ಸ್ವಂತ ವಾಹನ ಹೊಂದಿರುವ ಎಲ್ಲ ವಾಹನ ಮಾಲೀಕರಿಗೆ ಬಿಗ್ ಶಾಕ್ ಇದೆ. ಮುಂದಿನ ಜೂನ್ 1 ರಿಂದ ಕೆಲಸ ಮಾಡಿಲ್ಲ ಅಂದ್ರೆ ₹1000 ದಂಡ ಕರ್ನಾಟಕ ರಾಜ್ಯ ಸರ್ಕಾರದಿಂದ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿಗೊಳಿಸಿ ರಾಜ್ಯ ಸರ್ಕಾರ ಇಲಾಖೆಯು ಮಹತ್ವದ ಕ್ರಮ ತೆಗೆದುಕೊಂಡಿದೆ. ಕರ್ನಾಟಕದಲ್ಲಿರುವ ಎಲ್ಲ ವಾಹನ ಮಾಲೀಕರಿಗೆ ಈ ಹೊಸ ರೂಲ್ಸ್ ಕಡ್ಡಾಯವಾಗಿದ್ದು, ಕೊನೆಯವರೆಗೂ ನೋಡಿ ಇದೇ ಜೂನ್ 1 ರಿಂದ ಟ್ರಾಫಿಕ್ ಪೊಲೀಸರು ನಿಮ್ಮನ್ನ ಎಲ್ಲೆಂದರಲ್ಲಿ ಹಿಡಿಯಲಿದ್ದಾರೆ ದಂಡ ಕಟ್ಟಿಟ್ಟ ಬುತ್ತಿ. ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ಸೂಚಿಸಲಾಗಿದೆ. ಇದರ ಜೊತೆಗೆ ಈಗಾಗಲೇ ಎರಡು ಬಾರಿ ಕಾಲಾವಕಾಶ ಕೂಡ ನೀಡಲಾಗಿದೆ.

ಹೀಗಿದ್ದರೂ ರಾಜ್ಯದಲ್ಲಿ ವಾಹನ ಸವಾರರು HSRP ನಂಬರ್ ಪ್ಲೇಟ್ ಅಳವಡಿಕೆಗೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ದಂಡ ರುಚಿ ತೋರಿಸಿ ಆದ್ರು ನಂಬರ್ ಪ್ಲೇಟ್ ಅಳವಡಿಸುವಂತೆ ಮಾಡಲು ಆರ್‌ಟಿಒ ಅಧಿಕಾರಿಗಳು ಮುಂದಾಗಿದ್ದು, ಸದ್ಯದಲ್ಲಿಯೇ HSRP ನಂಬರ್ ಪ್ಲೇಟ್ ಅಳವಡಿಸಿ ಕೊಳ್ಳದ ವಾಹನ ಸವಾರರಿಗೆ ಸಂಕಷ್ಟ ಕಾದಿದೆ. ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಸುವಂತೆ ಈಗಾಗಲೇ ನಿಯಮ ರೂಪಿಸಲಾಗಿದೆ. ಆದರೆ, ಈ ನಿಯಮ ಜಾರಿಗೆ ಬಂದಾಗಿನಿಂದಲು ನಂಬರ್ ಪ್ಲೇಟ್ ನೋಂದಣಿಗೆ ವಾಹನ ಸವಾರರು ನಿರಾಸಕ್ತಿ ತೋರುತ್ತಿದ್ದಾರೆ.ಇಲಾಖೆಯ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ 2,00,00,000 ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ 36,00,000 ವಾಹನಗಳು ಮಾತ್ರ HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಂಡಿದೆ.

ಇನ್ನುಳಿದ ಲಕ್ಷಾಂತರ ವಾಹನ ಸವಾರರು ಗಾಡಿ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವ ಮನಸು ಮಾಡುತ್ತಿಲ್ಲ ಈಗಾಗಲೇ ಎರಡು ಬಾರಿ ಗಡುವನ್ನು ನೀಡಿದ್ದು, ಆರ್‌ಟಿಒ ಇನ್ನೊಮ್ಮೆ ಇದೆ. ಬರುವ 31 ರ ತನಕ ಮಾತ್ರ ಅವಧಿಯನ್ನು ವಿಸ್ತರಿಸಿದೆ. ಆದರೂ ಕೂಡ ವಾಹನ ಸವಾರರು ನೀರಸವಾಗಿ ಸ್ಪಂದಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 2,00,00,000 ವಾಹನಗಳಿವೆ. ಈ ಪೈಕಿ ಕೇವಲ 36,00,000 ವಾಹನಗಳು ಮಾತ್ರ ನೋಂದಣಿಯಾಗಿವೆ ಅಂದ್ರೆ ಅಂದಾಜು ಶೇಕಡಾ 18 ರಷ್ಟು ವಾಹನಗಳಿಗೆ HSRP ಅಳವಡಿಸಲಾಗಿದೆ. ದಾಖಲೆಗಳ ಪ್ರಕಾರವೇ ಇನ್ನು 1.64 ಕೋಟಿ ವಾಹನಗಳಿಗೆ ಹೊಸ ಫಲಕ ಅಳವಡಿಕೆ ಆಗಿಲ್ಲ ಇನ್ನು ಮೇ ಮೂವತ್ತೊಂದರಂದು. ಮೂರನೇ ಬಾರಿಗೆ ಕೊಟ್ಟ ಗಡುವು ಅಂತ್ಯವಾಗಿದ್ದು, ಇಲ್ಲಿಯವರಿಗೆ ಜನರ ಪ್ರತಿಕ್ರಿಯೆ ನೋಡಿ. ಸರ್ಕಾರಕ್ಕೆ ಪತ್ರ ಬರೆಯಲು ಆರ್‌ಟಿಒ ಅಧಿಕಾರಿಗಳು ಮುಂದಾಗಿದ್ದಾರೆ.

ಇನ್ನು ಇದುವರೆಗಿನ ಮಾಹಿತಿ ಪ್ರಕಾರ ಇನ್ನು ವಾಹನಗಳು ನೋಂದಣಿ ಉಳಿದಿದ್ದು, ಈ ವಾಹನ ಸವಾರರು ನಿಯಮದ ಪ್ರಕಾರ ಮೇ 31 ರೊಳಗೆ ಅಳವಡಿಸಿಕೊಳ್ಳದೆ ಇದ್ದರೆ ದಂಡವನ್ನು ವಿಧಿಸುವ ಪ್ರಕ್ರಿಯೆ ಆರಂಭ ಮಾಡಲು ಆರ್‌ಟಿಒ ಹಾಗು ಸರ್ಕಾರ ನಿರ್ಧರಿಸಿದೆ. ಹಾಗಿದ್ದರೆ ದಂಡ ಪ್ರಕ್ರಿಯೆ ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ. HSRP ನೋಂದಣಿ ಸಂಖ್ಯೆಯ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ ಮೊದಲ ಬಾರಿ ಐದುನೂರು ರೂಪಾಯಿ ದಂಡ ವಿಧಿಸಲಾಗುತ್ತೆ. ಅದೇ ವಾಹನಕ್ಕೆ ಎರಡನೇ ಬಾರಿ ₹1000 ದಂಡ ವಿಧಿಸಲಾಗುತ್ತೆ. ಇದಾದ ಮೇಲೂ ವಾಹನ ಸವಾರರು ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದಲ್ಲಿ ಸಿಕ್ಕಿ ಬೀಳುವ ಪ್ರತಿ ಬಾರಿಗೆ 1000 ದಂಡ ಕಟ್ಟುತ್ತಾ ಹೋಗಬೇಕು ಎಂದು ನಿಯಮ ರೂಪಿಸಲಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲಾಗುತ್ತಿದೆ.

Leave a Reply

Your email address will not be published. Required fields are marked *