ನಮಸ್ಕಾರ ಜೀವನದಲ್ಲಿ ಎಲ್ಲರಿಗೂ ಸುಲಭವಾಗಿ ದಕ್ಕುವುದಿಲ್ಲ. ಕೆಲವರಿಗೆ ಓದಿಸುವ ಸಾಧಿಸುವ ಹಠ ಛಲ ಇರುತ್ತದೆ. ಆದರೆ ಅವರಿಗೆ ಓದುವುದಕ್ಕೆ ಅನುಕೂಲ ಮಾತ್ರ ಇರುವುದಿಲ್ಲ. ಸಹಾಯ ಮಾಡುವವರು ಯಾವತ್ತೂ ಕೂಡ ಇರುವುದಿಲ್ಲ ಹಾಗಂತ ಇವೆಲ್ಲ ಇಲ್ಲದೆ ಹೋದರೆ ಏನು ಕೂಡ ಮಾಡುವುದಕ್ಕೆ ಆಗಲ್ಲ ಅಂತ ಅಂದುಕೊಂಡಿದ್ದೀರಾ. ಖಂಡಿತ ಇಲ್ಲ ಇದಕ್ಕೆಲ್ಲ ಸಡ್ಡು ಹೊಡೆದು ನಾನು ಅಂದುಕೊಂಡ ಗುರಿಯನ್ನು ತಲುಪಿ ಇವರು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಆ ಸಾಧಕಿ ಹೆಸರು ಅರುಣ ಅರುಣ ಅವರಿಗೆ ತನು ಐಎಎಸ್ ಆಗಬೇಕು ಅಂತ ಬಾಲ್ಯದಿಂದಲೇ ಏನು ಕನಸು ಇರಲಿಲ್ಲ. ತನ್ನ ತಂದೆ ಸಾಲದ ಹೊರೆ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡ ನಂತರ ಅವರಿಗೆ ತಾನೊಬ್ಬ ಐಎಎಸ್ ಅಧಿಕಾರಿಯಾಗಬೇಕು ಅಂತ ಛಲ ಬರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.
ರೈತ ದೇಶದ ಬೆನ್ನೆಲುಬು ಅಂತಾರೆ ಆದರೆ ಅವನ ಕಷ್ಟ ಸಂದರ್ಭದಲ್ಲಿ ಅವರಿಗೆ ಬೆನ್ನೆಲುಬು ಆಗಿ ಯಾರು ಕೂಡ ನಿಂತಿ ಕೊಳ್ಳುವುದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ನೋಡಿ ತನ್ನ ತಂದೆಗೆ ಬಂದಂತಹ ದುಸ್ಥಿತಿ ಯಾರಿಗೂ ಸಹ ಬರಬಾರದು ಅಂತ ಆಲೋಚನೆ ಮಾಡಿ ತಾನೊಬ್ಬ ಐಎಎಸ್ ಅಧಿಕಾರಿ ಆಗಿ ಬಡವರಿಗೆ ಸಹಾಯವಾಗ ನಿಂತುಕೊಳ್ಳಬೇಕು ಅಂತ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧರಾಗುತ್ತಾರೆ ಅರುಣ್ ಅವರು. ಅರುಣ ಅವರಿಗೆ ತಂದೆಯ ಅಗಲಿಕೆಯ ನಂತರ ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸುವ ಅಂತಹ ಪರಿಸ್ಥಿತಿ ಎದುರಾಗುತ್ತದೆ. ಮನೆಯಲ್ಲಿ ಕಡುಬಡತನ ಇದ್ದ ಕಾರಣ ಇವರ ಪೋಷಕರು ಅರುಣ ಅವರನ್ನು ಅಜ್ಜಿಯ ಮನೆಯಲ್ಲಿ ಇರುವಂತೆ ಹೇಳುತ್ತಾರೆ.
ಅದರಂತೆ ಗುಡಿಸಿನಲ್ಲಿ ಅಜ್ಜಿಯ ಜೊತೆ ಬೆಳೆದ ಅರುಣ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿ ಬಿಡುತ್ತಾರೆ. ಇವರನ್ನು ಕಂಡ ಪ್ರೇಕ್ಷಕರು ತುಂಬಾ ಹೆಮ್ಮೆಯಿಂದ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇಡುತ್ತಾರೆ. ಇದಾದ ಬಳಿಕ ಉನ್ನತ ಪದವಿಯ ಹತ್ತಿರ ಗಮನವನ್ನು ಹರಿಸುತ್ತಾರೆ ಅರುಣಾ. ಅಧ್ಯಾಯದ ಜೊತೆ ಒಳ್ಳೆ ಮಾರ್ಗದರ್ಶಕರು ಕೂಡ ದೊರಕುತ್ತಾರೆ. ಅರುಣ ಅವರಿಗೆ ಐಎಎಸ್ ಪರೀಕ್ಷೆ ಬರೆಯಲು ಆರ್ಥಿಕ ಸಮಸ್ಯಜೊತೆಗೆ ಅನಾರೋಗ್ಯದ ಸಮಸ್ಯೆಯು ಬೆಂಬಿಡದೆ ಕಾಡುತ್ತದೆ. ಕೊನೆಗೂ ತಮ್ಮ ಛಲ ಬಿಡದೆ ಗುರಿಯನ್ನು ಮುಟ್ಟುತ್ತಾರೆ. ಮಳೆ ಬಂದರೆ ಸೋರುತ್ತಿದ್ದ ಮನೆಯಲ್ಲಿ ಬೆಳೆದ ಅರುಣ ಅವರು ಈಗ ಯುಪಿಎಸ್ ಸಿ ಪರೀಕ್ಷೆಯಲ್ಲಿ 308 ನೇ ರಾಂಕ್ ಪಡೆದು, ಐಎಎಸ್ ಎಂಬ ಹುದ್ದೆಗೆ ಸೇರುತ್ತಾರೆ ಅವರು ಹೇಳಿದ ಪ್ರಕಾರ ಸಾಧಿಸಬೇಕು ಎಂಬುವ ಚಲವಿದ್ದರೆ ಯಾರ ಆರ್ಥಿಕ ಸಹಾಯವಿಲ್ಲದೆ ಗುರಿಯನ್ನು ತಲುಪಬಹುದು ಎಂದು ಹೇಳಿದ್ದಾರೆ.