WhatsApp Group Join Now

ಸ್ಯಾಂಡಲ್ ವುಡ್ ನಲ್ಲಿ ಬಾರಿ ಸಂಭ್ರಮದ ಸುದ್ದಿಗಳು ಸಾಕಷ್ಟಿವೆ. ಒಂದೆಡೆ ತರುಣ್, ಸುಧೀರ್ ಮತ್ತು ಸೋನಾಲ್ ರಿಗೆ ಮದುವೆ ಸಂಭ್ರಮ. ಇದೇ ಆಗಸ್ಟ್ 10 ರಂದು ಇವರಿಬ್ಬರ ಕಲ್ಯಾಣವಾಗಲಿದೆ. ಇನ್ನೊಂದೆಡೆ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿಯಾಗಿದ್ದಾರೆ. ಮನೆಗೆ ಮಗುವನ್ನು ಸ್ವಾಗತಿಸುವ ಖುಷಿಯಲ್ಲಿ ಮತ್ತು ಅಜ್ಜಿ ಆಗುವ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಇದ್ದಾರೆ. ಸ್ಯಾಂಡಲ್ ವುಡ್ ಗೆ ಖುಷಿ ಕೊಡುವಂತ ಈ ತಿಂಗಳು ಹಲವು ಪ್ರಮುಖ ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಾಗೆ ಈ ವರ್ಷ ಮುಖ್ಯ ಪ್ರಮುಖವಾದಂತಹ ನಟರಿಂದ ಒಳ್ಳೆಯ ಸಿನಿಮಾಗಳು ತೆರೆ ಮೇಲೆ ಬರಲಿವೆ. ಆದರೆ ಈಗಿನ ವಿಚಾರದಲ್ಲಿ ಅವಿವಾ ಬಿದ್ದಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲು ರೆಬಲ್ ಸ್ಟಾರ್ ಕುಟುಂಬ ಕಾತರಗೊಂಡಿದ್ದಾರೆ.

ಇದೇ ವಾರ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನಡೆಸಲಿದ್ದಾರೆ ಅಂತ ವರದಿಗಳು ತಿಳಿಸಿವೆ. ಈ ಕುರಿತು ಅಭಿಷೇಕ್ ಅಂಬರೀಶ್ ಕುಟುಂಬದ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಅಭಿಷೇಕ್ ಸದ್ಯ ಊರಲ್ಲಿಲ್ಲ. ಕಿಕ್‌ಬಾಕ್ಸಿಂಗ್ ಕಲಿಯಲು ಬೇರೆ ದೇಶಕ್ಕೆ ಹೋಗಿದ್ದರಂತೆ. ನಾಳೆ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾರೆ. ಈ ವಾರ ಸೀಮಂತ ಕಾರ್ಯಕ್ರಮ ನಡೆಯಲಿದೆ ಅಂತ ವರದಿಗಳು ತಿಳಿಸಿವೆ.ಇದೆ ಜೂನ್ ತಿಂಗಳಲ್ಲಿ ಕನ್ನಡದ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಮಗ ಅಭಿಷೇಕ್ ಮತ್ತು ಸೊಸೆವಾಗಿ ಸುಮಲತಾ, ಅಂಬರೀಶ್ ಪ್ರೀತಿಯ ಶುಭಾಶಯ ತಿಳಿಸಿದ್ರು. ನನ್ನ ಪ್ರೀತಿಯ ಮಗ ಹಾಗೂ ಸೊಸೆಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನಿಮ್ಮ ಪ್ರೀತಿ ಇನ್ನಷ್ಟು ಉತ್ತಮವಾಗಲಿ, ಇನ್ನಷ್ಟು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ. ನಿಮಗೆ ಪ್ರೀತಿಯ ಅಪ್ಪುಗೆ ಮತ್ತು ಆಶೀರ್ವಾದ್ ತಿಳಿಸಿದರು.

ಇದೀಗ ಎರಡು ತಿಂಗಳಲ್ಲಿ ಅಭಿಷೇಕ್ ಮನೆಯಲ್ಲಿ ಸೀಮಂತ ಸಂಭ್ರಮದ ಕಳೆ ತುಂಬಿದೆ.ಕನ್ನಡ ನಟ ಅಭಿಷೇಕ್ ಅಂಬರೀಶ್ ಮತ್ತು ಯುವ ಬಿದ್ದಪ್ಪ ಅವರು ಜೂನ್ 5, 2023 ಶುಭ ವಿವಾಹವಾಗಿದ್ದರು. ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ವಿವಾಹವು ಜೂನ್ 5, 2023 ರಂದು ಬೆಂಗಳೂರಿನಲ್ಲಿ ನಡೆಯಿತು. ಇದರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್, ಮೋಹನ್ ಬಾಬು, ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಸೇರಿದಂತೆ ಚಿತ್ರರಂಗದ ಯಾರೆಲ್ಲಾ ಭಾಗವಹಿಸಿದ್ದರು . ಭಾರತದ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅದ್ದೂರಿ ವಿವಾಹದಲ್ಲಿ ಭಾಗವಹಿಸಿದ ಗಣ್ಯರಲ್ಲಿ ಒಬ್ಬರು. ಅಭಿಷೇಕ್ ಅಂಬರೀಶ್ ಅಮ‌ರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

WhatsApp Group Join Now

Leave a Reply

Your email address will not be published. Required fields are marked *