ನೀವು ಡೇಟಿಂಗ್ ಮಾಡುತ್ತಿದ್ದೀರಾ? ನಿಮ್ಮ ಡೇಟಿಂಗ್ ಗೆ ಸಹಾಯವಾಗುವಂತಹ ಕೆಲವೊಂದು ಟಿಪ್ಸ್ ಗಳನ್ನು ಕೊಡುತ್ತಿದ್ದೇವೆ.. ಸಂಪೂರ್ಣವಾಗಿ ಲೇಖನವನ್ನ ಓದಿ. ಸ್ನೇಹಿತರೆ ನೀವು ಡೇಟಿಂಗ್ ಅನ್ನು ಮಾಡುತ್ತಿದ್ದರೆ ನಿಮಗೆ ಇಲ್ಲಿ ಕೆಲವು ರೀತಿಯ ಸಲಹೆಗಳನ್ನ ಹಾಗೂ ತಿಳುವಳಿಕೆಗಳನ್ನ ನೀಡುತ್ತಿದ್ದೇವೆ. ನಿಮ್ಮ ಡೇಟಿಂಗ್ ರೋಮ್ಯಾಂಟಿಕ್ ಆಗಿ ಇರಬೇಕೆಂದರೆ ಈ ಸಲಹೆಗಳನ್ನು ಪಾಲಿಸಿ.
ಯಾವಾಗಲೂ ನೀವು ಡೇಟಿಂಗ್ ನ ಆರಂಭದ ದಿನಗಳಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಬಾರದು. ನೀವು ನಿಮ್ಮಲ್ಲಿಯೇ ಊಹೆಗಳನ್ನ ಮಾಡುವುದು ಯಾವುದೇ ರೀತಿಯ ಕಲ್ಪನೆಯನ್ನು ಮಾಡಿಕೊಳ್ಳುವುದು ಯೋಚನೆಯನ್ನು ಮಾಡಬಹುದು ಇದೆಲ್ಲ ತಪ್ಪಾಗಿರುತ್ತವೆ. ಯಾಕೆಂದರೆ ನಿಮ್ಮ ಸಂಗಾತಿಯು ನಿಮ್ಮಿಂದ ಬೇರೆನೆ ಬಯಸುತ್ತಿರುತ್ತಾರೆ ಆದ್ದರಿಂದ ನೀವು ಈ ರೀತಿಯ ಯೋಚನೆಗಳನ್ನು ಎಲ್ಲಾ ಕೆಲವು ಮಾತುಗಳನ್ನ ಭವಿಷ್ಯದ ಬಗ್ಗೆ ಇವೆಲ್ಲವೂ ಕೂಡ ನಿಮ್ಮ ಸಂಗಾತಿಗೆ ಬೋರ್ ತರಿಸಬಹುದು.
ನೀವು ಡೇಟಿಂಗ್ ಅನ್ನು ಆರಂಭ ಮಾಡುವಾಗ ನೀವು ಇವತ್ತಿನ ದಿನದಂದು ಮಾತ್ರ ಎಷ್ಟು ಬೇಕೋ ಅಷ್ಟನ್ನೇ ಯೋಚಿಸಬೇಕು ಜಾಸ್ತಿ ಯೋಚನೆ ಮಾಡಬಾರದು ಇಂದಿನ ಕ್ಷಣದಲ್ಲಿ ಸಂತೋಷವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮತ್ತೊಂದು ಪ್ರಮುಖವಾದ ವಿಷಯ ಅಂತಂದ್ರೆ ಮೊದಲು ನೀವು ನಿಮ್ಮ ಸಂಗಾತಿಗೆ ಭಾವನಾತ್ಮಕವಾಗಿ ಹತ್ತಿರವಾಗಬೇಕೆವಿನ ದೈಹಿಕವಾಗಿ ಅಲ್ಲ. ನೀವು ಭೇಟಿ ಮಾಡುವಾಗ ಈ ಎಲ್ಲಾ ನಿಯಮಗಳನ್ನ ಪಾಲಿಸಿದರೆ ಖಂಡಿತವಾಗ್ಲೂ ಸಕ್ಸಸ್ ಆಗುತ್ತಿರಿ.
ಭಾವನೆಗಳಿಗೆ ಬೆಲೆ ಕೊಡದೆ ದೈಹಿಕವಾಗಿ ಮುಂದುವರೆದರೆ ಅದು ಅಪಾರ್ಥಕ್ಕೆ ಕಾರಣವಾಗಬಹುದು. ನೀವು ಮೊದಲು ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ಅವಶ್ಯಕವಾಗಿದೆ. ಮತ್ತೆ ಡೇಟಿಂಗ್ ನಲ್ಲಿ ಇರುವಾಗ ನೀವು ಪತ್ತೇದಾರಿ ಕೆಲಸವನ್ನು ಮಾಡಬೇಡಿ. ನಿಮ್ಮ ಸಂಗಾತಿಯನ್ನು ಅನುಮಾನಿಸಬೇಡಿ. ಅವರಲ್ಲಿ ನಂಬಿಕೆ ನೀಡಿ ಗೌರವವನ್ನು ಕೊಡಿ.