ಈ ಮಹಿಳೆ ಓದಿನಲ್ಲಿ ಅತ್ಯಂತ ಪ್ರತಿಭಾವಂತೆ. ಎಲ್ಲ ವಿಷಯದಲ್ಲೂ ಎಲ್ಲ ತರಗತಿಯಲ್ಲೂ ಇವರೇ ನಂಬರ್ ವನ್ ಪ್ರತಿ ಸಲನೂ ಫಸ್ಟ್ ರ್ಯಾಂಕ್ ಬರ್ತಾ ಇದ್ರು. ಮನೆಯಲ್ಲಿ ತುಂಬಾ ಕಷ್ಟ . ಇವರಿಗೆ ₹1 ಅಂದ್ರೆ 1,00,000 ಇದ್ದ ಹಾಗೆ ಫೈನಾನ್ಸ್ ಪಾತಾಳಕ್ಕೆ ಹೋಗಿತ್ತು. ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೈಬಿಡಲಾಗುತ್ತೆ. ಮುಂದೆ ಓದುವ ಆಸೆ ಆದರೆ ಓದೋದಕ್ಕೆ ದುಡ್ಡಿಲ್ಲ ಯಾರು ಕೂಡ ಸಹಾಯ ಮಾಡಲ್ಲ. ಹಾಗಾಗಿ ಓದನ್ನ ಅರ್ಧಕ್ಕೆ ಕೈಬಿಟ್ಟು ಒಂದು ಕೆಲಸಕ್ಕೆ ಸೇರುತ್ತಾರೆ. ಇವರ ತಂದೆ ಕೂಡ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ದುಡ್ಡು ಸಂಪಾದನೆ ಮಾಡ್ತಾ ಇದ್ರು. ತಾಯಿ ಕೂಡ ಮನೆ ಕೆಲಸ ಮಾಡಿ ಒಂದಿಷ್ಟು ಖಾಸ್ ಅನ್ನು ದುಡಿತಾ ಇದ್ದರು. ಈಕೆಯ ತಂಗಿ ಕೂಡ ಅರ್ಧಕ್ಕೆ ಓದು ಬಿಟ್ಟು ಕೆಲಸಕ್ಕೆ ಸೇರುತ್ತಾರೆ.

ಎಲ್ಲರೂ ದುಡಿದ ದುಡ್ಡನ್ನು ಕೂಡಿಟ್ಟು ಕೂಡ ಪ್ರತಿ ತಿಂಗಳು ₹10,000 ಕೂಡ ಆಗ್ತಿರಲಿಲ್ಲ. ಈ ಮಹಿಳೆಯ ಹೆಸರು ಕುಮಾರಿ ತಂದೆ ಹೇಗೋ ಸಾಲಸೂಲ ಮಾಡಿ ಬಬ್ಲಿ ಕುಮಾರಿ ಅವರಿಗೆ ಮದುವೆ ಮಾಡಿಬಿಡುತ್ತಾರೆ. ಮದುವೆ ಆದ ಮೇಲೆ ಬಬ್ಲಿ ಕುಮಾರಿ ಅವರಿಗೆ ಏನಾಯ್ತು ಅಂತ ಗೊತ್ತಾದರೆ ಖಂಡಿತ ನೀವೆಲ್ಲರೂ ಶಾಕ್ ಆಗ್ತೀರಾ? ಅಷ್ಟೇ ಅಲ್ಲದೇ ಆಶ್ಚರ್ಯ ಕೂಡ ಆಗತ್ತೆ ಯಾಕಪ್ಪ ಅಂದ್ರೆ ಈಗಿನ ಕಾಲದಲ್ಲೂ ಇತರ ವ್ಯಕ್ತಿಗಳು ಇರ್ತಾರಾ ಅಂತ ಸಾಧನೆ ಬಗ್ಗೆ ಕೇಳಿದ್ರೆ ಖಂಡಿತವಾಗಿಯೂ ಮೈ ರೋಮಾಂಚನ ಆಗುತ್ತೆ. ನಾವು ಏನಾದ್ರು ಜೀವನದಲ್ಲಿ ಇವರ ರೀತಿ ಸಾಧನೆ ಮಾಡಿ ತೋರಿಸಬೇಕು ಅಂತ ಆಸೆ ಆಗುತ್ತೆ. ಅವಮಾನ ಮಾಡಿದವರೆ ರೆಡ್ ಕಾರ್ಪೆಟ್ ಹಾಕಿವರಿಗೆ ಸೆಲ್ಯೂಟ್ ಮಾಡ್ತಾರೆ ಅಂದ್ರೆ ಅವರ ಸಾಧನೆ ಬಗ್ಗೆ ನೀವೇ ಯೋಚನೆ ಮಾಡಿ ಹೇಗಿರಬಹುದು ಅಂತ ತಂದೆ ಸಾಲ ಸೂಲ ಮಾಡಿ ಸರಿಯಾದ ಸಮಯಕ್ಕೆ ಕುಮಾರಿ ಅವರ ಮದುವೆ ಮಾಡಿಬಿಡುತ್ತಾರೆ.

ಕುಮಾರಿ ಅವರಿಗೆ ಈ ಮದುವೆ ಇಷ್ಟ ಆಗಿಲ್ಲ. ಯಾಕಪ್ಪಾ ಅಂದರೆ ಕುಮಾರಿ ಅವರು ತಮ್ಮ ಕಾಲ ಮೇಲೆ ತಾವು ನಿಂತು ಕೊಂಡು ಚೆನ್ನಾಗಿ ತಂಗಿ ಅಪ್ಪ ಅಮ್ಮನನ್ನು ಸಾಕಬೇಕು ಅಂತ ಕನಸು ಇರುತ್ತೆ. ಆದರೆ ಈಗ ಕನಸು ನುಚ್ಚುನೂರಾಗಿ ಹೋಯಿತು. ನನ್ನ ಜೀವನವೇ ಹಾಳಾಗಿ ಹೋಯ್ತು ಅಂತ ಅಳುತ್ತಾ ಕೂರುತ್ತಾರೆ ಕುಮಾರಿ ಅವರು ಗಂಡನಿಗೆ ಹೇಳ್ತಾರೆ. ನಾನು ಚೆನ್ನಾಗಿ ಓದಿ ಪೊಲೀಸ್ ಆಗಬೇಕು. ನನ್ನನ್ನು ಓದಿಸಿ ನಿಮ್ಮ ಕೈಯಲ್ಲಿ ಆಗಿಲ್ಲ ಅಂದ್ರು ಪರವಾಗಿಲ್ಲ ನಾನು ಕೆಲಸ ಮಾಡುತ್ತೇನೆ, ಇದಕ್ಕೆ ಇಲ್ಲ ಅನ್ನಬೇಡಿ ಅಂತ ನೀನು ಏನು ಬೇಕಾದ್ರು ನಾನು ನಿನ್ನ ಜೊತೆ ಇದ್ದೀನಿ ನಿನ್ನ ಆಸೆಗಳಿಗೆ ನಾನು ಯಾವತ್ತೂ ಅಡ್ಡಿ ಬರಲ್ಲ, ನೀನು ಕೆಲಸ ಮಾಡುವ ಅವಶ್ಯಕತೆ ಇಲ್ಲ, ನೀನು ಬೇಕಾದರೆ ಕೋರ್ಸ್ ಮತ್ತು ಕೋಚ್‌ನನ್ನು ತಗೋ ದುಡ್ಡು ನಾನೇ ಕೊಡುತ್ತೇನೆ ಡೋಂಟ್ ವರಿ ಅಂತ ಹೇಳ್ತಾರೆ. ನಂತರ ಬಬ್ಲಿ ಕುಮಾರಿ ಅವರು ಸರ್ಟಿಫಿಕೇಟ್ ಕೂಡ ತಗೋತಾರೆ.

ಪೊಲೀಸ್ ಎಕ್ಸಾಮ್‌ಗೆ ತಯಾರಿ ಮಾಡಿಕೊಂಡು ಎಕ್ಸಾಮ್‌ ಬರೀತಾರೆ. 2014 ರಲ್ಲಿ ತಾನು ಕಂಡ ಕನಸು ನನಸಾಗುತ್ತೆ. ಪೊಲೀಸ್ ಪೇದೆಯಾಗಿ ಸೆಲೆಕ್ಟ್ ಆಗ್ತಾರೆ. ಅವರು ಪೊಲೀಸ್ ಪೇದೆ ಆದ ಕೆಲವೇ ತಿಂಗಳಲ್ಲಿ ಈವರೆಗೆ ಮಗು ಕೂಡ ಆಗುತ್ತೆ. ಆದರೆ ಪೊಲೀಸ್ ಪೇದೆ ಕೆಲಸ ಅಂದ್ರೆ ಅಷ್ಟು ಸುಲಭದ ಕೆಲಸವಲ್ಲ. ಕುಮಾರಿ ಅವರು ಅಂದುಕೊಂಡಿದ್ದೇ ಬೇರೆ ಕೆಲಸಕ್ಕೆ ಹೋದ ಕುಮಾರಿ ಅವರಿಗೆ ಯಾರು ಕೂಡ ಅಷ್ಟೊಂದು ಬೆಲೆ ಕೊಡೋದಿಲ್ಲ. ಸಹಚರರು ತುಂಬಾ ಚೆನ್ನಾಗಿ ಮಾತನಾಡಿಸುತ್ತಿದ್ದರು. ಆದರೆ ಸ್ಟೇಷನ್ಗೆ ಬರುವ ಕೈದಿಗಳು ಏಕ ವಚನದಲ್ಲಿ ಬಾಯಿಗೆ ಬಂದಹಾಗೆ ಕುಮಾರಿ ಅವರಿಗೆ ಮಾತನಾಡಲು ಶುರುಮಾಡ್ತಾರೆ. ರಾಜಕೀಯ ವ್ಯಕ್ತಿಗಳು ಕೂಡ ಕುಮಾರಿ ಅವರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ.

ಇದರಿಂದ ಬೇಸತ್ತ ಕುಮಾರಿ ಅವರು ನಾನು ಹೇಗಾದ್ರೂ ಮಾಡಿ ಇನ್ನೂ ಚೆನ್ನಾಗಿ ಓದಿ IAS ಆಫೀಸರ್ ಆಗಲೇಬೇಕು. ಇಲ್ಲ ಅಂದರೆ ನನ್ನ ಕೈಯಲ್ಲಿ ಅವಮಾನ ಸಹಿಸೋಕೆ ತುಂಬಾ ದಿನ ಆಗೋದಿಲ್ಲ.ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದುತ್ತಾರೆ ಪರೀಕ್ಷೆ ಬರೆದು ರಾಜ್ಯಕ್ಕೆ ಟಾಪ್ ಸ್ಥಾನ ಪಡೆದು ದೊಡ್ಡ ಮಟ್ಟದಲ್ಲಿರೇ ಬರ್ತಾರೆ. ಕುಮಾರ್ ಅವರು ಡಿಎಸ್‌ಪಿ ಹುದ್ದೆಯ ಪರೀಕ್ಷೆಯಲ್ಲಿ ರ‌್ಯಾಂಕ್ ಬಂದಿರುವುದು ಗೊತ್ತಾಗಿ ಕುಣಿದು ಕುಪ್ಪಳಿಸಿದ್ದಾರೆ. ಕುಮಾರಿ ಅವರ ಪತಿ ಬಂಧು ಮಿತ್ರರ ಮನೆಗೆ ಹೋಗಿ ಸಿಹಿ ಹಂಚಿ ಬರುತ್ತಾರೆ. ನಂತರಕುಮಾರಿ ಅವರು ಸ್ಟೇಷನ್ಗೆ ಹೋದಾಗ ದೃಶ್ಯನೆ ಬೇರೆ ಆಗಿರುತ್ತೆ. ಯಾರು ಅವರಿಗೆ ಅವಮಾನ ಮಾಡಿದ್ರು. ಅವರೇ ಎದ್ದು ನಿಂತು ಸೆಲ್ಯೂಟ್ ಮಾಡ್ತಾರೆ.

Leave a Reply

Your email address will not be published. Required fields are marked *