ಇಡೀ ದೇಶದ್ಯಾಂತ ಪ್ರಖ್ಯಾತಿಯಾಗಿರುವ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಐದು ಲಕ್ಷಗಳವರೆಗೆ ಸಹಾಯ ಧನವನ್ನು ನೀಡಲಾಗುತ್ತಿದ್ದು, ಸಾಕಷ್ಟು ಜನರಿಗೆ ಈ ಯೋಜನೆ ಅಡಿಯಲ್ಲಿ ಮತ್ತು ಈ ಕಾರ್ಡ್ ಮೂಲಕ ಹಣವನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲದೆ ಇರುವ ಕಾರಣಕ್ಕಾಗಿ ಈ ಕಾರ್ಡ್ ಮನೆಯಲ್ಲಿ ಇದ್ದರೂ ಸಹ ಇದನ್ನೇ ಅನೇಕ ಜನರು ಬಳಕೆ ಮಾಡ್ತಾ ಇಲ್ಲ. ನಿಮ್ಮ ಬಳಿಯೂ ಕೂಡ ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್ ಇದ್ರೆ ಇದರಿಂದ ಹಣವನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ಕಂಪ್ಲೀಟ್ ಮಾಹಿತಿಯನ್ನು ನೀಡಲಾಗಿದೆ. ಪ್ರತಿ ವರ್ಗಕ್ಕೂ ಕೇಂದ್ರ ಸರ್ಕಾರವೂ ವಿಭಿನ್ನ ಯೋಜನೆಗಳನ್ನು ನಡೆಸುತ್ತಿದೆ.
ಯೋಜನೆಗಳ ಮೂಲಕ ಸರ್ಕಾರವು ಆರ್ಥಿಕವಾಗಿ ದುರ್ಬಲ ಜನರಿಗೆ ಸಹಾಯವನ್ನು ಮಾಡುತ್ತದೆ. ಇಂದಿನ ಯುಗದಲ್ಲಿ ಯಾವುದೇ ರೋಗದ ಚಿಕಿತ್ಸೆ ತುಂಬಾನೇ ದುಬಾರಿಯಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರವು 2018 ರಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಪ್ರಾರಂಭಿಸಿತ್ತು. ಯೋಜನೆಯಡಿ ಬರುವುದು 5,00,000 ರೂಪಾಯಿಗಳವರೆಗೆ ಚಿಕಿತ್ಸೆಯನ್ನ ಪಡೆಯುತ್ತಾರೆ. ಆಯುಷ್ಮಾನ್ ಗೋಲ್ಡನ್ ಕಾರ್ಡ್ ದೇಶದಾದ್ಯಂತ 13 ಸಾವಿರಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಮನಿವಾಗಿದೆ. ಆಯುಷ್ಮಾನ್ ಗೋಲ್ಡನ್ ಕಾರ್ಡ್ ನ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಮಾಡಬಹುದು.
ಈ ಕಾರ್ಡ್ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳು ಸೇರಿದಂತೆ ಸುಮಾರು 1500 ಕಾಯಿಲೆಗಳಿಗೆ ಚಿಕಿತ್ಸೆ ಸೌಲಭ್ಯವನ್ನು ಒದಗಿಸುತ್ತದೆ. ನೀವು ಆಯುಷ್ಮಾನ್ ಕಾರ್ಡ್ ಪಡೆಯಲು ಬಯಸಿದರೆ ಮೊದಲು ನಿಮ್ಮ ಹತ್ತಿರ ಸಿ ಎಸಿ ಐ ಕೇಂದ್ರಕ್ಕೆ ಹೋಗಿ ಮತ್ತು ನೀವು ಅಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನ ಭೇಟಿ ಮಾಡಿ.ಇದರ ನಂತರ ನೀವು ನಿಮ್ಮ ದಾಖಲಾತಿಗಳನ್ನು ನೀಡುತ್ತೀರಿ. ಅದನ್ನ ಪರಿಶೀಲಿಸಲಾಗುತ್ತೆ ಮತ್ತು ನಿಮ್ಮ ಅರ್ಹತೆಯನ್ನು ಸಹ ಪರಿಶೀಲಿಸಲಾಗುತ್ತೆ. ಈಗ ಪರೀಕ್ಷೆಯ ಸರಿಯಾಗಿದೆ ಎಂದು ಕಂಡುಬಂದಾಗ ನಿಮ್ಮ ಅರ್ಜಿಯನ್ನ ಮುಂದೂಡಲಾಗುತ್ತದೆ.ಆಯುಷ್ಮಾನ್ ಕಾರ್ಡ್ ರಚಿಸಿದ ನಂತರ ನೀವು ಯೋಜನೆಯಿಂದ ಉಚಿತ ಚಿಕಿತ್ಸೆ ಲಾಭವನ್ನ ಪಡೆಯಬಹುದು.
ಅತ್ಯಂತ ಕಡಿಮೆ ಆದಾಯ ಹೊಂದಿರುವಂತಹ ಜನರು ಆಯುಷ್ಮಾನ್ ಭಾರತ್ ಯೋಜನೆಯ ಲಾಭವನ್ನು ಪಡೆಯುತ್ತಾರೆ. ಇದರೊಂದಿಗೆ ಬಡವರು ಮತ್ತು ಆರ್ಥಿಕವಾಗಿ ದುರ್ಬಲ ವ್ಯಕ್ತಿಗೆ ಪ್ರಯೋಜನವನ್ನ ನೀಡಲಾಗುತ್ತೆ.ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಪ್ರಯೋಜನವು ಗ್ರಾಮೀಣ ಪ್ರದೇಶ ಜನರಿಗೆ ಬಹಳಷ್ಟು ಉಪಯೋಗವಾಗಲಿದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಆಯುಷ್ಮಾನ್ ಯೋಜನೆಯ ಉಪಯೋಗವನ್ನು ಪಡೆಯಲೇಬೇಕು ಇನ್ನು ಮಾಹಿತಿಯಲ್ಲಿ ಗೊಂದಲವಿದ್ದರೆ, ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ