ಕರ್ನಾಟಕದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಗುಡ್ ನ್ಯೂಸ್. ರಾಜ್ಯದಲ್ಲಿ ಈಗಾಗಲೇ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವ ಕಾರ್ಯ ಭರ್ಜರಿಯಾಗಿ ನಡೀತಾ ಇದೆ ಹಾಗೂ ಈಗಾಗಲೇ ಸಾಕಷ್ಟು ರೈತರು ತಮ್ಮ ಆಧಾರ್ ಸಂಖ್ಯೆಯನ್ನ ಜಮೀನಿನ ಪಹಣಿಗಳೊಂದಿಗೆ ಲಿಂಕ್ ಮಾಡಿಸಿದ್ದಾರೆ. ಆದರೆ ಈ ರೀತಿಯಾಗಿ ನಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಅನ್ನ ಮಾಡೋದ್ರಿಂದ ಯಾವೆಲ್ಲ ಪ್ರಯೋಜನಗಳು
ನಮಗೆ ದೊರೆಯುತ್ತವೆ ಮತ್ತು ಒಂದು ವೇಳೆ ಜಮೀನಿನ ಪಹಣಿಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಲ್ಲ ಅಂದ್ರೆ ಏನಾಗುತ್ತೆ? ಹಾಗೂ ಪುರಾತನ ತಂದೆ ತಾತ ಮುತ್ತಾತನ ಹೆಸರಿನಲ್ಲಿರುವ ಜಮೀನಿನ ಪಹಣಿಗಳಿಗೆ ಈಗಿರುವ ರೈತರ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದಾ ಅಥವಾ ಇಲ್ವಾ? ಒಂದು ವೇಳೆ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡೋದ್ರಿಂದ ಪಹಣಿಯಲ್ಲಿರುವ ತಂದೆ ತಾತ ಮುತ್ತಾತನ ಆಸ್ತಿಯು ಆಧಾರ್ ಲಿಂಕ್ ಇರುವ ವ್ಯಕ್ತಿಗೆ
ಆಸ್ತಿಯು ನೇರವಾಗಿ ವರ್ಗಾವಣೆ ಆಗುತ್ತ ಹೀಗೆ ಪುರಾತನ ತಂದೆ ತಾತ ಮುತ್ತಾತನ ಆಸ್ತಿಯು ಈಗಿರುವ ಉಳುಮೆದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ಇನ್ನು ಮುಂದೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನ ಪಡೆದುಕೊಳ್ಳಬಹುದು ಅಥವಾ ಇಲ್ವಾ? ಹೀಗೆ ಇನ್ನು ಅನೇಕ ರೀತಿಯ ಎಲ್ಲ ಪ್ರಶ್ನೆಗಳಿಗೆ ಈ ಮಾಹಿತಿಯಲ್ಲಿ ಉತ್ತರ ನೀಡಲಾಗಿದೆ. ರಾಜ್ಯದ ಪ್ರತಿಯೊಬ್ಬ ರೈತನಿಗೂ ಕೂಡ ತಮ್ಮ ಜಮೀನಿನ ಪಹಣಿಗಳಿಗೆ ಆಧಾರ್ ಕಾರ್ಡ್‌ನ ಅಂದ್ರೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸೋದು. ರಾಜ್ಯ ಸರ್ಕಾರದಿಂದ ಇದು ಕಡ್ಡಾಯವಾಗಿದ್ದು ಅಧಿಕೃತವಾಗಿ ಆದೇಶವನ್ನು ಸಹ ಹೊರಡಿಸಲಾಗಿದೆ. ಇನ್ನು ಕೂಡ ನಿಮ್ಮ ಆಧಾರ್ ಸಂಖ್ಯೆಗೆ ನಿಮ್ಮ ಜಮೀನಿನ ಪಹಣಿಯು ಲಿಂಕ್ ಮಾಡಿಸಿಲ್ಲ ಅಂದ್ರೆ ನಿಮ್ಮ ಜಮೀನಿನ ಪ್ರದೇಶಕ್ಕೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಅಥವಾ ಗ್ರಾಮ ಆಡಳಿತ ಅಧಿಕಾರಿಗಳು ಅವರನ್ನ ಕೂಡಲೇ ಸಂಪರ್ಕಿಸಿ.
ಲಿಂಕ್ ಮಾಡಿಸಿಕೊಳ್ಳಿ .ಯಾವೆಲ್ಲಾ ಪ್ರಯೋಜನಗಳಿವೆ, ಹೇಗೆ ಏನು ಅನ್ನುವ ಸಂಪೂರ್ಣ ಮಾಹಿತಿಯನ್ನು ನೋಡೋಣ ಇಲಾಖೆಯಿಂದ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ದಾಖಲೆಗಳನ್ನ ಡಿಜಿಟಲೀಕರಿಸಲು ಈ ಕ್ರಮವು ರಾಜ್ಯದ ಎಲ್ಲ ಭೂ ದಾಖಲೆಗಳನ್ನ ಡಿಜಿಟಲೀಕರಿಸಲು ಸಹಾಯ ಮಾಡುತ್ತದೆ. ಇದು ದಾಖಲೆಗಳನ್ನ ಸುರಕ್ಷಿತವಾಗಿ ಇರಿಸೂಕೆ ಮತ್ತು ಭ್ರಷ್ಟಾಚಾರವನ್ನ ತಡೆಯೋಕೆ ಸಹಾಯ ಮಾಡುತ್ತೆ. ಭೂಮಿ ಖಾತೆಗಳಲ್ಲಿನ ಅಕ್ರಮಗಳನ್ನು ತಡೆಯಲು ಈ ಕ್ರಮವು ಭೂಮಿ ಖಾತೆಗಳಲ್ಲಿನ ಅಕ್ರಮಗಳನ್ನು ಗುರುತಿಸಲು ಮತ್ತು ತಡೆಯಲು ಸಹಾಯ ಮಾಡುತ್ತೆ. ಒಬ್ಬ ವ್ಯಕ್ತಿಗೆ ಎಷ್ಟು ಭೂಮಿ ಹೊಂದಿದೆ ಎಂಬುದರ ಕುರಿತು ಸ್ಪಷ್ಟ ಚಿತ್ರಣವನ್ನು ಒದಗಿಸುತ್ತದೆ.ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸುಲಭ.
ಈ ಕ್ರಮವು ರೈತರಿಗೆ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸುಲಭವಾಗಿಸುತ್ತವೆ. ಯೋಗ್ಯ ಫಲಾನುಭವಿಗಳಿಗೆ ಸಬ್ಸಿಡಿಗಳು ಮತ್ತು ಇತರ ಪ್ರಯೋಜನಗಳನ್ನ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ತಲುಪಿಸೋಕೆ ಸಹಾಯ ಮಾಡುತ್ತೆ. ಆಗುವಂತಹ ಪ್ರಯೋಜನಗಳನ್ನ ನೋಡೋದಾದ್ರೆ ಭೂ ದಾಖಲೆಗಳನ್ನ ಪಡೆಯೋಕೆ ಇದು ಸುಲಭ ಲಿಂಕ್ ಮಾಡಿದ ನಂತರ ರೈತರು ಆನ್‌ಲೈನ್‌ನಲ್ಲಿ ತಮ್ಮ ಭೂ ದಾಖಲೆಗಳನ್ನ ಸುಲಭವಾಗಿ ಪಡೆಯಬಹುದು. ಹಾಗೇನೇ ಸರ್ಕಾರಿ ಯೋಜನೆ ಸಹಾಯವನ್ನು ಕೂಡ ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ.