ಇತ್ತೀಚಿಗೆ ಘಟನೆ ನಮ್ಮ ಕರ್ನಾಟಕದಲ್ಲಿ ನಡೆದಿರುವಂತಹದ್ದು ಈ ಘಟನೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಏಕೆಂದರೆ ಇವರು ಮಾಡಿರುವಂತಹ ಘನಗೋರ ಕೆಲಸ ತುಂಬಾನೇ ಕೋಪ ತರುವಂತ ಪರಿಸ್ಥಿತಿಯಾಗಿದೆ. ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಇಟ್ಟು ಫೋಟೋ ಕ್ಲಿಕ್ಕಿಸಿ ಬಳಿಕ ತಟ್ಟೆಯಿಂದ ಮೊಟ್ಟೆಯನ್ನ ತೆಗೆದು ಕೊಳ್ಳುವಂತಹ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯ ವಿಡಿಯೋ ವೈರಲ್ ಆಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿರುವಂತಹ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕಾರ್ಯಕರ್ತೆ ಹಾಗೂ ಸಹಾಯಕಿ ವಿರುದ್ಧವಾಗಿ ಸ್ಥಳೀಯರು ಆಕ್ರೋಶವನ್ನ ಹೊರಹಾಕಿದ್ದಾರೆ. ಇನ್ನು ಅಂಗನವಾಡಿ ಮಕ್ಕಳಿಗೆ ಕೊಡುವಂತಹ ಮೊಟ್ಟೆಯಲ್ಲಿ ವಂಚನೆ ಮಾಡಿರುವಂತಹ ಆರೋಪ ಕೇಳಿಬಂದಿದ್ದು ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ, ಸಹಾಯಕಿ ಶೈಲಜಾ ಬೇಗಮ್ ರವರನ್ನ ಸಸ್ಪೆಂಡ್ ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯ ತಾಲೂಕಿನಲ್ಲಿ ಒಂದು ಘಟನೆ ನಡೆದಿದೆ. ಗುಂಡೂರು ಗ್ರಾಮದ ಅಂಗನವಾಡಿಯ ಶಾಲೆಯಲ್ಲಿ ಕಾರ್ಯಕರ್ತೆ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶವನ್ನು ಹೊರಡಿಸಿದ್ದಾರೆ. ಕೊಪ್ಪಳ, ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವಂತಹ ಮೊಟ್ಟೆಯಲ್ಲಿ ಗೋಲ್ ಮಾಲ್ ನಡೆದಿದೆ. ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಲೆತಗ್ಗಿಸುವಂತೆ ಕೆಲಸವನ್ನ ಮಾಡಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ ನಂತರ ಮೊಟ್ಟೆಯನ್ನು ಕಸಿದುಕೊಳ್ಳುವಂತಹ ಘಟನೆ ವಿಡಿಯೋದಲ್ಲಿ ಇದೆ. ಅದು ವೈರಲ್ ಆಗಿದೆ. ಈಗ ಮಕ್ಕಳು ಬಾಯಿಗೆ ಬಟ್ಟೆ ಹಾಕಿಕೊಳ್ಳೋಕೆ ಮುಂಚೆನೇ ಕಾರ್ಯಕರ್ತರು ಏನು ಮರಳಿ ಮೊಟ್ಟೆ ಅನ್ನ ಕಸಿದಿದ್ದಾರೆ.
ಈ ಒಂದು ಕೃತ್ಯದ ವಿಡಿಯೋ ಈಗ ವೈರಲ್ ಆಗ್ತಾ ಇದೆ. ಕಾರ್ಯಕರ್ತೆ ಸಹಾಯಕಿಯನ್ನ ಅಮಾನತು ಮಾಡಲಾಗಿದೆ. ಇನ್ನ ಸ್ಥಳೀಯರು ಕೂಡ ಇವರಿಬ್ಬರಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ ಅಲ್ಲಿನ ಸ್ಥಳೀಯರು. ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ನೋಡಿರಬಹುದು ಯಾವ ರೀತಿ ಮಕ್ಕಳಿಗೆ ಮೊಟ್ಟೆ ಇಟ್ಟು ತಟ್ಟೆಯಲ್ಲಿ ಊಟವನ್ನು ಕ್ಲಿಕ್ಕಿಸಿ ನಂತರ ಆ ಮೊಟ್ಟೆಯನ್ನ ಹೇಗೆ ಕಸಿದುಕೊಳ್ತಾರೆ ಅಂತ ಈ ರೀತಿಯ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ಅವ್ಯವಸ್ಥೆ ಮತ್ತು ಅಕ್ರಮ ಹೆಚ್ಚಾಗಿದ್ದು, ಜಿಲ್ಲೆಯ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿ ಚಂದ್ರಶೇಖರ್ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗನವಾಡಿಗೆ ಮೊಟ್ಟೆ ಬಂದರೆ ಅದನ್ನು ಸಂಪೂರ್ಣವಾಗಿ ಮಕ್ಕಳಿಗೆ ಕೊಡಬೇಕು ಹೀಗೆ ಮರಳಿ ಪಡೆಯುವುದು ಕಾನೂನುಬಾಹಿರವಾಗಿದೆ ಎಂದು ಆದೇಶ ನೀಡಿದ್ದಾರೆ. ಅದಲ್ಲದೆ ಇಡೀ ಊರಿನಲ್ಲಿ ಇವರಿಬ್ಬರ ವಿರುದ್ಧ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹ ಕೂಡ ಮಾಡುತ್ತಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ