ಸ್ನೇಹಿತರೆ ಕಣ್ಣಿನ ದೃಷ್ಟಿ ಇಲ್ಲದಿದ್ದರೂ ಯುಪಿಎಸ್ ಸಿ ಪರೀಕ್ಷೆ ಬರೆದಂತಹ ಯುವತಿ ಸತತ ಮೂರು ಬಾರಿ ಪರೀಕ್ಷೆ ಬರೆದು ಫೇಲ್ ಆಗಿ ನಾಲ್ಕನೇ ಬಾರಿ ಇತಿಹಾಸ ಸೃಷ್ಟಿಸಿದ ಈ ಒಂದು ಯುವತಿಯ ಬಗ್ಗೆ ಮಾಹಿತಿ ತಿಳಿಸ್ತೀನಿ. ಪರೀಕ್ಷೆ ಅಂತ ಬಂದಾಗ ನಮಗೆ ಮೊದಲು ನೆನಪಾಗುವುದು ಹತ್ತನೇ ತರಗತಿ ಪರೀಕ್ಷೆ ನಂತರ ದ್ವಿತೀಯ ಪಿಯುಸಿ ಪರೀಕ್ಷೆ ನಂತರ ಡಿಗ್ರಿ ಪರೀಕ್ಷೆ ಹೀಗೆ ಪರೀಕ್ಷೆಗಳನ್ನು ಬರೆದು ನಾವು ಜೀವನ ಹೀಗೆ ಇರ್ಬೇಕು ಕಾಣಬೇಕು ಅಂತ ಕನಸು ಕಾಣ್ತೀವಿ. ಆದ್ರೆ ಅದರ ಮಧ್ಯದಲ್ಲಿ ಒಂದು ಪರೀಕ್ಷೆ ಬರೆಯುವಂತಹ ಸಂದರ್ಭದಲ್ಲಿ ಫೇಲಾದಂತಹ ವಿದ್ಯಾರ್ಥಿಗಳು ಕೆಟ್ಟ ನಿರ್ಧಾರವನ್ನೇ ತಗೋತಾರೆ. ನಾನು ಫೇಲ್ ಆಗಿದ್ದೀನಿ. ಮುಂದಿನ ದಾರಿ ಮುಚ್ಚಿಹೋಗಿದೆ.

ನಮ್ಮ ಜೀವನ ಇಲ್ಲಿಗೆ ಮುಗಿಯಿತು ಅಂತ ಸೂಸೈಡ್ ಮಾಡಿಕೊಂಡು ಎಷ್ಟೋ ವಿದ್ಯಾರ್ಥಿಗಳನ್ನ ನೋಡಿದ್ದೀವಿ ಕೇಳಿದ್ದೀವಿ ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಕಣ್ಣು ಕಾಣದೆ ಇದ್ದರೂ ಸಹ ಯುಪಿಎಸ್‌ಸಿ ಪರೀಕ್ಷೆ ಬರೆದು ಈ ಒಂದಿಷ್ಟು ಜನಕ್ಕೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಸಾಲದ್ದಕ್ಕೆ ಹೆಣ್ಣುಮಗಳು. ಅದಕ್ಕೆ ಹೇಳಿದ್ದು ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತ ಈ ಒಂದು ಯುವತಿಯನ್ನ ನಾವೆಲ್ಲರೂ ಹೆಮ್ಮೆಯಿಂದ ಹೇಳ್ಕೋಬೇಕು ನಮಗೆ ಸ್ಪೂರ್ತಿಯಾಗಿರುವುದು ಅಂತ. ಸ್ನೇಹಿತರೆ ಈ ಪೂರ್ಣ ಅವರಿಗೆ ಇಪ್ಪತೈದು ವರ್ಷ ವಯಸ್ಸು ತಮಿಳುನಾಡಿನ ಮದುರೈಯವರು ಒಂದು ಪುಟ್ಟ ಕುಟುಂಬ ಅವರ ಅಪ್ಪ ಅಮ್ಮನ ಆಸೆ ಕನಸು ಕೂಡ ಅದೇ ಆಗುತ್ತೆ. ನಮ್ಮ ಮಗಳು ಎಷ್ಟು ಸರಿ ಓದುತ್ತಾ ಇದಾರೆ. ಯುಪಿಎಸ್‌ಸಿ ಪರೀಕ್ಷೆ ಒಂದು ಆಸೆ ಇದೆ.

ಇದನ್ನು ಹೇಗಾದರೂ ಮಾಡಿ ಪಾಸ್ ಆಗಲೇಬೇಕು ಎಂಬ ಛಲ ಇವರಿಗೆ ಬರುತ್ತದೆ. ಅದೇ ನಿಟ್ಟಿನಲ್ಲಿ ಒಂದು ಸಲಿ ಫೇಲ್ ಅಲ್ಲಾ ಮೂರು ಸಲಿ ಫೇಲಾದರೂ ಕೂಡ ಸಹ ಅವರು ಒಂದು ಇಟ್ಟಂತಹ ನಿರ್ಧಾರವನ್ನು ಅವರು ಬದಲಿಸಿಕೊಳ್ಳಲಿಲ್ಲ ಎಷ್ಟೋ ಜನ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ವಿಶ್ವದಲ್ಲಿ ಎರಡನೇ ಕಠಿಣವಾದಂತಹ ಪರೀಕ್ಷೆ ಆ ಒಂದು ಪರೀಕ್ಷೆಯಲ್ಲಿ 286 ನೇ ರ್ಯಾಂಕ್ ಪಡೆದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಪೂರ್ಣರು. ನಾವು ಕಣ್ಣು, ಕೈ, ಕಾಲು, ಮೂಗು, ಬಾಯಿ ಎಲ್ಲ ನೆಟ್ಟಿಗರು ಎಕ್ಸಾಮಲ್ಲಿ ಎಷ್ಟೋ ಸಲ ಫೇಲಾಗಿದ್ದೀವಿ. ಆದರೆ ಈ ಹೆಣ್ಣು ಮಗಳು ಮಾತ್ರ ಖಂಡಿತವಾಗಿ ಆಶ್ಚರ್ಯವನ್ನು ನಮ್ಮೆಲ್ಲರಿಗೂ ತಂದಿದ್ದಾರೆ. ಏಕೆಂದರೆ ಈಗಿನ ಕಾಲದಲ್ಲಿ ಮಕ್ಕಳು ಓದುವುದಕ್ಕೆ ಸ್ವಲ್ಪ ಹಿಂದೆಟು ಹಾಕುತ್ತಾರೆ ಆದರೂ ಕೂಡ ಈ ಹೆಣ್ಣು ಮಗಳು ಕಣ್ಣು ಕಾಣದೆ ಇರುವಂತಹ ಸಂದರ್ಭದಲ್ಲಿ ಈ ಒಂದು ಕಠಿಣವಾದಂತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಇವರನ್ನು ನಾವು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು.

Leave a Reply

Your email address will not be published. Required fields are marked *