ನಮಗೆ ಗೊತ್ತಿರುವ ಹಾಗೆ ನಮ್ಮ ಜಗತ್ತಿನಲ್ಲಿ ಅತಿ ಮುಖ್ಯವಾದ ಶಕ್ತಿ ಎಂದರೆ ಅದು ನಮ್ಮ ಬುದ್ಧಿಶಕ್ತಿ. ಅದು ಬುದ್ಧಿ ಇದ್ರೆ ಪ್ರಪಂಚ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಬಹುದು. ಈಗಾಗಲೇ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳು ಇವೆ. ಹಾಗೂ ಪ್ರಪಂಚವನ್ನು ಆಳಬಹುದು.ಅದೇ ಬುದ್ಧಿಯನ್ನು ಉಪಯೋಗಿಸಿಕೊಂಡ ಭಾರತದ ಹುಡುಗಿ ಇವತ್ತು ಪ್ರಪಂಚ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ ಅಷ್ಟೇ ಯಾಕೆ ಈಕೆಯನ್ನು ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೊಡ್ಡ ದೊಡ್ಡ ಕಂಪನಿಗಳು ಸರದಿ ಸಾಲಿನಲ್ಲಿ ನಿಂತಿವೆ ಅಂದ್ರೆ ನಂಬಲೇಬೇಕು.
ಭಾರತ ಮೂಲದ 27 ವರ್ಷದ ಹುಡುಗಿ ಇಷಾ ಕಾ ಕ್ಯಾಲಿಫೋರ್ನಿಯದಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಈ ಹುಡುಗಿ ಪ್ರಪಂಚ್ ಆಶ್ಚರ್ಯ ಪಡುವಂತ ಕೆಲಸ ಮಾಡಿದ್ದಾಳೆ.ಈಗ ಮೊಬೈಲ್ ನಮ್ಮ ದೇಹದ ಒಂದು ಭಾಗ ಅನ್ನೋ ಹಾಗೆ ಆಗಿದೆ. ಏನಾದ್ರೂ ಬಿಟ್ಟಿರುತ್ತೇವೆ. ಆದರೆ ಮೊಬೈಲ್ ಅನ್ನು ಬಿಟ್ಟಿರಲು ಸಾಧ್ಯವಿಲ್ಲ.ಆದರೆ ಮೊಬೈಲ್ ಚಾರ್ಜ್ ಮಾಡುವಾಗ ಮಾತ್ರ ನಮಗೆ ತುಂಬಾ ಕಿರಿಕಿರಿಯಾಗುತ್ತದೆ. ಅದಕ್ಕೆ ಕಾರಣ ಬ್ಯಾಟರಿ ಫುಲ್ ಚಾರ್ಜ್ ಆಗಬೇಕು ಅಂದ್ರೆ ಏನಿಲ್ಲ ಅಂದ್ರು. ಒಂದರಿಂದ 2 ಗಂಟೆ ಬೇಕು ನಾವು ಯಾವುದೋ ಅರ್ಜೆಂಟ್ ಕೆಲಸಕ್ಕೆ ಹೋಗಬೇಕಾದ ಸಮಯದಲ್ಲಂತೂ ಬ್ಯಾಟರಿ ಬೇಗ ಚಾರ್ಜ್ ಆಗ್ಲಿಲ್ಲ ಅಂದ್ರೆ ನಮ್ಮ ಪ್ರೆಶರ್ ಜಾಸ್ತಿ ಆಗುತ್ತದೆ.
ಇದೇ ಸಮಸ್ಯೆಯನ್ನು ಎದುರಿಸಿದ ಇಶಾ ಕಾ ಚಾರ್ಜ್ ಮಾಡುವ ಕಿರಿಕಿರಿಯಿಂದ ಪಾರಾಗಲು ಒಂದು ಡಿವೈಸ್ ಅನ್ನು ಕಂಡುಹಿಡಿಯಲು ಮುಂದಾದಳು. ಮೊಬೈಲ್ ಚಾರ್ಜ್ ಗೆ ಹಾಕಿದರೆ ಸೆಕೆಂಡ್‌ಗಳಲ್ಲಿ ಚಾರ್ಜ್ ಆಗಿ ಬೇಕು ಅಷ್ಟೇ ಅನ್ನೋದೇ ಇಶಾಳ ಗುರಿಯಾಗಿತ್ತು. ಕೊನೆಗೆ ತನ್ನ ಗುರಿಯ ಬೆನ್ನತ್ತಿ ಹಗಲು ರಾತ್ರಿ ಎನ್ನದೇ ಈ ಕೆಲಸದ ಹಿಂದೆ ಬಿದ್ದ ಇಶಾ ಕೊನೆಗೆ ತಾನು ಅಂದುಕೊಂಡಿದ್ದನ್ನು ಸಾದಿಸಿದ್ದಾಳೆ. ಸೂಪರ್ ಕ್ಯಾಪಸಿಟರ್ ವಸ್ತುವನ್ನು ಕಂಡುಹಿಡಿದಿದ್ದಾಳೆ. ಈ ವಸ್ತುವಿನಿಂದ ಮೂಲಕ ಕೇವಲ 20 ರಿಂದ 30 ಸೆಕೆಂಡ್ ಒಳಗೆ ಮೊಬೈಲ್ ಬ್ಯಾಟರಿ ಚಾರ್ಜ್ ಆಗುತ್ತದೆ.
ಈ ಡಿವೈಸ್ ಗಾತ್ರ ಕೂಡ ಚಿಕ್ಕದಾಗಿದ್ದು ಇದನ್ನು ನೀವು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. ಮೊಬೈಲ್ ಚಾರ್ಜರ್‌ನ್ನು ಕನೆಕ್ಟ್ ಮಾಡಿದರೆ ಸಾಕು 30 ಸೆಕೆಂಡ್‌ಗಳ ಒಳಗೆ ಮೊಬೈಲ್ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ.ಈ ಡಿವೈಸ್ ನಿಂದ 10,000 ಬಾರಿ ಬ್ಯಾಟರಿ ಚಾರ್ಜ್ ಮಾಡಬಹುದು. ಅಷ್ಟೇ ಅಲ್ಲದೆ ತನ್ನ ಡಿವೈಸ್ ನ ಮಹಿಮೆ ಯನ್ನು ತೋರಿಸಿ ಸೈಂಟಿಸ್ಟ್ ಅವಾರ್ಡ್ ಜೊತೆ 30,00,000 ಬಹುಮಾನವನ್ನು ಸಹ ಗೆದ್ದಿದ್ದಾಳೆ. ಈ ಅನ್ವೇಷಣೆಯನ್ನು ನೋಡಿ ಬೆರಗಾಗಿರುವ ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳು ಓದು ಮುಗಿಸಿದ ನಂತರ ತಮ್ಮ ಕಂಪನಿಗೆ ಬರುವಂತೆ ಆಹ್ವಾನ ಕೊಡುತ್ತಾ ಬರುತ್ತಿದೆ.