಯನ್ನ ಮುಚ್ಚಲಾಗಿದೆಯೋ ಅಂತಹ ಫಲಾನುಭವಿಗಳು ಬ್ಯಾಂಕ್‌ಗೆ ಹೋಗಿ ಅಕೌಂಟ್ ನ ಓಪನ್ ಮಾಡಬೇಕು. ಫ್ರೂಟ್ ಅಪ್ ಡೇಟ್ ನಲ್ಲಿ ಆಧಾರ್ ಹೆಸರು ಹೊಂದಿಕೆ ಆಗ್ತಾ ಇಲ್ಲ ಅಂತಹ ರೈತರು ಈಗಾಗಲೇ ಸಾಕಷ್ಟು ಜನ ಹೇಳುತ್ತಿದ್ದಾರೆ ಈ ಸಮಸ್ಯೆ ಕೂಡ ಬೇಗ ಪರಿಹರಿಸಬೇಕೆಂದು ಸರಕಾರ ಆದೇಶ ನೀಡಿದೆ ಹಾಗಾಗಿ ಯಾವುದೇ ರೀತಿಯಾದಂತಹ ತೊಂದರೆ ಪಡೆಯುವಂತಹ ಅಗತ್ಯ ಇಲ್ಲ.

Leave a Reply

Your email address will not be published. Required fields are marked *