ಸೌರ ಪಂಪ್‌ಸೆಟ್ಗಾಗಿ ಹೊಸ ಅರ್ಜಿಗಳು ಆರಂಭ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಮುಖ್ಯ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರಿಗಾಗಿ ಉಚಿತ ಸೋಲಾರ್ ವಿದ್ಯುತ್‌ಗೆ ಪಂಪ್‌ಸೆಟ್‌ಗಾಗಿ ಹೊಸ ಅರ್ಜಿಗಳನ್ನು ಕರೆಯಲಾಗಿದೆ. ರೈತರು ಈ ಯೋಜನೆಗೆ ಅರ್ಜಿ ನ ಸಲ್ಲಿಸುವ ಮೂಲಕ ಸರಕಾರದಿಂದ ಸಬ್ಸಿಡಿ ಸಹಾಯಧನದೊಂದಿಗೆ ಸೋಲಾರ್ ಪಂಪ್‌ಸೆಟ್ ಪಡೆದುಕೊಳ್ಳಬಹುದಾಗಿದೆ.ನಿಮಗೂ ಕೂಡ ಸರ್ಕಾರದ ಸಹಾಯಧನ ಮತ್ತು ಸಬ್ಸಿಡಿ ಯೋಜನೆ ಅಡಿಯಲ್ಲಿ ಸೋಲಾರ್ ಪಂಪ್‌ಸೆಟ್ ಪಡೆದುಕೊಳ್ಳಲು ಬಯಸುತ್ತಿದ್ದೀರಿ.

ಕೊನೆವರೆಗೂ ನೋಡಿದ್ರೆ ಮಾತ್ರ ನಿಮಗೆ ಕಂಪ್ಲೀಟ್ ಆಗಿ ಅರ್ಥವಾಗುತ್ತದೆ. ನೀರಾವರಿಗೆ ಸಾಂಪ್ರದಾಯಿಕ ಇಂಧನದ ಬದಲಿಕೆ ಸೌರಶಕ್ತಿ ಬಳಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸುವ ಕುಸುಮ್ ಯೋಜನೆಯಡಿ ಸೌಲಭ್ಯ ಪಡೆಯಲು ರಾಜ್ಯದ 18,000 ಲಕ್ಷ ರೈತರು ನೋಂದಣಿ ಮಾಡಿದ್ದಾರೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ. ಯೋಜನೆಯಡಿ ಕೃಷಿ ಪಂಪ್‌ಸೆಟ್ ಅಳವಡಿಸಲು ಒತ್ತು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ, ರಾಜ್ಯ ಸರ್ಕಾರದ ಸಬ್ಸಿಡಿಪಾಲನ ಶೇಕಡಾ 30 50 ಕ್ಕೆ ಏರಿಸಿದೆ.

ಇಂಧನ ಸಚಿವ ಕೆ ಜೆ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಈವರೆಗೆ ರಾಜ್ಯದ 18,00,000 ರೈತರು ಸೌರ ಪಂಪ್‌ಸೆಟ್ ಪಡೆಯಲು ಸೌಮಿತ್ರ ವೆಬ್ ಸೈಟ್ ಅಥವಾ ಆಪ್ ನಲ್ಲಿ ನೋಂದಣಿ ಮಾಡಿದ್ದಾರೆ ಎಂದು ತಿಳಿಸಿದರು.ನೀರಾವರಿಗೆ ಸಾಂಪ್ರದಾಯಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ ಸೌರ ಶಕ್ತಿಯ ಬಳಕೆಯ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್ ಯೋಜನೆ ರೂಪಿಸಲಾಗಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿದ್ದು, ರಾಜ್ಯದ ಎಲ್ಲ ಎಸ್ಕಾಂಗಳು ಪೂರಕವಾಗಿ ಕೆಲಸ ಮಾಡುತ್ತಿವೆ ಎಂದರು. ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ.

ಸರ್ಕಾರದಿಂದ ಹೆಚ್ಚಿನ ಸಹಾಯ ಧನ ನೀಡಲಾಗುತ್ತಿದೆ. ಜೊತೆಗೆ ಕುಸುಂಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು ಸಬ್‌ಮರ್ಸಿಬಲ್ ಅಥವಾ ಪಂಪ್‌ಗಳು, ಪ್ಯಾನಲ್ ಬೋರ್ಡ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ. ಪಂಪ್‌ಸೆಟ್ ಬಳಕೆಯಿಂದ ಎಂಟು ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಕೆಯಾಗಲಿದೆ.ಇದರಿಂದ ರಾತ್ರಿ ವೇಳೆ ರೈತರು ಕೃಷಿ ಚಟುವಟಿಕೆಗಳಿಗೆ ಪರದಾಡಬೇಕಿಲ್ಲ ಎಂದು ವಿವರಿಸಿದರು. ಸೌರ ಶಕ್ತಿಯ ಬಳಕೆ ಮೂಲಕ ರೈತರು.

ಸ್ವಾವಲಂಬನೆ ಸಾಧಿಸಲು ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಡಿ ರೈತರಿಗೆ ಸೌರಚಾಲಿತ ಪಂಪ್ ಸೆಟ್ ಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ. ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಸರ್ಕಾರದಿಂದ ಹೆಚ್ಚಿನ ಸಹಾಯ ಧನ ನೀಡಲಾಗುತ್ತಿದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *