ಇಡೀ ಕರ್ನಾಟಕದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಬಿಗ್ ಶಾಕ್ ನೀಡಿದ್ದಾರೆ. ಇದೇ ತಿಂಗಳು ಆಗಸ್ಟ್ 31 ರ ಒಳಗಾಗಿ ರಾಜ್ಯದ ಎಲ್ಲ ರೈತರು ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲ ಅಂದ್ರೆ ನಿಮಗೆ ಇನ್ನು ಮುಂದೆ ಸರ್ಕಾರದ ಯಾವುದೇ ಸೌಲಭ್ಯಗಳು ಮತ್ತು ಯಾವುದೇ ಯೋಜನೆಗಳು ದೊರೆಯುವುದಿಲ್ಲ. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರಾಜ್ಯ ಸರ್ಕಾರದಿಂದ ಬೆಳೆ ಹಾನಿ ಪರಿಹಾರ, ಸಬ್ಸಿಡಿ, ಕೃಷಿ ಯಂತ್ರೋಪಕರಣ, ಸಬ್ಸಿಡಿ ಬೀಜಗಳು ಸೇರಿದಂತೆ ರೈತರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಬ್ಸಿಡಿ ಮೂಲಕ ಒದಗಿಸುವ ಸರ್ಕಾರದ ಎಲ್ಲ ಸೌಲಭ್ಯಗಳು ಬಂದ್ ಆಗುತ್ತವೆ. ಅದಕ್ಕಾಗಿ ರಾಜ್ಯದ ಪ್ರತಿಯೊಬ್ಬ ರೈತರು ಕೂಡ ಈ ಕೆಲಸ ಮಾಡುವುದು ಕಡ್ಡಾಯ. ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಪ್ರತಿಯೊಬ್ಬ ರೈತರು ಈ ಕೆಲಸ ಈಗಲೇ ಮಾಡಿ ಮುಗಿಸಿ ಬನ್ನಿ.
ಈಗಾಗಲೇ 2.68 ಕೋಟಿಗೂ ಹೆಚ್ಚು ರೈತರ ಆಧಾರ್ ಸೀಡಿಂಗ್ ಕೆಲಸ ಮುಕ್ತಾಯವಾಗಿತ್ತು. ಆಗಸ್ಟ್ ತಿಂಗಳ ಅಂತ್ಯದ ಒಳಗಾಗಿ ಆಧಾರ್ ಸೀಡಿಂಗ್ ಕೆಲಸವನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಸಚಿವ ಕೃಷ್ಣ ಭೈರೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯಾದ್ಯಂತ 4.8 ಕೋಟಿ ಜಮೀನಿನ ಮಾಲೀಕತ್ವ ಇದೆ. ಈವರೆಗೆ 2.68 ಕೋಟಿ ರೈತರನ್ನ ಖುದ್ದು ಭೇಟಿ ಮಾಡಿ ಆಧಾರ್ ಜೊತೆ ಆರ್ ಟಿಸಿ ಲಿಂಕ್ ಮಾಡಲಾಗಿದೆ. ಶೇಕಡಾ 65 ರಷ್ಟು ಕೆಲಸ ಸಂಪೂರ್ಣವಾಗಿದ್ದು, ಈ ತಿಂಗಳ ಅಂತ್ಯದೊಳಗೆ ಕನಿಷ್ಠ ಶೇಕಡಾ ತೊಂಭತ್ತರಷ್ಟು ಕೆಲಸ ಮುಗಿಸುವ ಗುರಿ ಹೊಂದಲಾಗಿದೆ ಎಂದರು. ಆದ ಸಿಡಿನಿಂದಾಗಿ ಸರ್ಕಾರಕ್ಕೆ ಸಾಕಷ್ಟು ಅಂಕಿಅಂಶಗಳು ಸಿಗುತ್ತಿದೆ. ಪಾಣಿಯಲ್ಲಿ ಅವರ ಹೆಸರು ಉಲ್ಲೇಖವಾಗಿರುವುದು ಆಧಾರ್ ಸೀಡಿಂಗ್ ನಿಂದ ತಿಳಿದುಬಂದಿದೆ. ಹೀಗಾಗಿ ಎರಡು ತಿಂಗಳ ನಂತರ ಅದಾಲತ್ ಮೂಲಕ ಪೌತಿ ಖಾತೆ ಅಭಿಯಾನ ಆರಂಭಿಸುವ ಚಿಂತನೆ ಇದೆ.
ಅಲ್ಲದೆ ಆಧಾರ್ ಸೀಡಿಂಗ್ ನಿಂದಾಗಿ ನಕಲಿ ವ್ಯಕ್ತಿ ಸೃಷ್ಟಿಸಿ ಅಕ್ರಮವಾಗಿ ಜಮೀನು ಮಾರಾಟವನ್ನು ತಪ್ಪಿಸಬಹುದು. ಇದೇ ದೃಷ್ಟಿ ಸರಕಾರದ ಮುಖ್ಯ ಯೋಜನೆಯಾಗಿದೆ ಏಕೆಂದರೆ ಮೋಸ ಹೋಗುವುದನ್ನು ರೈತರಿಂದ ತಡೆಯುವುದು ಸರ್ಕಾರದ ಮುಖ್ಯ ಕೆಲಸವಾಗಿದೆ ಅದನ್ನು ಮಾಡುವಲ್ಲಿ ಸರ್ಕಾರ ಒಂದು ವೇಳೆ ವಿಫಲವಾದರೆ ಈ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಹಾಗಾಗಿ ಅಮ್ಮ ಎಲ್ಲಾ ಶಕ್ತಿಗಳನ್ನು ಮೀರಿ ಈ ಕೆಲಸವನ್ನು ಸರ್ಕಾರ ಮಾಡುತ್ತಿದೆ ಬಿಟ್ಟುಹೋದ ಸರ್ಕಾರದ ಜಮೀನುಗಳು ಸಹ ಇದೀಗ ಸಿಕ್ಕಿದೆ ಒತ್ತುವರಿಯಾದದ್ದು ಗೊತ್ತಾಗಿದೆ. ಜಮೀನಿಗೆ ಆಧಾರ್ ಲಿಂಕ್ ಮಾಡುವಾಗ 2.2 ಕೋಟಿ ಜಮೀನು ಸರ್ಕಾರಿ ಭೂಮಿ ಎಂದು ಗುರುತಿಸಿದ ಭೂಮಿವೆಂದು ತಿಳಿದುಬಂದಿದೆ. ಆಧಾರ್ ಸೀಡಿಂಗ್ ಮುಗಿಯುವುದರ ಒಳಗಾಗಿ ಮೂರರಿಂದ 3.5 ಕೋಟಿ ಹೆಚ್ಚುವರಿ ಸರ್ಕಾರಿ ಭೂಮಿ ಲೆಕ್ಕಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ