WhatsApp Group Join Now

ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಭಕ್ತಾದಿಗಳು ಹೊಂದಿರುವ ದೇವರು. ಹನುಮಂತ ಒಂದು ಸಣ್ಣ ಹಳ್ಳಿಯಾಗಿರಲಿ, ದೊಡ್ಡ ನಗರವಾಗಿರಲಿ, ಹನುಮಂತನ ಗುಡಿ ಇದ್ದೇ ಇರುತ್ತೆ.ಆಂಜನೇಸ್ವಾಮಿ ಹಿಮಾಲಯ ತಪ್ಪಲಲ್ಲಿ ಸಾಕಷ್ಟು ಬಾರಿ ಕಂಡು ಬಂದಿರುವ ವಿಚಾರ. ಹಾಗಾಗಿ ಕೇಳಿಬರುತ್ತಿರುತ್ತೆ. ಭಾರತದೇಶದಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಮತ ಅತಿ ಹೆಚ್ಚು ಆಂಜನೇಸ್ವಾಮಿ ದೇವಸ್ಥಾನವನ್ನು ನಾವು ನೋಡಬಹುದು.ಬಹಳ ವಿಶೇಷ ಮತ್ತು ಪವಾಡ ಅಂಜನೇಯ ಸ್ವಾಮಿ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿದೆ. ಸ್ನೇಹಿತರೆ ಈ ದೇವಸ್ಥಾನ ಎಷ್ಟು ಶಕ್ತಿಶಾಲಿ ಎಂದರೆ ಈ ದೇವಸ್ಥಾನದ ಸಕ್ಸೆಸ್ ರೇಟ್ ನೂರಕ್ಕೆ 100 ಇದೆ.

ಕೆಲವೇ ಗಂಟೆಗಳಲ್ಲಿ ಕಷ್ಟಗಳು ಪರಿಹಾರವಾಗ ಇರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಕಂಡು ಬರುತ್ತೆ.ಈ ವಿಶೇಷವಾದ ಹನುಮಂತನ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿ ಕಟ್ಟಿದರೆ ಸಾಕು ಎಂಥದ್ದೇ ಕಷ್ಟ ಇದ್ದರೂ ಪರಿಹಾರವಾಗುತ್ತೆ. ಈ ದೇವಸ್ಥಾನಕ್ಕೆ ಬಂದು ಬೇಡಿಕೊಂಡು ಹೋದಮೇಲೆ ಕಷ್ಟ ಪರಿಹಾರ ಆಗದೆ ಇರುವ ಭಕ್ತರು ಯಾರೂ ಇಲ್ಲ ಎಂದು ಕೂಡ ಹೇಳಲಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಪ್ರಸಿದ್ಧ ಗಿರಿನಗರಕ್ಕೆ ಹೋಗಬೇಕು. ಗಿರಿನಗರದ ಮೂರನೇ ಅಡ್ಡ ರಸ್ತೆಯಲ್ಲಿ ಸಾಗಿದರೆ ಕಾರ್ಯ ಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನ ಕಂಡುಬರುತ್ತೆ.

ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ವಿಶೇಷವಾದಕ್ಕೆ ಅನ್ನುತ್ತಾರೆ. ಕೇವಲ 48 ದಿನಗಳಲ್ಲಿ ನಿಮ್ಮ ಇಚ್ಛೆಗಳು ನೆರವೇರುತ್ತೆ ಅಥವಾ ಕೆಲವೇ ಗಂಟೆಗಳಲ್ಲಿ ಕೂಡ ನೆರವೇರುವ ಸಾಧ್ಯತೆ ಇರುತ್ತೆ.ಕರ್ನಾಟಕದ ಪ್ರಸಿದ್ಧ ಆಂಜನೇಸ್ವಾಮಿ ದೇವಸ್ಥಾನ ಗಳ ಪಟ್ಟಿಯಲ್ಲಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಮೊದಲ ಸ್ಥಾನದಲ್ಲಿದೆ. ಭಾರತ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು ಕೂಡ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತು ಹೋಗಿದ್ದಾರೆ.ಕಾರ್ಯಸಿದ್ಧಿ ಅಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಈ ಎರಡು ವಿಚಾರ ತುಂಬ ಆಶ್ಚರ್ಯ ಉಂಟು ಮಾಡುತ್ತದೆ. ಈ ರೀತಿಯ ಒಂದು ದೃಶ್ಯವಾಳಿ ಭಾರತ ದೇಶದಲ್ಲಿ ಮತ್ತೆ ಯಾವ ದೇವಸ್ಥಾನದಲ್ಲೂ ನೋಡಲು ಸಾಧ್ಯವಿಲ್ಲ.

ದೇವಸ್ಥಾನದ ವಾತಾವರಣ ನೋಡುತ್ತಿದ್ದರೆ ದೇವಸ್ಥಾನ ಬಿಟ್ಟು ಹೋಗಲು ಮನಸ್ಸೇ ಬರುವುದಿಲ್ಲ. ಅಷ್ಟು ಪ್ರಶಾಂತವಾಗಿರುತ್ತೆ.ದೇವಸ್ಥಾನದಲ್ಲಿ ಸಾವಿರಾರು ಸಿಪ್ಪೆಯನ್ನು ಬಿಡಿಸಿದ ತೆಂಗಿನಕಾಯಿಗಳನ್ನು ಕಟ್ಟಿರುವ ದೃಶ್ಯವನ್ನು ನೋಡಬಹುದು. ಅಷ್ಟೇ ಅಲ್ಲದೆ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ಸತತವಾಗಿ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಕೂಡ ಕಂಡು ಬರುತ್ತದೆ.ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ನಮಸ್ಕಾರ ಮಾಡುತ್ತಿರುವ ರೂಪದಲ್ಲಿ ಕಂಡು ಬರುತ್ತಾರೆ.

ದೇವಸ್ಥಾನದಲ್ಲಿ ತೆಂಗಿನಕಾಯಿ ಕೌಂಟರ್ ನಲ್ಲಿ ಸಿಪ್ಪೆ ಸಹಿತ ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಕು. ಈ ತೆಂಗಿನ ಕಾಯಿಯ ಮೇಲೆ ಸಂಖ್ಯೆ, ಹೆಸರು, ದಿನಾಂಕವನ್ನು ಬರೆದು ಭಕ್ತರಿಗೆ ಕೊಡುತ್ತಾರೆ. ಈ ತೆಂಗಿನಕಾಯಿಯನ್ನು ತೆಗೆದುಕೊಂಡು ಮನಸ್ಸಿನಲ್ಲಿ ಬೇಡಿಕೊಂಡು ಈ ತೆಂಗಿನಕಾಯಿಯನ್ನು ನಿಮ್ಮ ಕೈಯಾರೆ ಕಟ್ಟಬೇಕು.

https://youtu.be/MBvfOuaJeTE

WhatsApp Group Join Now

Leave a Reply

Your email address will not be published. Required fields are marked *