ಪ್ರತಿದಿನ ನಾವು ಗಾಡಿಗಳಲ್ಲಿ ಓಡಾಡುವಾಗ ಟ್ರಾಫಿಕ್ ಪೊಲೀಸರು ಹಲವರನ್ನ ಹಿಡಿಯೋದು ಫೈನ್ ಹಾಕೋದು ಅಥವಾ ₹100, ₹200 ಲಂಚ ತೆಗೆದುಕೊಳ್ಳುವುದನ್ನು ನೋಡಿರ್ತೀವಿ ಅದೇ ರೀತಿ ಓರ್ವ ಎತ್ತಿನಗಾಡಿ ಓಡಿಸುವವನಿಗೆ ಪೊಲೀಸ್ ಆಫೀಸರ್ ₹1000 ಫೈನ್ ಹಾಕಿದ್ದಾರೆ.ಇನ್ನು ಆ ಪೊಲೀಸ್ ಆಫೀಸರ್ಗೆ ಈ ರೈತ ಕಲಿಸಿದ ಪಾಠ ನೋಡಿ ಇಡೀ ಭಾರತವೇ ಶಭಾಷ್ ಎನ್ನುತ್ತಿದೆ. ಕಳೆದ ಎರಡ್ಮೂರು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಫೈನ ದಂಡವಾಗಲಿ ತುಂಬಾ ಕಡಿಮೆ ಇತ್ತು.ಆದರೆ ಮೋದಿ ಸರ್ಕಾರವು ಹೊಸ ಕಾನೂನು ತಂದಾಗಿನಿಂದ ದಂಡವನ್ನು ಐದು ಪಟ್ಟು 10 ಪಟ್ಟು ಜಾಸ್ತಿ ಮಾಡಿದೆ.

ಇದನ್ನೇ ಬಂಡವಾಳವಾಗಿಟ್ಟುಕೊಂಡು ಹಲವು ಟ್ರಾಫಿಕ್ ಪೊಲೀಸರು ದಂಡ ವಸೂಲಿಯ ಬದಲು ಲಂಚ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಂದು ದುರಹಂಕಾರಿ ಪೊಲೀಸ್ ಆಫೀಸರ್ ಎತ್ತಿನ ಗಾಡಿಗೆ ‌ಫೈನ ಹಾಕಿದ್ದಾರೆ. ಇನ್ನು ಈ ಘಟನೆ ನಡೆದಿರುವುದು ಉತ್ತರಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿ ಸುಧೀರ್ ಪಾಂಡೆ ಎಂಬುವ ರೈತ ತಾನು ಹೊಲದಲ್ಲಿ ಬೆಳೆದ ತರಕಾರಿಯನ್ನು ಮಾರುವುದಕ್ಕೆ ಮಾರ್ಕೆಟ್ ಗೆ ಹೋಗಿದ್ದ ಆಗ ತನ್ನ ಎತ್ತಿನಗಾಡಿಯನ್ನು ರೋಡ್ ನ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ. ಇಲ್ಲಿಗೆ ಬಂದ ಟ್ರಾಫಿಕ್ ಪೊಲೀಸ್ ಎತ್ತುಗಳನ್ನ ನೋಡಿದ ಮತ್ತು ಅಲ್ಲಿ ಟ್ರಾಫಿಕ್ ಜಾಮ್ ಆದಕಾರಣ 1000 ರೂಪಾಯಿಗಳ ಚಲನ ಹಾಕಿದರು. ಸಬ್‌ಇನ್‌ಸ್ಪೆಕ್ಟರ್ ಪಂಕಜ ಕುಮಾರ್ ಮತ್ತು ಇಲ್ಲಿಗೆ ಬಂದ ರೈತ ಸುಧೀರ್ ಪಾಂಡೆಗೆ ದಂಡ ಕಟ್ಟಿ ನಿನ್ನ ಎತ್ತಿನಗಾಡಿನ್ನ ತೆಗೆದುಕೊಂಡು ಹೋಗು ಎಂದು ಗದರಿದರು.

ಆಗ ಬುದ್ಧಿವಂತಿಕೆಯಿಂದ ಮಾತನಾಡಿದ ಸುಧೀರ್ ಪಾಂಡೆ ಆಯಿತು ಸರ್, ನಾನು ಈ ದಂಡವನ್ನು ಕಟ್ಟಿನಿ. ಆದರೆ ನೀವು ಹಾಕಿರೋ ದಂಡ ಯಾವ ಕಾನೂನಿನ ಅಡಿಯಲ್ಲಿ ಮತ್ತು ಯಾವ ತಪ್ಪಿಗಾಗಿ ಹಾಕಿದ್ದೀರಿ ಎಂದು ಸ್ವಲ್ಪ ಹೇಳುತ್ತೀರಾ ಎಂದು ಪ್ರಶ್ನಿಸಿದ ಆಗ ಸಬ್ ಇನ್‌ಸ್ಪೆಕ್ಟರ್ ಸೆಕ್ಟರ್ 81 ಮೋಟಾರ್ ವೆಹಿಕಲ್ ಕಾಯ್ದೆ ಅಡಿ ಮತ್ತು ನೋ ಪಾರ್ಕಿಂಗ್ ಗಾಗಿ ದಂಡ ಹಾಕಿದಿನಿ ಎಂದು ಹೇಳಿದರು. ಆಗ ರೈತ ಆಯಿತು ಬಿಲ್‌ನಲ್ಲಿ ಗಾಡಿ ನಂಬರ್ ಏನಂತ ಹಾಕಿದಿರಾ ಎಂದು ಕೇಳಿದಾಗ ಆಗ ಸಬ್‌ಇನ್ಸ್‌ಪೆಕ್ಟರ್ ಗಾಡಿ ನಂಬರ್ ಯಾಕೋ ಬೇಕು ಸುಮ್ಮನೆ ದಂಡ ಕಟ್ಟಿ ಹೋಗು ಎಂದು ಗದರಿಸಿದರು. ಆಗ ರೈತ ಗಾಡಿ ನಂಬರ್ ಹಾಕದೇನೆ ದಂಡ ಹಾಕಲು ಹೇಗೆ ಸಾಧ್ಯ ನನ್ನದು ಎತ್ತಿನಗಾಡಿ ಯಾವುದೇ ರಿಜಿಸ್ಟ್ರೇಷನ್ ಮಾಡಿಸ ಇರುವುದಿಲ್ಲ. ಅವು ಪ್ರಾಣಿಗಳು ಗಾಡಿಯಲ್ಲ ಮತ್ತು ಮೋಟಾರ್ ವೆಹಿಕಲ್ ಕಾಯ್ದೆ ಕೇವಲ ಗಾಡಿಗಳಿಗೆ ಅಷ್ಟೇ ದಂಡ ಹಾಕಲಾಗುತ್ತದೆ ಎಂದು ಬುದ್ಧಿವಂತಿಕೆಯಿಂದ ಹೇಳಿದ. ಈ ಮಾತುಗಳಿಗೆ ಏನು ಮಾತನಾಡದೆ ಸಂಪನಿಸ್ಪೆಕ್ಟರ್ ಮುಖಾ ಮುಚ್ಚಿಕೊಂಡು ಬೇರೆ ಕಡೆ ಹೋದನು.

Leave a Reply

Your email address will not be published. Required fields are marked *