ಇಡೀ ಕರ್ನಾಟಕದಾದ್ಯಂತ ಇರುವ ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ಇದೆ. ಆಗಸ್ಟ್ 31 ರ ಒಳಗಾಗಿ ಈ ಕೆಲಸ ಮಾಡೋದು ಕಡ್ಡಾಯ. ಈಗಾಗಲೇ ಕರ್ನಾಟಕ ರಾಜ್ಯದ ಕಂದಾಯ ಇಲಾಖೆ ಮತ್ತು ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶವನ್ನ ಹೊರಡಿಸಲಾಗಿದ್ದು, ಪ್ರತಿಯೊಬ್ಬ ರೈತರು ಕೂಡ ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು. ಒಂದು ವೇಳೆ ಮಾಡದೆ ಹೋದ ಪಕ್ಷದಲ್ಲಿ ನಿಮಗೆ ಸರ್ಕಾರದಿಂದ ದೊರೆಯುವ ನಿಮ್ಮ ಜಮೀನಿಗೆ ದೊರೆಯುತ್ತಿರುವ ಮತ್ತೆ ಮುಂದೆ ದೊರೆಯುವ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ನೀಡುವುದಿಲ್ಲ ಅಂದ್ರೆ ಪ್ರಧಾನ ಮಂತ್ರಿ ಕಿಸಾನ್ ಸಾಮಾನ್ಯ ಯೋಜನೆ ಮತ್ತು ಬೆಳೆ ಪರಿಹಾರ, ಬರ ಪರಿಹಾರ ಬ್ಯಾಂಕುಗಳಲ್ಲಿ ಸಾಲ ರಾಷ್ಟ್ರೀಕೃತ ತ ವ ಸಹಕಾರಿ ಬ್ಯಾಂಕ್ ರೈತರಿಗೆ ದೊರೆಯುವ ಸಬ್ಸಿಡಿ ಬೀಜಗಳು, ಸಬ್ಸಿಡಿ, ಕೃಷಿ ಉಪಕರಣಗಳು, ಗಂಗಾ ಕಲ್ಯಾಣ ಸೇರಿದಂತೆ ಸರ್ಕಾರದಿಂದ ಹೀಗೆ ರೈತರಿಗೂ ಮತ್ತು ಜಮೀನಿಗೂ ದೊರೆಯುವ ಎಲ್ಲ ಸೌಲಭ್ಯಗಳನ್ನ ಬಂದ್ ಮಾಡಲಾಗುತ್ತೆ.

ಅದಕ್ಕಾಗಿ ಯಾವ ರೈತನ ಹೆಸರಿನಲ್ಲಿ ಜಮೀನು ಇರುತ್ತದೆಯೋ ಆ ರೈತನು ಮಾತ್ರ ಇದೇ ತಿಂಗಳು ಅಂದ್ರೆ 2024 ನೇ ಈ ವರ್ಷದ ಆಗಸ್ಟ್ ಮೂವತ್ತೊಂದನೇ ತಾರೀಕಿನ ಒಳಗಾಗಿ ಪ್ರತಿಯೊಬ್ಬ ರೈತನು ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು. ಬನ್ನಿ, ಹಾಗಾದರೆ ನೀವು ಕೂಡ ಸ್ವಂತ ಜಮೀನು ಇರುವ ಜಮೀನಿನ ಮಾಲಿಕರಾಗಿದ್ದರೆ? ಅಥವಾ ನಿಮಗೂ ಕೂಡ ತಂದೆ ತಾಯಿ ಅಥವಾ ತಾತ ಮುತ್ತಾತನ ಹೆಸರಿನಲ್ಲಿ ಸ್ವಂತ ಜಮೀನು ಇದ್ರೆ
ಕಡ್ಡಾಯವಾಗಿ ಯಾವ ಕೆಲಸ ಮಾಡಲೇಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳಲು ಕೊನೆವರೆಗೂ ನೋಡಿ.

ಈಗಾಗಲೆ 2.68 ಕೋಟಿ ರೈತರ ಆಧಾರ್ ಸೀಡಿಂಗ್ ಮುಕ್ತಾಯವಾಗಿದ್ದು ಆಧಾರ್ ಸೇರಿ ಕೆಲಸ ಮುಕ್ತಾಯವಾಗಿದೆ. ಇದು ಆಗಸ್ಟ್ ತಿಂಗಳ ಅಂತ್ಯದ ಒಳಗಾಗಿ ಆಧಾರ್ ಸೀಡಿಂಗ್ ಕೆಲಸವನ್ನ ಪೂರ್ಣಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ 4.8 ಕೋಟಿ ಜಮೀನಿನ ಮಾಲೀಕತ್ವದ ಇದೆ. ಈವರೆಗೆ 2.68 ಕೋಟಿ ರೈತರನ್ನ ಖುದ್ದು ಭೇಟಿ ಮಾಡಿ ಆಧಾರ್ ಜೊತೆಗೆ ಆರ್ಟಿಸಿ ಲಿಂಕ್ ಮಾಡಲಾಗಿದೆ. ಶೇಕಡಾ 65 ರಷ್ಟು ಕೆಲಸ ಸಂಪೂರ್ಣವಾಗಿದ್ದು, ಈ ತಿಂಗಳಾಂತ್ಯದೊಳಗೆ ಕನಿಷ್ಠ ಶೇಕಡಾ ತೊಂಭತ್ತರಷ್ಟು ಕೆಲಸ ಮುಗಿಸುವ ಗುರಿ ಹೊಂದಿದೆ. ಇದರ ಬಗ್ಗೆ ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ತಪ್ಪದೇ ಈ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *