ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ನಮಸ್ತೇ ಪ್ರಿಯ ಓದುಗರೇ, ಹಲವಾರು ಧಾರ್ಮಿಕ ಕ್ಷೇತ್ರದಲ್ಲಿ ಮಂತ್ರಾಕ್ಷತೆಯನ್ನು ನೀಡುತ್ತಾರೆ. ನಮ್ಮ ಯುವ ಪೀಳಿಗೆ ಜನರಿಗೆ ಇದರ ಮಹತ್ವ ಪ್ರಾಮುಖ್ಯತೆ ತಿಳಿದೇ ಇಲ್ಲ. ದೇವಸ್ಥಾನದಲ್ಲಿ ಮಂತ್ರಾಕ್ಷತೆಯನ್ನು ನೀಡಿದರೆ ಅದನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡುತ್ತೇವೆ. ದೇವಾಲಯದಲ್ಲಿ ಗುರುಗಳಿಂದ ಪಡೆದ ಮಂತ್ರಾಕ್ಷತೆ ಬಹಳ ಶಕ್ತಿಯುತವಾಗಿರುತ್ತದೆ. ಅಷ್ಟೇ ಅಲ್ಲದೇ ಇದರಿಂದ ನಮಗೆ ಯಶಸ್ಸು ಆರೋಗ್ಯ ಐಶ್ವರ್ಯ ಎಲ್ಲವೂ ಲಭಿಸುತ್ತದೆ. ಮದುವೆ ಮುಂಜಿ ಸಮಾರಂಭದ ಸ್ಥಳದಲ್ಲಿ ಮಂತ್ರಾಕ್ಷತೆಯನ್ನು ಶುಭ ಸಂಕೇತವಾಗಿ ಉಪಯೋಗಿಸುತ್ತಾರೆ.
ಹಾಗೂ ಮದುವೆ ಆಗುವ ಹುಡುಗ ಹುಡುಗಿಯರಿಗೆ ಆರತಕ್ಷತೆಯನ್ನು ಹಾಕುತ್ತಾರೆ. ಅದು ಸಾವಿರಾರು ಜನರ ಪ್ರಾರ್ಥನೆಯಿಂದ ಕೂಡಿರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆಯ ಮಹತ್ವವನ್ನು ನಾವು ತಿಳಿಸಿಕೊಡುತ್ತೇವೆ ಬನ್ನಿ. ರಾಯರ ಮಠದಲ್ಲಿ ಸಿಗುವ ಮಂತ್ರಾಕ್ಷತೆಯನ್ನು ಪಡೆಯಲು ನಾವು ನಿಜಕ್ಕೂ ಪುಣ್ಯವನ್ನು ಮಾಡಿರಬೇಕು. ಅಲ್ಲಿ ಸಿಕ್ಕ ಮಂತ್ರಾಕ್ಷತೆಯನ್ನು ನಾವು ತಲೆಗೆ ಸರಿಯಾಗಿ ಹಚ್ಚಿಕೊಳ್ಳದೆ ಅದು ಕೈ ತಪ್ಪಿ ಕೆಳಗೆ ಬೀಳುತ್ತದೆ.
ಹೌದು ಮಂತ್ರಾಕ್ಷತೆಯನ್ನು ನಾವು ಸರಿಯಾದ ರೀತಿಯಲ್ಲಿ ನಾವು ಬಳಕೆ ಮಾಡಬೇಕು. ಇಲ್ಲವಾದರೆ ನಮಗೆ ಕಷ್ಟ ಅನ್ನುವುದು ಕಟ್ಟಿಟ್ಟ ಬುತ್ತಿ ಹಾಗೂ ನಾವು ಮಂತ್ರಾಕ್ಷತೆಯನ್ನು ಸರಿಯಾಗಿ ಬಳಕೆ ಮಾಡದೆ ಇದ್ದರೆ ನಾವು ರಾಘವೇಂದ್ರ ಸ್ವಾಮಿಗಳಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆ ಸಿಕ್ಕರೆ ಅದನ್ನು ನಾವು ಬಲಭಾಗದಲ್ಲಿ ಇಟ್ಟುಕೊಳ್ಳಬೇಕು. ಅಥವಾ ಜೇಬಿನ ಬಲಭಾಗದಲ್ಲಿ ಇಟ್ಟುಕೊಳ್ಳಿ. ತದ ನಂತರ ಮನೆಗೆ ಬಂದು ಅದಕ್ಕೆ ಶ್ರೀಗಂಧದ ತಿಲಕವನ್ನು ತುಳಸಿ ದಳಗಳಿಂದ ಹಚ್ಚಿ ಆ ನೀರನ್ನು ತಲೆಯ ಮೇಲೆ ಪ್ರೋಕ್ಷಣೆಯನ್ನು ಮಾಡಿಕೊಳ್ಳಬೇಕು.
ಈ ಮಂತ್ರಾಕ್ಷತೆಯನ್ನು ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಮುಖ್ಯವಾಗಿ ಒಳ್ಳೆಯ ಕೆಲಸವನ್ನು ಮಾಡುತ್ತದೆ. ಮಂತ್ರಾಕ್ಷತೆಯನ್ನು ಶೇಖರಣೆ ಮಾಡಿಕೊಳ್ಳುವುದು ತುಂಬಾನೇ ಒಳ್ಳೆಯದು. ಹೌದು ಈ ಮಾತು ನಿಜಕ್ಕೂ ಸತ್ಯವಾಗಿದೆ. ಗುರುರಾಯರನ್ನು ನಾವು ನೆನೆಸಿ ಯಾವುದೇ ಕೆಲಸವನ್ನು ಮಾಡಿದರು ಕೂಡ ನಮಗೆ ಯಶಸ್ಸು ಅನ್ನುವುದು ಕಟ್ಟಿಟ್ಟ ಬುತ್ತಿ. ನಿಮಗೆ ಕಷ್ಟ ಬಂದರೆ ರಾಯರನ್ನು ನೆನೆದು ಮಂತ್ರಾಕ್ಷತೆಯನ್ನು ತಲೆಯ ಮೇಲೆ ಹಾಕಿಕೊಳ್ಳಿ. ಮಂತ್ರಾಕ್ಷತೆಯು ಅಪಾರವಾದ ಶಕ್ತಿಯನ್ನು ಹೊಂದಿದೆ.
ಇದನ್ನು ನೀವು ಸರಿಯಾದ ಮಾರ್ಗದಲ್ಲಿ ಬಳಕೆ ಮಾಡಿದರೆ ನಿಮಗೆ ಜಯ ಅನ್ನುವುದು ನಿಶ್ಚಯ. ಮಂತ್ರಾಕ್ಷತೆ ಎಂದರೆ ಮಂತ್ರಿಸಿದ ಮಂತ್ರ ಪೂರ್ವಕವಾದಂತಹ ಅಕ್ಷತೆ ಎಂದು ಅರ್ಥ. ಇದು ಆರೋಗ್ಯವನ್ನು ಕಾಪಾಡುತ್ತದೆ ತುಂಬಾನೇ ಸಹಾಯ ಮಾಡುತ್ತದೆ. ಇದನ್ನು ಸುವರ್ಣ ಮಂತ್ರಾಕ್ಷತೆ ಎಂದು ಕರೆಯುತ್ತಾರೆ.ಮಂತ್ರಾಕ್ಷತೆ ಆತ್ಮ ಪ್ರಾಣ ದೇಹಕ್ಕೆ ಸಮರ್ಪಿತ. ಇದು ಅನಿಷ್ಟವನ್ನು ದೌರ್ಭಾಗ್ಯವನ್ನು ದೂರ ಮಾಡುತ್ತದೆ. ವಿಧಿ ವಿಧಾನಗಳಲ್ಲಿ ಬಳಕೆ ಮಾಡುವ ಈ ಮಂತ್ರಾಕ್ಷತೆಗೆ ವಿಶಿಷ್ಟವಾದ ಅರ್ಥವಿದೆ. ಶ್ರೇಯಸ್ಸು ಆಶೀರ್ವಾದದ ಪ್ರತೀಕವಾಗಿದೆ. ರಾಯರ ಮಠದಲ್ಲಿ ಸಿಗುವ ಮಂತ್ರಾಕ್ಷತೆಯನ್ನು ಬಳಕೆ ಮಾಡುತ್ತಿಲ್ಲ. ಇದರ ಬೆಲೆ ನಮ್ಮ ಯುವ ಪೀಳಿಗೆ ಗೆ ಗೊತ್ತಿಲ್ಲ ಗೆಳೆಯರೇ.
ಮಂತ್ರಾಕ್ಷತೆ ಗುರು ಶಿಷ್ಯರ ಬಾಂಧವ್ಯದ ಸಂಕೇತವಾಗಿದೆ. ಮಠಕ್ಕೆ ಬಂದ ಶಿಷ್ಯರಿಗೆ ಗುರುಗಳು ಹಾಗೆ ಕಳುಹಿಸದೆ ಅವರಿಗೆ ಆಶೀರ್ವಾದ ನೀಡಿ ಬರಿಗೈಯಲ್ಲಿ ಕಳುಹಿಸುವುದಿಲ್ಲ. ಹಾಗೆಯೇ ಬರುವಾಗ ತಾಂಬೂಲವನ್ನು ತಂದು ಗುರುಗಳಿಂದ ಮಂತ್ರಾಕ್ಷತೆಯನ್ನು ಪಡೆಯುತ್ತಾರೆ. ಇದಕ್ಕೆ ಒಂದು ಸತ್ಯ ಘಟನೆ ಕೂಡ ಇದೆ. ಹೀಗೆ ಮಂತ್ರಾಲಯದಲ್ಲಿ ಹಲವಾರು ವಿಧ್ಯಾರ್ಥಿಗಳು ವಿದ್ಯೆಯನ್ನು ಕಲಿಯಲೂ ಬರುತ್ತಿದ್ದರು. ಆಗ ಅಲ್ಲಿ ಒಬ್ಬ ಬಡ ವಿದ್ಯಾರ್ಥಿಯು ತನ್ನ ಬಡತನದ ಬಗ್ಗೆ ರಾಯರಲ್ಲಿ ಹೇಳುತ್ತಾ ಕಳ ಕಳಿಯಿಂದ ತನ್ನನ್ನು ಅನುಗ್ರಹಿಸಬೇಕೆಂದು ಅಂತ ಕೇಳಿಕೊಳ್ಳುತ್ತಾನೆ.
ಆಗ ರಾಯರು ಸ್ಥಾನ ಮಾಡುತ್ತಿರುವ ಸಮಯ. ಹೀಗಾಗಿ ಅವರಲ್ಲಿ ಆ ಮಗುವಿಗೆ ಕೊಡಲು ಅವರ ಬಳಿ ಏನು ಇರುವುದಿಲ್ಲ. ಆಗ ಅವರು ನಾನು ನಿನಗೆ ಏನು ಕೊಡಲಿ ಮಗು ಅಂತ ಕೇಳುತ್ತಾರೆ.ಆಗ ಶಿಷ್ಯನು ನಿಮ್ಮ ಬಳಿ ಇರುವ ಒಂದು ಹಿಡಿ ಮಂತ್ರಾಕ್ಷತೆಯನ್ನು ನೀಡಿ ಅಂತ ಭಕ್ತಿಯಿಂದ ಕೇಳಿಕೊಳ್ಳುತ್ತಾನೆ. ಆಗ ರಾಯರು ಅಲ್ಲಿ ಇರುವ ಅಕ್ಕಿಯನ್ನು ತೆಗೆದುಕೊಂಡು ಮಂತ್ರದಿಂದ ಮಂತ್ರಾಕ್ಷತೆಯನ್ನು ಮಾಡಿ ಅವನಿಗೆ ದಯ ಪಾಲಿಸುತ್ತಾರೆ. ಆಗ ವಿಧ್ಯಾರ್ಥಿ ಕತ್ತಲಿನ ಸಮಯದಲ್ಲಿ ಸಮೀಪ ಇರುವ ಒಂದು ಮನೆಯಲ್ಲಿ ಆಶ್ರಯವನ್ನು ಪಡೆಯಲು ಮುಂದಾಗುತ್ತಾರೆ. ಆಗ ಆ ಮನೆಯ ಮಾಲೀಕನ ಹೆಂಡತಿ ತುಂಬು ಗರ್ಭಿಣಿಯಾಗಿರುತ್ತಾಳೆ.
ಅವಳ ಹುಟ್ಟುವ ಮಗುವನ್ನು ಈ ಪಿಶಾಚಿ ಸಾಯಿಸಲು ಮನೆಯನ್ನು ಸೇರಬೇಕೆಂದು ಹೊಂಚು ಹಾಕಿ ಕುಳಿರುತ್ತದೆ. ಆಗ ರಾಯರ ಅಪ್ಪಟ ಭಕ್ತನಾದ ವಿದ್ಯಾರ್ಥಿಯು ಬಾಗಿಲಿನ ಬಳಿ ಮಲಗಿರುವುದನ್ನು ಕಂಡು ಹಾಗೂ ಆತನಲ್ಲಿ ಇರುವ ಮಂತ್ರಾಕ್ಷತೆಯನ್ನು ಕಂಡು ಪಿಶಾಚಿ ಓಡಿ ಹೋಗುತ್ತವೆ. ಅಂತ ಕಥೆ ಹೇಳುತ್ತದೆ. ಆದ್ದರಿಂದ ಮಂತ್ರಾಲಯಕ್ಕೆ ಬಂದ ಭಕ್ತಾದಿಗಳಿಗೆ ಮಂತ್ರಾಕ್ಷತೆಯನ್ನು ನೀಡುತ್ತಾರೆ. ರಾಯರ ಮಂತ್ರಾಕ್ಷತೆ ಯಾನ್ನೂ ಮೆಚ್ಚಿದವರಿಗೆ ಸೋಲೇ ಇಲ್ಲ ಹಾಗೂ ಕ್ಷಯಗಳನ್ನು ದೂರ ಮಾಡುತ್ತದೆ ಮತ್ತು ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಶುಭದಿನ.