ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿರುವ ಮತ್ತೊಂದು ಗೃಹ ಜ್ಯೋತಿ ಯೋಜನೆ ಮೂಲಕ 200 ಯೂನಿಟ್ ಪ್ರತಿ ತಿಂಗಳು ವಿದ್ಯುತ್ ಉಚಿತವಾಗಿ ನೀಡುವ ಮಹತ್ವದ ಯೋಜನೆಯನ್ನ ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ. ಈಗಾಗಲೇ ಸಾಕಷ್ಟು ಜನ ರಾಜ್ಯದಲ್ಲಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಈ ಯೋಜನೆಯೊಂದಿಗೆ ಲಿಂಕ್ ಆಗಿರುವ ಆಧಾರ್ ಸಂಖ್ಯೆಯನ್ನು ಡಿಲಿಂಕ್ ಮಾಡೋದು ಹೇಗೆ ಅಂದ್ರೆ ಗ್ರಹ ಜ್ಯೋತಿ ಯೋಜನೆ ಮೂಲಕ ವಿದ್ಯುತ್ ಬಿಲ್ಗೆ ಲಿಂಕ್ ಆಗಿರುವ ಆಧಾರ್ ಸಂಖ್ಯೆಯನ್ನ ತೆಗೆದು ಹಾಕುವುದು ಹೇಗೆ?ಯಾಕಂದ್ರೆ ಬಹಳಷ್ಟು ಜನ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ತಮ್ಮ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಂಡಿರುತ್ತಾರೆ.

ಮತ್ತೊಂದು ಕಡೆ ಬಳಿಕ ಮತ್ತೊಂದು ಮನೆಯ ವಿದ್ಯುತ್ ಬಿಲ್ಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಿ ಕೊಳ್ಳುವುದು ಅನಿವಾರ್ಯವಾಗಿದ್ದು, ವಿದ್ಯುತ್ ಬಳಕೆದಾರರ ಬದಲಾವಣೆಯ ಸಂದರ್ಭದಲ್ಲಿಯೂ ಕೂಡ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿರುತ್ತೆ. ಹಾಗಾದ್ರೆ ಈ ಕೆಲಸವನ್ನ ಎಲ್ಲಿ ಹೇಗೆ ಮಾಡಬೇಕು ಅನ್ನುವ ಕಂಪ್ಲೀಟ್ ಮಾಹಿತಿಯನ್ನ ನೀಡಲಾಗಿದ್ದು, ಕೊನೆಯವರೆಗೂ ನೋಡಿ.ರಾಜ್ಯ ಸರ್ಕಾರ ಜಾರಿಗೆ ತಂದಂತಹ ಗ್ಯಾರಂಟಿ ಸ್ಕೀಮ್ ಗಳಲ್ಲಿ ಗ್ರಹ ಜ್ಯೋತಿ ಯೋಜನೆ ಕೂಡ ಒಂದು. ಪ್ರತಿ ಮನೆಗೆ 200 ಯೂನಿಟ್ ಗಳವರೆಗೆ ಉಚಿತವಾಗಿ ವಿದ್ಯುತ್ ಸರಬರಾಜು ಫ್ರೀ ಎಲೆಕ್ಟ್ರಿಸಿಟಿ ಒದಗಿಸುವ ಯೋಜನೆ ಇದಾಗಿದೆ. ಪ್ರತಿ ಬ್ಯಾಂಕ್ ಖಾತೆಗೂ ಒಂದು ಆಧಾರ್ ನಂಬರ್ ಅನ್ನು ಲಿಂಕ್ ಮಾಡಿದರೂ ಸಾಕು ಗೃಹ ಜ್ಯೋತಿ ಸಕ್ಸಸ್ ಚಾಲೂ ಆಗುತ್ತೆ.

200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ವ್ಯಯಿಸುವ ಮನೆಗಳಿಗೆ ಈ ಸ್ಕೀಂ ಅನ್ವಯ ಆಗುತ್ತೆ. ಬಾಡಿಗೆ ಮನೆಯಲ್ಲಿರುವವರು ವಿದ್ಯುತ್ ಬಿಲ್‌ಗೆ ತಮ್ಮ ಆಧಾರ್ ನಂಬರ್ ಅನ್ನು ಜೋಡಿಸುತ್ತಾರೆ. ಇಂಥ ಬಾಡಿಗೆದಾರರು ಮನೆ ಬದಲಾಯಿಸಿ ಬೇರೆ ಮನೆಗೆ ಬಾಡಿಗೆಗೆ ಹೋದಾಗ ಹೇಗೆ ಮತ್ತೆ ಹಿಂದಿನ ಮನೆಯ ವಿದ್ಯುತ್ ಬಿಲ್ ಗೆ ಆಧಾರ್ ಲಿಂಕ್ ಆಗಿರೋದರಿಂದ ಬದಲಾಯಿಸಲಾದ ಮನೆಯ ವಿದ್ಯುತ್ ಬಿಲ್ಗೆ ಅದೇ ಆಧಾರ್ ಜೋಡಿಸುವಕ್ಕೆ ಆಗೋದಿಲ್ಲ. ಬಹಳಷ್ಟು ಬಾಡಿಗೆದಾರರು ಇದೆ ವಿಚಾರವಾಗಿ ಪರಿತಪಿಸುತ್ತಿದ್ದಾರೆ. ಈ ಸಮಸ್ಯೆಯು ಸರ್ಕಾರ ಮತ್ತು ಎಸ್ಕಾಂಗಳ ಅರಿವಿಗೆ ಬಂದಿದೆ ಗೃಹ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್ ನಿಂದ ಆಧಾರ್‌ನ ಡೀಲಿಂಗ್ ಮಾಡುವ ಅವಕಾಶವನ್ನ ಕಲ್ಪಿಸಲಾಗ್ತಿದೆ.

ಆಫ್ಲೈನ್ ನಲ್ಲಿ ಇದನ್ನು ಮಾಡಬಹುದು ಅಂದ್ರೆ ನಿಮ್ಮ ಕಛೇರಿಗೆ ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ಡಿಲಿಂಕ್ ಮಾಡಬಹುದು. ಆನ್ಲೈನ್ ನಲ್ಲಿ ಸೇವಾಸಿಂಧು ಪೋರ್ಟಲ್‌ನಲ್ಲಿ ಆದಷ್ಟು ಬೇಗ ಈ ಸೌಲಭ್ಯ ಲಭ್ಯ ಇರಲಿದೆ ಎಂಬ ಮಾಹಿತಿ ಗೊತ್ತಾಗಿದೆ. ಆಫ್‌ಲೈನ್‌ನಲ್ಲಿ ಗೃಹ ಜ್ಯೋತಿ ಸ್ಕೀಮ್ ನಿಂದ ಆಧಾರ್ ಡಿಲಿಂಕ್ ಮಾಡುವ ಪ್ರಕ್ರಿಯೆ ನಿಮ್ಮ ಮನೆಗೆ ಸಮೀಪದ ಎಸ್ಕಾಂ ಕಚೇರಿಗೆ ಹೋಗಿ ನೀವು ಅಲ್ಲಿ ವಿಚಾರಿಸಬಹುದು ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *