ಈಗಾಗಲೇ ಅನ್ನ ಭಾಗ್ಯ ಯೋಜನೆ ಪಡೆಯುತ್ತಿದ್ದವರಿಗೆ ಹಣ ಬರುತ್ತಾ ಇರುತ್ತದೆ ರೇಷನ್ ಕಾರ್ಡ್ ಇಲ್ಲದವರಿಗೆ ಅಥವಾ ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಬಯಸುತ್ತಿರುವವರಿಗೆ ಅಥವಾ ರೇಷನ್ ಕಾರ್ಡ್‌ನಿಂದ ಹೆಸರು ತೆಗೆಸುವುದು ಇದ್ದರೆ ಅಥವಾ ಹೆಸರು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡುವ ರೀತಿ ನಿಮಗೆಲ್ಲರಿಗೂ ಕೂಡ ರಾಜ್ಯ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್ ನೀಡಿದೆ ಮತ್ತು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಬಹಳಷ್ಟು ದಿನಗಳಿಂದ ಕಾಯುತ್ತ ಕುಳಿತವರಿಗೆ ಹೊಸ ರೇಷನ್ ಕಾರ್ಡ್ ಗಳನ್ನು ಕೂಡ ನೀಡಲಾಗುತ್ತದೆ.

ಕಳೆದ ಎಂಟು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. 10 ಕೆಜಿ ಅಕ್ಕಿಯನ್ನ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಒದಗಿಸಬೇಕಿತ್ತು ಮತ್ತು ಯಾವಾಗಿನಿಂದ ಆರಂಭ ವಾಗುತ್ತಿದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳಲು ಮಾಹಿತಿಯನ್ನು ಕೊನೆವರೆಗೂ ನೋಡಿ ಮತ್ತು ಬೇಕಾಗುವ ದಾಖಲೆಗಳೇನು? ಎಲ್ಲಿ ಮತ್ತು ಹೇಗೆ ಮಾಡಿಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟಹಾಗೆ ಹೊಸ ಅಪ್ ಡೇಟ್ ಸಿಕ್ಕಿದೆ.

ಆದರೆ ಈಗ ಸದ್ಯಕ್ಕೆ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಐದು ಕೆಜಿ ಅಕ್ಕಿ ಮಾತ್ರ ಪಡೆದುಕೊಳ್ಳಬಹುದಾಗಿದ್ದು, ಇನ್ನು ಐದು ಕೆಜಿ ಅಕ್ಕಿ ಬದಲು ರಾಜ್ಯ ಸರ್ಕಾರ ಹಣವನ್ನ ಜಮಾ ಮಾಡುತ್ತಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳು ಅಂದರೆ ಐದು ಕೆಜಿ ಅಕ್ಕಿಗೆ 170 ರೂಪಾಯಿಗಳನ್ನ ಜಮಾ ಮಾಡಲಾಗುತ್ತಿದೆ. ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೋ ಅಷ್ಟು ಸದಸ್ಯರಿಗೂ ಐದು ಕೆಜಿ ಅಕ್ಕಿ ಹಣ ಜಮಾ ಆಗುತ್ತದೆ. ಹಾಗಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಸಾವಿರಗಟ್ಟಲೆ ಹಣವನ್ನ ಪಡೆದುಕೊಳ್ಳುತ್ತಿರುವವರಿದ್ದಾರೆ ಈ ಕೆಲಸ ಮಾಡುವುದು ಕಡ್ಡಾಯ. ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುವುದರಿಂದ ಇದು ಡಿಜಿಟಲ್ ಪ್ರಕ್ರಿಯೆ ಆಗಿರುತ್ತದೆ.

ಹಾಗಾಗಿ ಸರಿಯಾಗಿ ನಿಮ್ಮ ಬ್ಯಾಂಕ್ ಖಾತೆಗೆ ಅಗತ್ಯ ಇರುವ ಅಪ್‌ಡೇಟ್‌ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಆಧಾರ್ ಸೀಡಿಂಗ್, ಪಿ ಮ್ಯಾಪಿಂಗ್ ಈ ಮೊದಲಾದ ಅಪ್‌ಡೇಟ್‌ಗಳು ಆಗಬೇಕು. ಇಲ್ಲವಾದರೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ. ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎನ್ನುವುದನ್ನ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಡಿಬಿಟಿ, ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ.

Leave a Reply

Your email address will not be published. Required fields are marked *