ದೇಶದಾದ್ಯಂತ ಇರುವ ದೇಶದ ಎಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ವರ್ಷಕ್ಕೆ 6000 ರೂಪಾಯಿಗಳನ್ನು ಹಾಕಲಾಗುತ್ತಿದೆ. ಆದರೆ ಈ ಬಗ್ಗೆ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿಗೊಳಿಸುವ ಮೂಲಕ ಎಲ್ಲ ರೈತರಿಗೆ ಬಿಗ್ ಶಾಕ್ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿ ವರ್ಷಕ್ಕೆ 6000 ಹಣಪಡೆದುಕೊಳ್ಳುತ್ತಿರುವ ಪ್ರತಿಯೊಬ್ಬ ರೈತರು ಕೂಡ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲಾ ಅಂದ್ರೆ ನಿಮಗೆ ಇನ್ನು ಮುಂದೆ ಹಣ ಬರಲ್ಲ.ಇಡೀ ದೇಶದಾದ್ಯಂತ ಇರುವ ರೈತರ ಖಾತೆಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2000 ಹಣ ಹಾಕುವ ಮಹತ್ವದ ಯೋಜನೆಯಾದ ಪಿಎಂ ಕಿಸಾನ್ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಲಾಗಿತ್ತು.
ಆದರೆ ರೈತರ ಖಾತೆಗಳಿಗೆ ಇದೇ ರೀತಿಯಾಗಿ ಹಣ ಬರುವುದು ಮುಂದುವರೆಯ ಬೇಕಾದ್ರೆ ಪ್ರತಿಯೊಬ್ಬ ರೈತರು ಕೂಡ ಕೇಂದ್ರ ಸರ್ಕಾರವು ಹೊಸ ರೂಲ್ಸ್ ಅನ್ನ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಪ್ರತಿಯೊಬ್ಬ ರೈತರು ಕೂಡ ಈ ಕೆಲಸ ಮಾಡುವುದರಿಂದ ಮುಂದೆ ಹಣ ಬರುವುದನ್ನ ನಿಲ್ಲಿಸುವುದಿಲ್ಲ. ಒಂದು ವೇಳೆ ಈ ಕೆಲಸ ಮಾಡಿದ ರೈತರಿಗೆ ಹಣ ಹಾಕುವುದಿಲ್ಲ ಎನ್ನುವ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಲಾಗಿತ್ತು. ಆಯಾ ತಾಲೂಕು ಮತ್ತು ಜಿಲ್ಲೆಗಳಲ್ಲಿ ಒಳಪಡುವ ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆ ಹಾಗೂ ಹೋಬಳಿ ಮಟ್ಟಗಳಲ್ಲಿ ರೈತರಿಗೆ ಈ ಕೆಲಸ ಮಾಡಿಕೊಳ್ಳಲು ತಿಳಿಸಲಾಗಿದೆ.ಇನ್ನು ಇ ಕೆವೈಸಿ ಮಾಡಿಸದೇ ಇರುವಂತಹ ರೈತರು ಅವರು ಶೀಘ್ರದಲ್ಲೇ ಕೆವೈಸಿ ಮಾಡಿಸಿಕೊಳ್ಳಬೇಕು. ಪಿಎಂ ಕಿಸಾನ್ ಮತ್ತು ಸಿಎಸ್‌ಸಿ ಮೂಲಕ ನೀವು ಕೆವೈಸಿ ಮಾಡಬಹುದು.
ನೀವು ಇ ಕೆವೈಸಿ ಮಾಡದಿದ್ದರೆ ನೀವು ವಾರ್ಷಿಕವಾಗಿ 6000 ರೂಪಾಯಿಗಳನ್ನು ಕಳೆದುಕೊಳ್ಳಬಹುದು. ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಕೆವೈಸಿ ಮಾಡಬಹುದು. ನೀವು ಈ ಅಪ್ಲಿಕೇಶನ್‌ನ ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಪಿಎಂ ಕಿಸಾನ್ ಮೂಲಕವೂ ನೀವು ಈ ಕೆವೈಸಿ ಮಾಡಬಹುದು. ನೀವು ಮೊದಲು ಆಧಾರ್ ಸಂಖ್ಯೆ ಮತ್ತು ಫಲಾನುಭವಿ ಐಡಿಯನ್ನು ನಮೂದಿಸುವ ಮೂಲಕಗೆ ಲಾಗಿನ್ ಆಗಬೇಕು. ಈಗ ನೀವು ನಿಮ್ಮ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಬೇಕು. ನಂತರ ನೀವು ಅಲ್ಲಿ ಕೇಳುವಂತಹ ಮಾಹಿತಿಯನ್ನು ಕೊಟ್ಟು ಲಾಗಿನ್ ಮಾಡಿಕೊಳ್ಳಬಹುದು. ಆರಂಭದಲ್ಲಿ ನಿಮಗೆ ಸ್ವಲ್ಪ ಕಷ್ಟ ಅನಿಸಿದರೂ ಕೂಡ ಇದೇ ಒಂದು ರೀತಿಯಾಗಿ ನೀವು ಸುಲಭವಾಗಿ ಈ ಒಂದು ಕೆಲಸವನ್ನು ಮುಗಿಸಬಹುದು ಇನ್ನ ಸುಲಭವಾಗಿ ನಿಮಗೆ ಅರ್ಥವಾಗಬೇಕೆಂದರೆ ಈ ಕೆಳಗಿನ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ.