ಈ ಬಾರಿಯ ಬಿಗ್ ಬಾಸ್ ನಲ್ಲಿ ರೋಚಕ ತಿರುವು ಇದೆ. ಹೌದು ಮೊದಲೆಲ್ಲ ಬಿಗ್ ಬಾಸ್ ನಲ್ಲಿ ಒಂದು ಪ್ರೋಮೋದಿಂದ ಬಿಡುಗಡೆ ಆಗುತ್ತಿತ್ತು. ಆದರೆ ಇದೀಗ ಒಂದು ದೊಡ್ಡ ಯುದ್ಧ ಇದೆ ಅಂತ ಪ್ರೋಮೋ ರಿಲೀಸ್ ಮಾಡಿದ್ದಾರೆ. ಇದೀಗ ಅದೇ ರೀತಿ ಫೈನಲ್ ಸ್ಪರ್ಧಿಗಳ ಲಿಸ್ಟ್ ಬಿಟ್ಟಿದ್ದು ಯಾರೆಲ್ಲ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಅಂತ ನೋಡೋಣ ಬನ್ನಿ. ಹೌದು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗೋರ್ಯಾರು ಇಲ್ಲಿದೆ ನೋಡಿ ಸಂಭಾವ್ಯ ಪಟ್ಟಿ ಹೌದು ಬಿಗ್ ಬಾಸ್ ಕನ್ನಡ ಸೀಸನ್ ಹನ್ನೊಂದಕ್ಕೆ ಆರಂಭ ಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಸಾಕಷ್ಟು ಕುತೂಹಲ ಹುಟ್ಟಿಸಿದ್ದ ನಿರೂಪಕ ಯಾರು ಎನ್ನುವ ಪ್ರಶ್ನೆಗೆ ಪ್ರೋಮೂ ಬಿಟ್ಟು ಆಯೋಜಕರು ಸಸ್ಪೆನ್ಸ ಮಾಡಿದ್ದಾರೆ. ಇನ್ನು ಕಳೆದ 10 ಸೀಸನ್ ಗಳನ್ನು ನಿರೂಪಣೆ ಮಾಡುತ್ತ ಬಂದಿರುವ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಬಿಗ್ ಬಾಸ್ ಕಿಂಗ್ ಆಗಲಿದ್ದಾರೆ. ಕಾರ್ಯಕ್ರಮದ ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಜೋರಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿಬರುತ್ತಿದೆ. ನಾನಾ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳು ಈ ಪಟ್ಟಿಯಲ್ಲಿದ್ದಾರೆ. ಯಾರೆಲ್ಲ ಈ ಸಂಭವ ಸ್ಪರ್ಧಿಗಳು ನೋಡೋಣ.

ಮೊದಲಿಗೆ ಹುಲಿ ಕಾರ್ತಿಕ್ ಪ್ರೇಕ್ಷಕರ ಗಮನವನ್ನ ಗೆದ್ದು ಕಾರ್ಯಕ್ರಮ ವಿಜೇತರಾಗಿರುವ ಹುಲಿ ಕಾರ್ತಿಕ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಅವರಿಗೆ ಬಿಗ್ ಬಾಸ್ ಕಡೆಯಿಂದ ಆಫರ್ ಕೂಡ ಬಂದಿದೆ ಅಂತ ಹೇಳಲಾಗ್ತಿದೆ. ಇನ್ನು ಗೌರವ್ ಶೆಟ್ಟಿ, ಅಮೃತಾಂಜನ್ ಸೇರಿದಂತೆ ಹತ್ತಾರು ಶಾರ್ಟ್ ಮೂವೀ ಹಾಗೂ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡು ಯೂಟ್ಯೂಬ್ ನಲ್ಲಿ ಮಿಂಚಿರುವ ಗೌರವ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗ್ತಿದೆ. ಇನ್ನು ಮಾನಸ ಸಂತು ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ಕಾಮಿಡಿಯನ್ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಸಂತು.

ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಿರುವ ಹೆಸರು ತನ್ನ ಹಾಸ್ಯಪ್ರಜ್ಞೆಯಿಂದ ಗಮನ ಸೆಳೆದಿರುವ ಮಾನಸ ಕಿರುತೆರೆ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದು ಗಮನ ಸೆಳೆದಿದ್ದರು. ಈ ಬಾರಿ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ನಟಿ ಪ್ರೇಮ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಮ್ಮೂರ ಮಂದಾರ ಹೂವೆ, ಚಂದ್ರಮುಖಿ, ಪ್ರಾಣಸಖಿ ಉಪೇಂದ್ರ ಅಂತಹ ಸಿನಿಮಾಗಳಲ್ಲಿ ನಟಿಸಿ ತೆಲುಗು ಮಲಯಾಳಂ ನಲ್ಲೂ ಮಿಂಚಿದ ನಟಿ ಪ್ರೇಮ ಇತ್ತೀಚೆಗೆ ವರ್ಷದಲ್ಲಿ ನಟನೆ ಬಿಟ್ಟು ಕಿರುತೆರೆ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಪ್ರೇಮ್ ಅವರನ್ನ ಕರೆತರುವ ಪ್ರಯತ್ನ ನಡೆಯುತ್ತಿದೆ ಅಂತ ಹೇಳಲಾಗ್ತಿದೆ.

ಇನ್ನು ಹರೀಶ್ ನಾಗರಾಜ್ ಪ್ರತಿ ಬಾರಿ ಬಿಗ್ ಬಾಸ್ ಮನೆಗೆ ನಾನಾ ಕ್ಷೇತ್ರದಿಂದ ಸ್ಪರ್ಧಿಗಳು ಬರುತ್ತಾರೆ. ಕಳೆದ ವರ್ಷ ಗೌರೀಶ್ ಪತ್ರಿಕೋದ್ಯಮ ಕ್ಷೇತ್ರದಿಂದ ದೊಡ್ಡ ಮನೆಗೆ ಹೋಗಿದ್ದರು. ಇನ್ನು ಈ ಬಾರಿ ಕನ್ನಡದ ಸುದ್ದಿವಾಹಿನಿಗಳಲ್ಲಿ ಕಳೆದ ಅನೇಕ ವರ್ಷದಿಂದ ನ್ಯೂಸ್ ಆಂಕರ್ ಆಗಿ ಗುರುತಿಸಿಕೊಂಡಿರುವ ಹರೀಶ್ ನಾಗರಾಜ್ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಆಗುತ್ತಾರೆ ಅಂತ ಹೇಳಲಾಗ್ತಿದೆ. ಇನ್ನು ಐಶ್ವರ್ಯಾ ರಂಗರಾಜನ್ ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗಾಯಕಿ ಐಶ್ವರ್ಯ ರಂಗರಾಜನ್ ಬಿಗ್ ಬಾಸ್ ಗೆ ಬರುತ್ತಾರೆ ಅಂತ ಹೇಳಲಾಗ್ತಿದೆ.

ಇನ್ನು ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ನಟಿಯರಾಗಿ ಗುರುತಿಸಿಕೊಂಡಿರುವ ಕರಾವಳಿಯ ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಅಂತ ಹೇಳಲಾಗ್ತಿದೆ. ಇನ್ನು ಅಮೂಲ್ಯ ಭಾರದ್ವಾಜ್ ಕಿರುತೆರೆ ನಟಿಯಾಗಿ ಗುರುತಿಸಿಕೊಂಡು ದಾಸ ಪುರಂದರ ಹಾಗೂ ಬೃಂದಾವನ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾದ ಈ ನಟಿ ಬಿಗ್ ಬಾಸ್ ಗೆ ಬರ್ತಾರೆ ಅಂತ ಹೇಳಲಾಗ್ತಿದೆ .ಇನ್ನು ಭವ್ಯ ಗೌಡ ಟಿಕ್ ಟಾಕ್ ನಲ್ಲಿ ಖ್ಯಾತಿಗಳಿಸಿ ಕಿರುತೆರೆಯ ಗೀತಾ ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದಿರುವ ನಟಿ ಭವ್ಯಾ ಗೌಡ ಅವರ ಹೆಸರು ಕೂಡ ಬಿಗ್ ಬಾಸ್ ಮನೆಯಲ್ಲಿ ನಲ್ಲಿ ಕೇಳಿ ಬರುತ್ತಿದೆ. ಇನ್ನು ದೀಪಕ್ ಗೌಡ ನಮ್ಮನೆ ಯುವರಾಣಿ ಸೀರಿಯಲ್‌ನಲ್ಲಿ ಅನಿಕೇತ್ ಆಗಿ ಖ್ಯಾತಿ ಪಡೆದ ದೀಪಕ್ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಲಿದ್ದಾರೆ ಅಂತ ಹೇಳಲಾಗ್ತಿದೆ.

Leave a Reply

Your email address will not be published. Required fields are marked *