ರಾಜ್ಯದಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬೆಳೆ ನಷ್ಟಕ್ಕಾಗಿ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನಿಂದ ಬಿಡುಗಡೆ ಮಾಡಿರುವಂತಹ ಅರ್ಹ ರೈತರಿಗೆ ವಿತರಿಸುವ ಸಂಬಂಧ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶವನ್ನು ಹೊರಡಿಸಿದೆ. ನೇರ ನಗದು ವರ್ಗಾವಣೆ ಮೂಲಕ ಅಂತಂದ್ರೆ ಡಿಬಿಟಿ ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ವರ್ಗಾಯಿಸಲು ಆದೇಶಿಸಲಾಗಿದೆ.ಈಗಾಗಲೇ ರಾಜ್ಯ ಸರ್ಕಾರ ಕಳೆದ ಜನವರಿಯಲ್ಲಿ ರೈತರಿಗೆ ಗರಿಷ್ಠ 2000 ರೂ ವರೆಗೆ ಮಧ್ಯಂತರ ಪರಿಹಾರ ಪಾವತಿಸಿದೆ.
ಈಗ ಆ ಮೊತ್ತ ಕಡಿತ ಮಾಡಿಕೊಂಡು ನಿಗದಿಯಾದ ಬಾಕಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಕ್ಕೆ ಸೂಚಿಸಲಾಗಿರುತ್ತದೆ. ಹಾಗೆಯೇ ರಾಜ್ಯದ 223 ಬರ ಪೀಡಿತ ತಾಲೂಕುಗಳ ಒಟ್ಟು 33,55,599 ರೈತರಿಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮುಖಾಂತರ ಜಮಾ ಮಾಡಲಾಗಿತ್ತು.ಯಾವ ಯಾವ ರೈತರು ಈಗಾಗಲೇ ರಾಜ್ಯ ಸರ್ಕಾರದಿಂದ ಬೆಳೆ ನಷ್ಟ ಪರಿಹಾರವನ್ನು ಪಡೆದುಕೊಂಡಿರೋ ಅಂತವರಿಗೆ ಇನ್ನು ಬಾಕಿ ಉಳಿದ ಬೆಳೆ ನಷ್ಟ ಪರಿಹಾರವನ್ನ ಇನ್ನು 23 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮುಖಾಂತರ ಜಮೆ ಮಾಡಲಾಗುತ್ತದೆ.
ಯಾವ ಬೆಳೆಗೆ ಎಷ್ಟು ಪರಿಹಾರವನ್ನ ನೀಡಲಾಗುತ್ತೆ ಅನ್ನೋದನ್ನ ನೋಡೋದಾದ್ರೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಗರಿಷ್ಠ 2:00 ಕ್ಕೆ ಮಿತಿಗೆ ಒಳಪಟ್ಟು ಬೆಳೆ ನಷ್ಟ ಪರಿಹಾರ ನಿಗದಿ ಮಾಡಲಾಗಿರುತ್ತದೆ.ಮಳೆಯಾಶ್ರಿತ ಬೆಳೆಗಳಿಗೆ 8500 ರೂಗಳನ್ನು ನಿಗದಿಪಡಿಸಲಾಗಿದೆ. ನೀರಾವರಿ ಪ್ರದೇಶದ ಬೆಳೆಗಳಿಗೆ 17,000 ರೂ ಗಳನ್ನು ನಿಗದಿಪಡಿಸಲಾಗಿದೆ. ಇದುವಾಗಿ ಬೆಳೆಗಳಿಗೆ ಅಂತಂದ್ರೆ ತೋಟಗಾರಿಕೆ ಬೆಳೆಗಳಿಗೆ 22,500 ನಿಗದಿಪಡಿಸಲಾಗಿರುತ್ತದೆ. ಬಿಡುಗಡೆ ಜೊತೆಗೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿದೆರುವ ಪದ ಅನುಭವಿ ರೈತರಿಗೆ ಈಗಾಗಲೇ ಪಾವತಿ ಆಗಿರುವ ಬೆಳೆ ಹಾನಿ, ಪರಿಹಾರದ ವಿವರ ಆಗುವ ನಿಯಮಾನುಸಾರ ಪ್ರಸ್ತುತ ಪಾವತಿಸುವ ಮೊತ್ತದ ವಿವರಗಳನ್ನು ಡಿಸಿ ಎಸಿ ತಹಸೀಲ್ದಾರ್ ಕಚೇರಿಗಳು ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಬೇಕು.
ಜೊತೆಗೆ ಆಯಾ ಜಿಲ್ಲಾಧಿಕಾರಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರಿಗೆ ಅಗತ್ಯ ಮಾಹಿತಿ ನೀಡಲು ತಹಸೀಲ್ದಾರ್ ಕಚೇರಿಗಳಲ್ಲಿ ಲಭ್ಯವಿದೆ ಹಾಗಾಗಿ ನೀವು ನಿಮ್ಮ ತಶೀಲ್ದಾರ ಕಚೇರಿಗೆ ಹೋಗಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ. ನಿಮಗೆ ಎಷ್ಟು ಹಣ ಬರಬೇಕು ಎಂದು ನಿಮಗೆ ಖಚಿತವಾಗುತ್ತದೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಆದರೂ ಕೂಡ ನಿಮ್ಮ ತಹಶೀಲ್ದಾರ ಕಚೇರಿಯನ್ನೇ ನೀವು ಸಂಪರ್ಕಿಸಿ.
https://youtu.be/KPCn-fzyWeA