ಹುಟ್ಟಿನಿಂದಲೇ ಯಾರು ಶ್ರೇಷ್ಠ ಆಗೋದಿಲ್ಲ ಜೀವನದಲ್ಲಿ ಸಿಗುವ ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಳ್ಳಬೇಕು. ಯಾಕೆಂದರೆ ಕೆಲವೊಂದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವಂತದ್ದು. ಸಾಧಿಸುವ ಮುಂಚೆ ಎಲ್ಲ ಕಠಿಣನೇ ಅದೃಷ್ಟ ಕೈಕೊಟ್ಟು ಪ್ರಯತ್ನ ಕೈಗೂಡುವುದಿಲ್ಲ. ಕೆಲವರು ತಮ್ಮ ಪ್ರಯತ್ನ ಶ್ರಮದಿಂದ ಅದನ್ನು ಸಾಧಿಸದೆ ಬಿಡುವುದಿಲ್ಲ. ಸಾಧಿಸುವ ಛಲ ಇದ್ದರೆ ಬಲ ಅನ್ನೋದು ತನಗೆ ಸಿಗುತ್ತೆ. ಬಡತನದಲ್ಲಿ ಮೇಲೆ ಬಂದಂತಹ ಯುವಕನ ಕಥೆ ಇದು. ಇವನ ಹೆಸರು ವರುಣ್ ಅವರದು ಚಿಕ್ಕ ಬಡ ಕುಟುಂಬ ತಂದೆ ತಾಯಿ ತನ್ನ ಮಹಾರಾಷ್ಟ್ರದ ಸಣ್ಣ ಹಳ್ಳಿಯಲ್ಲಿ ವಾಸವಾಗಿದ್ದರು. ವರುಣ್ ತಂದೆ ಸೈಕಲ್‌ಶಾಪ್ ಇಟ್ಟಿದ್ದರು. ಅದರಲ್ಲಿ ಬಂದ ಆದಾಯದಿಂದ ಮಕ್ಕಳನ್ನು ಓದಿಸುತ್ತಿದ್ದರು. ಅವರ ತಂದೆ ಹೃದಯಾಘಾತವಾಗಿ ಮೃತಪಟ್ಟರು. ತಂದೆ ಆಸ್ಪತ್ರೆ ಸೇರಿದ್ದರಿಂದ ಕೂಡಿಟ್ಟ ಹಣ ಹೋಯ್ತು. ಸಾಕಷ್ಟು ಸಾಲ ಆಯ್ತು.
ಈ ಸಂದರ್ಭದಲ್ಲಿ ವರುಣ್ ಮನೆ ಜವಾಬ್ದಾರಿ ವಹಿಸಿಕೊಂಡರು. ವರುಣ್ ಜಿಲ್ಲೆಗೆ ಎರಡನೇ ರ್ಯಾಂಕ್ ಬಂದಿದ್ದರು. ಎಲ್ಲ ಸ್ನೇಹಿತರು ಟೀಚರ್ ಬಂದು ಶುಭಾಶಯ ಕೋರುತ್ತಿದ್ದರು. ಮುಂದೆ ಏನು ಮಾಡಬೇಕು ಅಂತ ಇದ್ಯ ಅಂತ ಎಲ್ಲರೂ ಕೇಳುತ್ತಿದ್ದರು ಚೆನ್ನಾಗಿ ಓದಿ ಡಾಕ್ಟರ್ ಆಗಬೇಕು ಅನ್ನೋ ಆಸೆ ಇತ್ತು. ಆದ್ರೆ ಮನೆ ಪರಿಸ್ಥಿತಿ ಎಲ್ಲ ಕನಸನ್ನು ಕೊಂದು ಹಾಕಿದ್ದು ವರುಣ್‌ಗೆ ಸ್ನೇಹಿತರು ಕೇಳಿದ ಪ್ರಶ್ನೆಗಳಿಗೆ ಏನು ಉತ್ತರ ಹೇಳಬೇಕು ಅಂತಾನೆ ಗೊತ್ತಾಗ್ತಿಲ್ಲ. ನಂತರ ಅವರು ತಾಯಿ ಬಂದು ನೀನು ಓದು ಮುಂದುವರಿಸು. ಈ ಅಂಗಡಿನ ನಾನು ನೋಡ್ಕೋತೀನಿ. ನೀನು ಚೆನ್ನಾಗಿ ಓದು ಮನೆ ಚಿಂತೆ ಬೇಡ ಅಂತ ಮತ್ತೆ ವರುಣ್ ಕಾಲೇಜು ಸೇರಿಕೊಳ್ಳಕ್ಕೆ ಹೋದ.
ಕಾಲೇಜು ಶುಲ್ಕ 10,000. ಇದು ಮೊದಲೇ ಮನೆ ಪರಿಸ್ಥಿತಿ ಹೀಗೆ ಈಗ 10,000 ಎಲ್ಲಿಂದ ತಗೊಂಡು ಇದೆಲ್ಲ ಆಗೋಲ್ಲ ಅಂತ ಮತ್ತೆ ಓದು ಯೋಚನೆ ಕೈಬಿಟ್ಟರು. ಮತ್ತೆ ಅದೇ ಸೈಕಲ್ ಶಾಪ್‌ನಲ್ಲಿ ಮತ್ತೆ ಕೆಲಸ ಶುರು ಮಾಡಿದ್ರು. ಅವರ ತಂದೆಗೆ ಚಿಕಿತ್ಸೆ ಕೊಡುತ್ತಿದ್ದ ಡಾಕ್ಟರ್ ಅದೇ ಅಂಗಡಿ ಮುಂದೆ ಹೋಗುತ್ತಿದ್ದರು. ವರುಣ ನೋಡಿ ಮುಂದೆ ಏನು ಮಾಡ್ತೀಯಾ ಅಂತ ಕೇಳಿದಾಗ ವರುಣ್ ಅವರ ಮುಂದೆ ಎಲ್ಲವನ್ನೂ ಹೇಳಬೇಕಾಗಿತ್ತು. ವರುಣ್ ಕಥೆ ಕೇಳಿದ ಡಾಕ್ಟರ್ ತಕ್ಷಣ ತಮ್ಮ ಜೇಬಿನಿಂದ 10,000 ಕೊಟ್ಟು ಮೊದಲು ಕಾಲೇಜ ಹೋಗು ಅಂತ ಹೇಳಿದ್ರು. ವರುಣ್ ಅಂತೂ ಇಂತೂ ಪಿಯುಸಿ ಪ್ರವೇಶ ಪಡೆದರು. ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಕೂಡ ಸಿಕ್ಕಿತು ಆದ್ರೆ ಅದು ದುಬಾರಿಯಾಗಿದ್ದರಿಂದ ತನ್ನ ಆಸೆ ಕೈಬಿಡಬೇಕಾಯಿತು. ಇಂಜಿನಿಯರ್ ಮಾಡೋಕೆ ಡಿಸೈಡ್ ಆದ್ರು ಪಿತ್ರಾರ್ಜಿತವಾಗಿ ಬಂದಿದ್ದ ಭೂಮಿ ಮಾರಿ ಇಂಜಿನಿಯರ್ಗೆ ಅಡ್ಮಿಷನ್ ಪಡ್ಕೊಂಡ್ರು ಕಾಲಿಟ್ಟಿದ್ದರು. ಇಂಜಿನಿಯರ್ ಫೈನಲ್ ನಲ್ಲಿ ಟಾಪರ್ ಆದರು ಹೀಗೆ ಮುಂದೆ ಜೀವನದಲ್ಲಿ ದೊಡ್ಡ IAS ಆಫೀಸರ್ ಆದರೂ.