ವೀಕ್ಷಕರೆ ಯಶಸ್ಸು ಎಂಬುದು ಎಲ್ಲರಿಗೂ ಸಿಗುವುದಿಲ್ಲ. ಅದಕ್ಕೆ ಕಷ್ಟ ಪಟ್ಟರೆ ಮಾತ್ರ ಸಿಗುತ್ತದೆ ಹಾಗೆಯೇ ನಾವು ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ ಕೆಲವೊಂದಿಷ್ಟು ಜನ ಬಹಳಷ್ಟು ಕಷ್ಟಪಟ್ಟು ಮೇಲೆ ಬಂದು ತಮ್ಮ ಹೆಸರನ್ನು ಹೇಗೆ ಭಾರತದ ತುಂಬಾ ಅವರ ಹೆಸರು ನೆನಪಿಟ್ಟುಕೊಳ್ಳುವ ಹಾಗೆ ಮಾಡಿದ್ದಾರೆ ಎಂಬುದನ್ನು ನಮಗೆ ಗೊತ್ತೇ ಇದೆ ಹಾಗೆ ಇನ್ನು ಇವತ್ತಿನ ಮಾಹಿತಿ ಕೂಡ ಯಶಸ್ಸಿನ ಬಗ್ಗೆ ಆಗಿದೆ. ಜಿಲ್ಲೆಯ ಗಂಗೂರ ಗ್ರಾಮದ ಬಡ ಯುವತಿ ಈಗ ನ್ಯಾಯಾಧೀಶೆ ಆಗಿದ್ದಾರೆ.
ಹೌದು ವೀಕ್ಷಕರೇ ಈ ಹುಡುಗಿ ಬಹಳಷ್ಟು ಬಡು ಕುಟುಂಬದಿಂದ ಬಂದವಳು ಯಾವುದೇ ಕಷ್ಟ ಎದುರಾದರೂ ಕೂಡ ಎಲ್ಲವನ್ನು ಸಲೀಸಾಗಿ ಸೈಡಿಗೆ ತಳ್ಳಿ ಯಶಸ್ಸಿನ ಹಾದಿಯನ್ನು ಹಿಡಿದು ಇಂದು ಇಡೀ ಊರು ತುಂಬಾ ಹೆಸರುವಾಸಿ ಆಗಿದ್ದಾರೆ ಇನ್ನು ಕೆಲವರು ಎಲ್ಲಾ ಸೌಕರ್ಯಗಳು ಇದ್ದರೂ ಕೂಡ ಓದುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ . ಆದರೆ ಇಂತಹ ವ್ಯಕ್ತಿಗಳು ಮೇಲಕ್ಕೆ ಬಂದರೆ ಕೇವಲ ಇವರಿಗೆ ಅಲ್ಲ ಇವರ ಸುತ್ತಮುತ್ತಲು ಇರುವಂತಹ ಎಲ್ಲಾ ಪ್ರತಿ ಯುವಕ ಯುವತಿಯರಿಗೂ ಕೂಡ ಒಂದು ಮಾರ್ಗದರ್ಶನವಾಗಿ ಪರಿವರ್ತನೆ ಆಗುತ್ತಾರೆ ಭಾಗ್ಯಶ್ರೀ ಮಾದರ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿ, ಜಿಲ್ಲೆಗೆ ಬಡ ಕುಟುಂಬದ ಯುವತಿ ಭಾಗ್ಯಶ್ರೀ ಕೀರ್ತಿ ತಂದಿದ್ದಾರೆ.
ಇತ್ತೀಚಿಗೆ ನಡೆದಂತಹ 2023ರಲ್ಲಿ ನ್ಯಾಯಾಧೀಶ ಮೌಖಿಕ ಪರೀಕ್ಷೆಗೆ ಹಾಜರಾಗಿದ್ದರು ನಂತರ ಈ ಪರೀಕ್ಷೆಯನ್ನು ಪಾಸಾಗಿ 2024ರಲ್ಲಿ ನಡೆದಂತಹ ಸಂದರ್ಶನವನ್ನು ಪಾರು ಮಾಡಿ ಈಗ ನ್ಯಾಯಾಧೀಶ ಆಗಿದ್ದಾರೆ. ತಂದೆ ದುರಗಪ್ಪ, ತಾಯಿ ಯಮನವ್ವ ದಂಪತಿಯ ಏಳು ಜನ ಮಕ್ಕಳ ಪೈಕಿ 5ನೇ ಯವರು ಭಾಗ್ಯಶ್ರೀ. ಭಾಗ್ಯಶ್ರೀ ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರಾಗಿದ್ದು ಆದರೂ ಕೂಡ ತಮ್ಮ ಮಕ್ಕಳಿಗೆ ಯಾವುದೇ ಒಂದು ಕೊರತೆ ಬರದ ಹಾಗೆ ನೋಡಿಕೊಂಡಿದ್ದಾರೆ ಈ ದಂಪತಿಗಳು ಕೂಲಿ ಮಾಡಿ ಮಗಳನ್ನು ಓದಿಸಿದ್ದರು. ಅದೇ ಪ್ರಯತ್ನಕ್ಕೆ ಇಂದು ಅವರಿಗೆ ತಕ್ಕ ಹಾಗೆ ಪ್ರತಿಫಲ ಸಿಕ್ಕಿದೆ.2018ರಲ್ಲಿ ಕಾನೂನು ಪದವಿ ಪಡೆದ ಭಾಗ್ಯಶ್ರೀ, ಹುನಗುಂದ ಕೋರ್ಟ್ ನಲ್ಲಿ 2018-20ರವರೆಗೆ ಎರಡು ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ್ದರು.
ಓದುವ ಸಂದರ್ಭದಲ್ಲಿ ಈ ಮೇಲ್ದರ್ಜೆ ಹುದ್ದೆಯ ಬಗ್ಗೆ ತಿಳಿದುಕೊಂಡು ಪರೀಕ್ಷೆಗೆ ತಯಾರು ಆಗಿ ಪರೀಕ್ಷೆಯನ್ನು ನೀಡಿದ್ದಾರೆ.2021 22ರ ವರೆಗೆ ಹೈಕೋರ್ಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಲಾಕ್ಲರ್ಕ್, ಕಂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು.ಕೆಲಸದೊಂದಿಗೆ ನ್ಯಾಯಧೀಶೆ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿ, ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ತಮ್ಮ ಗುರಿಯನ್ನು ಮುಟ್ಟೋತನಕ ಇವರು ಎಂದು ನಿಲ್ಲಲಿಲ್ಲ. ಆಗ ಪಟ್ಟಂತಹ ಕಷ್ಟ ಇವತ್ತಿನ ದಿನಗಳಲ್ಲಿ ಅವರಿಗೆ ತಕ್ಕ ಹಾಗೆ ಪ್ರತಿಫಲ ನೀಡಿದೆ.ಈಗ ನ್ಯಾಯದೀಶೆಯಾಗಿ ಆಯ್ಕೆಯಾಗಿ ಎಲ್ಲಾರಿಗೂ ಮಾದರಿಯಾಗಿದ್ದಾರೆ.