ಹೌದು ರೈತ ಸಾಧನೆ ಮಾಡಬೇಕು ಅಂದುಕೊಂಡರೆ ಏನು ಬೇಕಾದರೂ ಸಾಧನೆ ಮಾಡುತ್ತಾನೆ ಅನ್ನೋದಕ್ಕೆ ಈ ರೈತನೇ ಕಾರಣ, ಇವರು ಏನೆಲ್ಲಾ ಸಾಧನೆ ಮಾಡಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ.
SSLC ಮುಗಿಸಿದ ಹುಡುಗ ಜಗತ್ತೇ ನಿಬ್ಬೆರಗಾಗುವಂತೆ ಸಾಧನೆ ಮಾಡಿದ ಕಥೆ ಇದು.ನಾಲ್ಕು ಜನ ಅಣ್ಣ ತಮ್ಮಂದಿರಲ್ಲಿ ಮೂರು ಜನ ಊರು ಪಕ್ಕದಲ್ಲಿ ಇದ್ದ ಜಮೀನು ಹಂಚಿಕೊಂಡು ಉಳಿದ ಖರಾಬು 25 ಎಕರೆ ಜಮೀನನ್ನು ಇವರ ಪಾಲಿಗೆ ನೀಡಿದರು. ನೀಡಿದರು ಅನ್ನೋದಕ್ಕಿಂತ ಚಾಲೆಂಜ್ ಮಾಡಿ ಇವರೇ ಪಡೆದುಕೊಂಡರು ಅವರ ಹೆಸರೇ ಶ್ರೀ G. N ನಾರಾಯಣಸ್ವಾಮಿ. 40 ವರ್ಷಗಳ ನಿರಂತರ ಶ್ರಮದಿಂದ ಈವರೆಗೆ 126 ಎಕರೆಯಲ್ಲಿ ರೈತ ಮಾಡಬಹುದಾದ ಸಾಹಸಗಳನ್ನೆಲ್ಲ ಮಾಡಿ ಗೆದ್ದಿದ್ದಾರೆ. ಇಲ್ಲಿ ತಿಂಗಳಿಗೆ ಕೋಟ್ಯಾಂತರ ವ್ಯವಹಾರ ನಡೆಯುತ್ತಿದೆ. ತಿಂಗಳಿಗೆ 20 ಲಕ್ಷದವರೆಗೆ ಖರ್ಚೆ ಇದೆ. ಕಾರ್ಪೊರೇಟ್ ಕಂಪನಿ ಮಾದರಿಯಲ್ಲಿ ಕೃಷಿ ಮಾಡಿ ಗೆದ್ದಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಬಂದಾಗ ಮಿಸ್ ಮಾಡದೆ ಭೇಟಿ ನೀಡಿ