ಸ್ವಂತ ವಾಹನ ಇರುವ ದೇಶದ ಎಲ್ಲ ವಾಹನ ಸವಾರರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ದೇಶಾದ್ಯಂತ ಇರುವ ದೇಶದಾಗ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿರುವ ಎಲ್ಲ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ದೇಶದ ಎಲ್ಲ ವಾಹನ ಸವಾರರಿಗೆ ಮತ್ತು ಸಾರಿಗೆ ಸಂಸ್ಥೆಗಳಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಕೇಂದ್ರ ಸರ್ಕಾರ ಟೋಲ್ ಪ್ಲಾಜಾಗಳನ್ನು ಬಂದ್ ಮಾಡುವುದು ಇದು ಒಳ್ಳೆಯ ಕೆಲಸ ಎನ್ನುವ ನಿಮ್ಮ ಅಭಿಪ್ರಾಯವಾಗಿದ್ದರೆ? ಇನ್ಮುಂದೆ ಟೋಲ್ ಗೇಟ್ ನಲ್ಲಿ ಟೋಲ್ ಶುಲ್ಕ ಕಟ್ಟಬೇಕಾ? ಇಲ್ಲವಾ ಹೇಗೆ ಶುಲ್ಕ ಕಟ್ಟಬೇಕು? ಇನ್ನು ಚಿಂತೆ ನಿಮಗಿದ್ದರೆ ಈ ಮಾಹಿತಿ ನೋಡಿ ಟೋಲ್‌ಗೇಟ್‌ಗಳಲ್ಲಿ ವಾಹನ ಹೆಚ್ಚು ಹೊತ್ತು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು.

ಮತ್ತೊಂದೆಡೆ ಟೋಲ್ ಗೇಟ್ ಗಳನ್ನೇ ಗುರಿಯಾಗಿಸಿಕೊಂಡು ಕಳ್ಳರು ದರೋಡೆಕೋರರು ಸಂಗ್ರಹಿಸಿದ ಟೋಲ್ ಹಣವನ್ನು ದೋಚಿರುವ ಘಟನೆಗಳು ಸಾಕಷ್ಟು ನಡೆದಿವೆ. ಕಾಲಾನಂತರದಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಗಳು ಲಭ್ಯವಾಯಿತು. ಕಾರ್ಡ್ಗಳ ಮೂಲಕ ಪಾವತಿಗಳು ಚಿಲ್ಲರೆ ಕೊಡುವುದು ಮತ್ತು ಪಡೆಯುವುದು ಹೀಗೆ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿದರು. ಇದು ತ್ವರಿತ ಪಾವತಿ ವಿಧಾನವಾಗಿ ಬಹಳಷ್ಟು ದಿನ ನಡೆಯಲಿಲ್ಲ. ಆದರೆ ಕಾರ್ಡ್ ಮೂಲಕ ಪಾವತಿಸಿದ ಹಣ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತದೆ ಇದರಿಂದ ದರೋಡೆಕೋರರ ಬೆದರಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಇತ್ತೀಚೆಗಷ್ಟೇ ಜಾರಿಗೆ ಬಂದಿರುವ ಫಾಸ್ಟ್‌ಟ್ಯಾಗ್ ವ್ಯವಸ್ಥೆಯಿಂದ ಚಿಲ್ಲರೆ ನಗದು ಮತ್ತು ಸಂಗ್ರಹಿಸಿದ ಹಣದ ಭದ್ರತೆ ಇಂಥ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿದಿವೆ ಮತ್ತು ವಾಹನಗಳು ಟೋಲ್ ಗೇಟ್ ನಿಂದ ವೇಗವಾಗಿ ಚಲಿಸಲು ಸಾಧ್ಯವಾಯಿತು. ಕೇಂದ್ರ ಸರ್ಕಾರವು ಇತ್ತೀಚಿನ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಯಾಣಿಸಿದ ದೂರವನ್ನು ಮಾತ್ರ ಲೆಕ್ಕ ಹಾಕಿ ಅಷ್ಟೇನೇ ಪಾವತಿಸಲು ಪ್ರಯತ್ನಿಸುತ್ತಿದೆ. ಜಿಪಿಎಸ್ ಉಪಗ್ರಹ ಟೋಲ್ ಈ ಹೊಸ ವ್ಯವಸ್ಥೆಯನ್ನ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಈ ನೀತಿಯನ್ನ ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಅವರು ಈ ವಿಷಯವನ್ನು ತಿಳಿಸಿದರು. ಪ್ರಸ್ತುತ ಈ ಹೊಸ ಟೋಲ್ ವ್ಯವಸ್ಥೆಯನ್ನ ಕರ್ನಾಟಕದ ಬೆಂಗಳೂರು ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275 ಮತ್ತು ಹರಿಯಾಣದ ಪಾಣಿಪತ್ ಹಿಸಾರ್ ನಡುವಿನ ರಾಷ್ಟ್ರೀಯ ಹೆದ್ದಾರಿ 709 ರಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಅಂದರೆ ಶೀಘ್ರದಲ್ಲಿಯೇ ದೇಶದಲ್ಲಿ ಟೋಲ್ ಗೇಟ್ ವ್ಯವಸ್ಥೆ ಬಂದ್ ಆಗಲಿದ್ದು ಆದಷ್ಟು ಬೇಗ ಹೊಸ ತಂತ್ರಜ್ಞಾನ ಉಪಯೋಗಕ್ಕೆ ಬರಲಿದೆ

Leave a Reply

Your email address will not be published. Required fields are marked *