ಸ್ಯಾಂಡಲ್ ವುಡ್ ನಲ್ಲಿ ಮದುವೆ ವಿಚಾರಕ್ಕಂತೂ ಸುದ್ದಿಯಲ್ಲಿದ್ದಾರೆ ಇರುತ್ತಾರೆ ಜನ ಇದೀಗ ಅದೇ ರೀತಿ ತರುಣ್, ಸುಧೀರ್ ಮತ್ತು ಇದೀಗ ಸೋನಾಲ್ ಅವರು ಮದುವೆಯಾಗುತ್ತಿದ್ದಾರೆ. ಹಾಗಾದ್ರೆ ನಿಜಕ್ಕೂ ತರುಣ್ ಸುಧೀರ್ ಸೋನಾಲ್ ಎಷ್ಟು ವರ್ಷ ಚಿಕ್ಕವರು ಇವರಿಬ್ಬರ ವಯಸ್ಸಿನ ಅಂತರವೆಷ್ಟು ಅಂತ ನೋಡೋಣ. ಹೌದು ರಾಬರ್ಟ್ ಕಾಟೇರಾ ದಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ತರುಣ್ ಸುಧೀರ್ ಹಾಗು ನಟಿ ಸೋನಾಲ್ ಇನ್ನೇನು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಜೋಡಿಯ ಮದುವೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಕೊನೆಗೂ ತರುಣ್, ಸುಧೀರ್ ಹಾಗೂ ಸೋನಾಲಿ ನಂತರ ಇಬ್ಬರು ಅಧಿಕೃತವಾಗಿ ಮದುವೆ ಆಗುತ್ತಿರುವ ವಿಷ್ಯವನ್ನ ಅನೌನ್ಸ್ ಮಾಡಿದ್ದಾರೆ. ಜುಲೈ 22 ತರುಣ್, ಸುಧೀರ್ ಹಾಗು ಸೋನಾಲ್ ಮಾಂತೆರೋ ಇಬ್ಬರು ಮದುವೆ ಬಗ್ಗೆ ವಿಡಿಯೋ ರಿಲೀಸ್ ಮಾಡಿ ಅಧಿಕೃತವಾಗಿ ಘೋಷಣೆ ಮಾಡಿದ್ದರು.
ನನ್ನ ನಾಯಕಿ ಸೊನಾಲ್ ಜೊತೆಗೆ ನನ್ನ ಶ್ರೇಷ್ಠ ಪ್ರೇಮ ಕಥೆಯನ್ನ ನಿರ್ದೇಶಿಸುತ್ತಿದ್ದೇನೆ ಎಂದು ಬರೆದು ತರುಣ್ ಸುಧೀರ್ ಬರೆದುಕೊಂಡಿದ್ದರು. ಶ್ರೇಷ್ಠ ಪ್ರೇಮ ಕತೆಯಲ್ಲಿ ನಾನು ನನ್ನ ಜೆಂಟಲ್‌ಮ್ಯಾನ್ ತರುಣ್ ಜೊತೆ ನಡೆಸುತ್ತಿದ್ದೇನೆ ಎಂದು ವಿಡಿಯೋ ಪೋಸ್ಟ್ ಮಾಡಿ ಸೋನಾಲಿ ಬರೆದುಕೊಂಡಿದ್ದರು. ಈ ವಿಡಿಯೋ ಆಮಂತ್ರಣ ಪತ್ರಿಕೆಯಲ್ಲಿ ಸಾಗುತ್ತಿದ್ದಂತೆ ಇಬ್ಬರ ಅಭಿಮಾನಿಗಳಿಗೂ ಕೂಡ ಈ ಜೋಡಿಯ ಲವ್ ಸ್ಟೋರಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರುತ್ತಿದ್ದಾರೆ. ಅದೇ ರೀತಿ ಮತ್ತೆ ಕೆಲವರು ಇಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಹಾಗಿದ್ದರೆ ನಿರ್ದೇಶಕ ತರುಣ್ ಸುಧೀರ್ ಹಾಗು ನಟಿ ಸೋನಾಲ್ ಅವರ ಇಬ್ಬರ ವಯಸ್ಸಿನ ಅಂತರ ಎಷ್ಟು ಅಂತ ನೋಡೋಣ. ಕನ್ನಡ ಚಿತ್ರರಂಗದ ದಿಗ್ಗಜ ಸುಧೀರ್ ಅವರ ಕಿರಿಯ ಪುತ್ರ ತರುಣ್ ಸುಧೀರ್ ಮೊದಲು ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಆ ಬಳಿಕ ನಟನೆಗೆ ಬ್ರೇಕ್ ಕೊಟ್ಟು ನಿರ್ದೇಶನದ ಕಡೆ ಮುಖ ಮಾಡಿದರು. ನಟನೆಯಲ್ಲಿ ಸಿಗದ ಯಶಸ್ಸು ನಿರ್ದೇಶನದಲ್ಲಿ ಸಿಕ್ಕಿತ್ತು. ಸುಧೀರ್ ಅಂತಹ ದಿಗ್ಗಜನ ಮಗನಾಗಿದರು. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಲು ಸಾಕಷ್ಟು ಪರದಾಡಬೇಕಾಗಿತ್ತು. ಕೊನೆಗೂ ಸ್ಯಾಂಡಲ್‌ವುಡ್ ಸ್ಟಾರ್ ಡೈರೆಕ್ಟರ್ ಪಟ್ಟಿಯಲ್ಲಿ ತರುಣ್ ಸುಧೀರ್ ಸೇರಿಕೊಂಡಿದ್ದಾರೆ. ಚೌಕ, ರಾಬರ್ಟ್ ಮತ್ತು ಕಾಟೇರದಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ತರುಣ್ ಸುಧೀರ್ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತರುಣ್ ಸುದೀರ್ 1982 ರಲ್ಲಿ ಹೊಸಪೇಟೆಯಲ್ಲಿ ಜನಿಸಿದ್ದಾರೆ ಇದನ್ನೇ ಆಧಾರವಾಗಿಟ್ಟುಕೊಂಡು ನೋಡುವುದಾದರೆ ತರುಣ್ ಸುಧೀರ್ ಅವರ ವಯಸ್ಸು ಈಗ 41 ವರ್ಷ . ಆದರೆ ಅಧಿಕೃತವಾಗಿ ತಮ್ಮ ವಯಸ್ಸಿನ ಬಗ್ಗೆ ತರುಣ್ ಸುದೀರ್ ಎಲ್ಲೂ ಹೇಳಿಕೊಂಡಿಲ್ಲ. ಹಾಗೆ ಸೊನಾಲ್ ಅವರು ಮೂಲತಃ ಮಂಗಳೂರು ಅವರು ತುಳು ಭಾಷೆಯ ಎಕ್ಕಸಕ ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟಿದ್ದರು. ತುಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಬಳಿಕ 2018 ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇವರ ವಯಸ್ಸು ಈಗ 30 ವರ್ಷ ಹಾಗೆ ನೋಡಿದರೆ ಸುಮಾರು 11 ವರ್ಷಗಳ ವಯಸ್ಸಿನ ಅಂತರವಿದೆ.