ಹೊಸದಾಗಿ ಅಶ್ವಮೇಧ ಎಂಬ ಬ್ರಾಂಡ್ ನ ಬಸ್ ಗಳು ಸೇರ್ಪಡೆಯಾಗಲಿವೆ. ಈ ಬಸ್ಗಳು ಸದ್ಯದ ಕೆಂಪು ಬಸ್ಗಳ ಮುಂದುವರೆದ ಭಾಗಗಳಾಗಿವೆ. ಇನ್ನು ಇವುಗಳ ವಿಶೇಷತೆ ಏನು? ಯಾವೆಲ್ಲ ಊರಿಗೆ ಸಂಚಾರ ಮಾಡುತ್ತೆ ನೋಡೋಣ ಬನ್ನಿ. ಕೆಎಸ್ ಆರ್ ಟಿಸಿ ಅಶ್ವಮೇಧಕ್ಕೆ ಚಾಲನೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ಆರ್ಟಿಸಿ ಸಾರಿಗೆ ಸೇವೆಯಲ್ಲಿ ಕಳೆದ ಕೆಲವು ವರ್ಷಗಳಿಂದ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವ ಹೆಮ್ಮೆಯ ಕೆಎಸ್ಐಸಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ಬಸ್ಗಳನ್ನ ಪರಿಚಯ ಮಾಡುವ ಮೂಲಕ ಪ್ರಯಾಣಿಕರ ನೆಚ್ಚಿನ ಹಾಗು ನಂಬಿಕೆಯ ಸಾರಿಗೆ ಸಂಸ್ಥೆಯಾಗಿ ಬೆಳೆದಿದೆ. ಕರ್ನಾಟಕ ಸಾರಿಗೆ ನಿಗಮ ಖರೀದಿಸಿರುವ ಹೊಸ ವಿನ್ಯಾಸದ 100 ಬಸ್ಗಳು ಸೋಮವಾರ ವಿಧಾನಸೌಧದ ಮುಂಭಾಗದಲ್ಲಿ ಲೋಕಾರ್ಪಣೆಯಾಗಲಿದೆ. ಪಾಯಿಂಟ್ ಎಕ್ಸ್ಪ್ರೆಸ್ ಮಾದರಿಯ ನೂತನ ಕರ್ನಾಟಕ ಸಾರಿಗೆ ವಾಹನಗಳನ್ನ ಹೊಸ ವಿನ್ಯಾಸ ಹಾಗೂ ಹೊಸ ಬ್ರಾಂಡ್ ಅಶ್ವಮೇಧ ಪ್ರಯಾಣದ ಮರುಕಲ್ಪನೆ ಎಂಬ ಟ್ಯಾಗ್ ಲೈನ್ ನೊಂದಿಗೆ ಪರಿಚಯಿಸಲಾಗುತ್ತಿದೆ.
ಇವು ಎಲ್ಲ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿವೆ. ಎಕ್ಸ್ಪ್ರೆಸ್ ಅಶ್ವಮೇಧ ಬಸ್ಗಳು 3.42 ಮೀಟರ್ ಎತ್ತರವಿದೆ. ಈ ಬಸ್ನಲ್ಲಿ 52 ಆಸನಗಳಿದ್ದು, ಬಕೆಟ್ ವಿನ್ಯಾಸವನ್ನ ಹೊಂದಿದೆ. ಪ್ರಯಾಣದ ಮರುಕಲ್ಪನೆ ಎಂಬ ವಾಕ್ಯದೊಂದಿಗೆ ಈ ಬಸ್ ಗಳನ್ನ ಪರಿಚಯಿಸಲಾಗುತ್ತಿದೆ. ಈ ಬಸ್ಗಳ ಮುಂದಿನ ಮತ್ತು ಹಿಂದಿನ ಗಾಜುಗಳು ವಿಶಾಲವಾಗಿವೆ. ಇನ್ನು ಕಿಟಕಿ ಪ್ರೇಮ್ ಹಾಗು ಗಾಜು ದೊಡ್ಡದಾಗಿದ್ದು, ಟಿಂಟೆಡ್ ಗಾಜುಗಳನ್ನ ಹೊಂದಿದೆ ಹಾಗು ಈ ಬಸ್ನಲ್ಲಿ ಸ್ಥಳ ಪ್ಯಾನಿಕ್ ಬಟನ್ ಇರಲಿದೆ.
ನ್ನು ಒಳಾಂಗಣದಲ್ಲಿ ನಿರಂತರವಾಗಿ ಉರಿಯುವ ಎಲ್ಇಡಿ ದೀಪಗಳಿವೆ.ಲಗೇಜ್ ಕ್ಯಾರಿಯರ್ ಗಳನ್ನ ವಿನೂತನವಾಗಿ ವಿನ್ಯಾಸ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಸ್ಗಳು ಎಲ್ಲ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಪೂರ್ವ ದ್ವಾರದ ಮುಂಭಾಗ ಸೋಮವಾರ 100 ಅಶ್ವಮೇಧ ಬಸ್ಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನು ಅಂಬಾರಿ ಉತ್ಸವ, ಬಸ್ ಪಲ್ಲಕ್ಕಿ ಉತ್ಸವಗಳನ್ನು ಇತ್ತೀಚೆಗೆ ಪರಿಚಯಿಸಲಾಗಿದ್ದು, ಇದೀಗ ಕೆಎಸ್ಆರ್ಟಿಸಿಯ ನೂತನ ವಿನ್ಯಾಸ ಪಾಯಿಂಟ್ ಪಾಯಿಂಟ್ ಎಕ್ಸ್ಪ್ರೆಸ್ ಅಶ್ವಮೇಧ ಬಸ್ ಗಳನ್ನ ರಸ್ತೆಗಿಳಿಸಲು ಕರ್ನಾಟಕ ಸಾರಿಗೆ ಇಲಾಖೆ ಮುಂದಾಗಿದೆ.
ಇನ್ನು ಕೊನೆಯದಾಗಿ ಹುಟ್ಟುವ ಪ್ರಶ್ನೆವೇನೆಂದರೆ ಈ ಬಸ್ಸಿನಲ್ಲೂ ಕೂಡ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ಸರ್ಕಾರ ಅನುಮತಿ ಕೊಡುತ್ತಾ ಎಂಬುದು ಬಹಳಷ್ಟು ಜನರಲ್ಲಿ ಮೂಡುತ್ತಿದೆ ಅದಕ್ಕೆ ಉತ್ತರ ಹೌದು. ಮಹಿಳೆಯರು ಈ ವಾಹನದಲ್ಲಿ ಉಚಿತವಾಗಿ ಇಡೀ ಕರ್ನಾಟಕ ರಾಜ್ಯದಂತಪ್ರಯಾಣ ಮಾಡಬಹುದು ಎಂದು ಸರ್ಕಾರ ಹೇಳಿದೆ ಹಾಗಾಗಿ ಯಾವುದೇ ಕಾರಣಕ್ಕೂ ನೀವು ಭಯ ಪಡುವ ಅಗತ್ಯವಿಲ್ಲ.